ನವದೆಹಲಿ: ‘ಚಾಲೆಂಜಿಂಗ್ ಟೈಮ್ಸ್'ನಲ್ಲಿ ಸದ್ಗುರು ಅವರೊಂದಿಗೆ ಸ್ವಚ್ಚತಾ ವಾರಿಯರ್ಸ್ ಎಂಬ ಶೀರ್ಷಿಕೆಯ ವೆಬ್‌ನಾರ್ (ಆನ್ಲೈನ್ ಕಾರ್ಯಕ್ರಮ) ವನ್ನು ಇಶಾ ಫೌಂಡೇಶನ್‌ನ ಸಹಯೋಗದೊಂದಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸಿದೆ.
ಒಂದು ಗಂಟೆ ಅವಧಿಯ ಈ ವೆಬ್‌ನಾರ್‌ನಲ್ಲಿ ಸದ್ಗುರು ಉಜ್ಜಯಿನಿ, ಸೂರತ್, ಪೂರ್ವ ದೆಹಲಿ ಮಹಾನಗರ ಪಾಲಿಕೆ, ಆಗ್ರಾ ಮತ್ತು ಮಧುರೈ ಜಿಲ್ಲಾಧಿಕಾರಿಗಳು, ಮುನ್ಸಿಪಲ್ ಕಮೀಷನರ್‌ಗಳೊಂದಿಗೆ ಸಂವಹನ ನಡೆಸಿ, ಪ್ರಸ್ತುತ ಬಿಕ್ಕಟ್ಟು ಎದುರಿಸುತ್ತಿರುವ ಒಳನೋಟಗಳನ್ನು ನೀಡಿದರು.
ಕೋವಿಡ್-19 ತಡೆಯುವಲ್ಲಿ ಮುಂಚೂಣಿಯಲ್ಲಿರುವ ಸಫಾಯಿ ಕರ್ಮಚಾರಿಗಳಿಗೆ ಮೀಸಲಾಗಿರುವ ಅಧಿವೇಶನವನ್ನು ವಸತಿ ಸಚಿವಾಲಯಗಳ ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ ಅವರು ತರ್ಜುಮೆ ಮಾಡಿದರು. ನೈರ್ಮಲ್ಯ ಕಾರ್ಮಿಕರು ಕೇಳುವ ಹಲವಾರು ಪ್ರಶ್ನೆಗಳಿಗೆ ಆಧ್ಯಾತ್ಮಿಕ ಗುರುಗಳು ಉತ್ತರಿಸಿದರು.
ಈ ವೆಬ್‌ಕಾಸ್ಟ್ ಲೈವ್ ಯೂಟ್ಯೂಬ್ ಮೂಲಕ ಪ್ರಸಾರವಾಗುತ್ತದೆ. isha.co/MoHUAwithSadhguru ಈ ಲಿಂಕ್ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದು. ಇದರ ಹಿಂದಿ ಅನುವಾದದ ಪ್ರಸಾರವನ್ನು isha.co/MoHUAwithSadhguruinHindi ಯಲ್ಲಿಯೂ ವೀಕ್ಷಿಸಬಹುದು.
ದೇಶದ ಸ್ವಚ್ಛತೆಯ ಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುವಲ್ಲಿ ಸ್ವಚ್ಛ ಭಾರತ್ ಮಿಷನ್ (ಎಸ್‌ಬಿಎಂ) ವಹಿಸಿರುವ ನಿರ್ಣಾಯಕ ಪಾತ್ರವನ್ನು ಅಭಿನಂದಿಸುವ ಮೂಲಕ ಸದ್ಗುರು ಕಾರ್ಯಕ್ರಮ ಪ್ರಾರಂಭಿಸಿದರು. ಕಳೆದ ಐದು ವರ್ಷಗಳಲ್ಲಿ ಮಿಷನ್‌ನಲ್ಲಿ ಮುಂಚೂಣಿಯಲ್ಲಿರುವ ನೈರ್ಮಲ್ಯ ಕಾರ್ಮಿಕರ ಶ್ರಮವನ್ನು ಶ್ಲಾಘಿಸಿದರು. ಯುಎಲ್‌ಬಿ ಪ್ರತಿನಿಧಿಗಳು ಮತ್ತು ನೈರ್ಮಲ್ಯ ಕಾರ್ಯಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಜೊತೆಗೆ, ಸದ್ಗುರು ಸ್ವಚ್ಚತಾ ಯೋಧರನ್ನು ಪ್ರೇರೇಪಿಸುವ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತದಾದ್ಯಂತ 4,300ಕ್ಕೂ ಹೆಚ್ಚಿನ ನಗರ ಸ್ಥಳೀಯ ಸಂಸ್ಥೆಗಳು ಭಾಗವಹಿಸಿದ್ದವು. ಇದರಲ್ಲಿ ಮುನ್ಸಿಪಲ್ ಕಮೀಷನರ್‌ಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮೇಯರ್‌ಗಳಂತಹ ರಾಜಕೀಯ ಪ್ರತಿನಿಧಿಗಳು ಮತ್ತು ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು, ಸ್ವ-ಸಹಾಯ ಗುಂಪು ಸದಸ್ಯರು ಮತ್ತು ಎಲ್ಲಾ ಮುಂಚೂಣಿ ಕೋವಿಡ್ ಚಾಂಪಿಯನ್‌ಗಳು ಭಾಗವಹಿಸಿದ್ದರು.