ನಿಸರ್ಗ ಚಂಡಮಾರುತಕ್ಕೆ ಸಿಲುಕಿ ನಲುಗಿದ ಹಡಗಿನ ಸಿಬ್ಬಂದಿ - ನಿಸರ್ಗ ಚಂಡಮಾರುತ ತಂದೊಡ್ಡಿದ ಸಂಕಷ್ಟ
ನಿಸರ್ಗ ಚಂಡಮಾರುತ ತಂದೊಡ್ಡಿದ ಸಂಕಷ್ಟದಿಂದಾಗಿ ಮಿರಿಯಾ ಬೀಚ್‌ನಲ್ಲಿ ಹಡಗು ಹಾಗೂ ಅದರ ಸಿಬ್ಬಂದಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.
ರತ್ನಗಿರಿ(ಮಹಾರಾಷ್ಟ್ರ): ನಿಸರ್ಗ ಚಂಡಮಾರುತ ತಂದೊಡ್ಡಿದ ಸಂಕಷ್ಟದಿಂದಾಗಿ ಸಮುದ್ರದ ಅಲೆಗಳ ಪ್ರಮಾಣ ಹೆಚ್ಚಾಗುತ್ತಿದ್ದು, ರತ್ನಗಿರಿ ಜಿಲ್ಲೆಯ ಮಿರಿಯಾ ಬೀಚ್‌ನಲ್ಲಿ ಸಿಲುಕಿಕೊಂಡಿರುವ ಮಧ್ಯಮ ಗಾತ್ರದ ಹಡಗೊಂದನ್ನ ದಡಕ್ಕೆ ಸೇರಿಸುವ ಕಾರ್ಯ ನಡೆಯುತ್ತಿದೆ.
ಕೊರೊನಾ ಮಹಾಮಾರಿಯ ನಡುವೆ ನಿಸರ್ಗ ಚಂಡಮಾರುತ ತಂದೊಡ್ಡಿರುವ ಆತಂಕ ತೀವ್ರವಾಗಿದ್ದು, ಕರ್ನಾಟಕದ ಕರಾವಳಿ ಭಾಗ ಸೇರಿದಂತೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ಈ ಚಂಡಮಾರುತಕ್ಕೆ ಸಾಕ್ಷಿಯಾಗಿದೆ. ಈ ವೇಳೆ ಮಿರಿಯಾ ಬೀಚ್ನ ಹಡಗೊಂದರಲ್ಲಿ ಸಿಲುಕಿಕೊಂಡಿರುವ 13 ಜನ ಸಿಬ್ಬಂದಿಯನ್ನು ಇತರ ಬೋಟ್ಗಳ ಸಹಾಯದಿಂದ ರಕ್ಷಿಸುವ ಕಾರ್ಯ ನಡೆಯುತ್ತಿದೆ.
ನಿಸರ್ಗ ಚಂಡಮಾರುತದಿಂದಾಗಿ ರತ್ನಗಿರಿ ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆಯ ಅಬ್ಬರ ತೀವ್ರವಾಗಿದ್ದು, ಸಮುದ್ರ ಮಟ್ಟದಲ್ಲಿನ ಗಾಳಿ ಮತ್ತು ಅಲೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ.