ನವದೆಹಲಿ: ಇಂದು ದೆಹಲಿಯ ವಾಯು ಗುಣಮಟ್ಟವು ಕಳಪೆ ವಿಭಾಗದಲ್ಲಿ ದಾಖಲಾಗಿದ್ದು, ಗಾಳಿಯ ವೇಗ ಮತ್ತು ಲಘು ಮಳೆಯ ಹೆಚ್ಚಳದಿಂದಾಗಿ ಮುಂದಿನ ಎರಡು ದಿನಗಳಲ್ಲಿ ಗಮನಾರ್ಹವಾಗಿ ಸುಧಾರಿಸುವ ಸಾಧ್ಯತೆಯಿದೆ.
ನಗರದ ವಾಯು ಗುಣಮಟ್ಟದ ಸೂಚ್ಯಂಕ(ಎಕ್ಯೂಐ) ಬೆಳಿಗ್ಗೆ 9 ಗಂಟೆಗೆ 271 ಆಗಿತ್ತು. ನಿನ್ನೆಯ ಸರಾಸರಿ ಎಕ್ಯೂಐ 284 ಆಗಿತ್ತು.
ನೆರೆ ನಗರಗಳಾದ ಗಾಜಿಯಾಬಾದ್ (ಎಕ್ಯೂಐ 330), ಗ್ರೇಟರ್ ನೋಯ್ಡಾ (322) ಮತ್ತು ನೋಯ್ಡಾ(310) ವಾಯು ಗುಣಮಟ್ಟವನ್ನು ಅತ್ಯಂತ ಕಳಪೆ ವಿಭಾಗದಲ್ಲಿ ದಾಖಲಿಸಲಾಗಿದೆ.
0 ಮತ್ತು 50ರ ನಡುವಿನ ಎಕ್ಯೂಐ ಅನ್ನು "ಉತ್ತಮ", 51 ಮತ್ತು 100ರ ನಡುವಿನ ಎಕ್ಯೂಐ ಅನ್ನು "ತೃಪ್ತಿದಾಯಕ", 101 ಮತ್ತು 200ರ ನಡುವಿನ ಎಕ್ಯೂಐ ಅನ್ನು "ಮಧ್ಯಮ", 201 ಮತ್ತು 300ರ ನಡುವಿನ ಎಕ್ಯೂಐ ಅನ್ನು "ಕಳಪೆ", 301 ಮತ್ತು 400ರ ನಡುವಿನ ಎಕ್ಯೂಐ ಅನ್ನು "ತುಂಬಾ ಕಳಪೆ", ಮತ್ತು 401 ಮತ್ತು 500ರ ನಡುವಿನ ಎಕ್ಯೂಐ ಅನ್ನು "ತೀವ್ರ" ಎಂದು ಪರಿಗಣಿಸಲಾಗುತ್ತದೆ.