ETV Bharat / bharat

370ನೇ ವಿಧಿ ಮರು ಸ್ಥಾಪಿಸಲು ಹೋರಾಟ: ಈಟಿವಿ ಭಾರತದ ಸಂದರ್ಶನಲ್ಲಿ ಸಲ್ಮಾನ್ ಸಾಗರ್ ಸುಳಿವು

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಆರ್ಟಿಕಟ್​ 370 ವಿಧಿಯನ್ನು ಸ್ಥಾಪಿಸಲು ಆರು ಪ್ರಮುಖ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿವೆ ಎಂದು ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನಲ್ಲಿ ಎನ್‌ಸಿಯ ಯುವ ವಿಭಾಗದ ಪ್ರಾಂತೀಯ ಅಧ್ಯಕ್ಷ ಸಲ್ಮಾನ್ ಸಾಗರ್ ಹೇಳಿದ್ದಾರೆ.

370ನೇ ವಿಧಿ ಪುನಃ ಸ್ಥಾಪಿಸಲು ಹೋರಾಟ
370ನೇ ವಿಧಿ ಪುನಃ ಸ್ಥಾಪಿಸಲು ಹೋರಾಟ
author img

By

Published : Aug 25, 2020, 11:09 AM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಆರು ಪ್ರಮುಖ ರಾಜಕೀಯ ಪಕ್ಷಗಳು, ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರ ರದ್ದುಪಡಿಸಿದ 370ನೇ ವಿಧಿಯನ್ನು ಪುನಃ ಸ್ಥಾಪಿಸುವಂತೆ ಒತ್ತಾಯಿಸಲು ಸಮಗ್ರ ತಯಾರಿ ನಡೆಸುತ್ತಿವೆ.

ರಾಷ್ಟ್ರೀಯ ಸಮ್ಮೇಳನ (ಎನ್‌ಸಿ), ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಕಾಂಗ್ರೆಸ್ ಪ್ರತಿನಿಧಿಗಳ ನಿರ್ಣಯ ಗುಪ್ಕರ್ ಘೋಷಣೆ ಮೂಲಕ ಜಮ್ಮು ಮತ್ತು ಕಾಶ್ಮೀರದ ಪುನಃಸ್ಥಾಪನೆಗಾಗಿ ಹೇಗೆ ಹೋರಾಟ ನಡೆಸಬೇಕು ಎಂಬ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನಲ್ಲಿ ಈ ಕುರಿತು ಎನ್‌ಸಿಯ ಯುವ ವಿಭಾಗದ ಪ್ರಾಂತೀಯ ಅಧ್ಯಕ್ಷ ಸಲ್ಮಾನ್ ಸಾಗರ್ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಪಕ್ಷದ ಅಧ್ಯಕ್ಷ ಡಾ.ಫಾರೂಕ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹಿರಿಯ ನಾಯಕರ ಸಭೆ ಕಣಿವೆಯ ರಾಜಕೀಯ ಮುಖಂಡರನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದೆ. ಅಷ್ಟೇ ಅಲ್ಲದೆ, ಜಮ್ಮುವಿನ ಗಡಿಯನ್ನು ಗುರುತಿಸಿ ಎಂದು ಎನ್‌ಸಿಯ ಯುವ ವಿಭಾಗದ ಪ್ರಾಂತೀಯ ಅಧ್ಯಕ್ಷ ಸಲ್ಮಾನ್ ಸಾಗರ್ ಹೇಳಿದ್ದಾರೆ.

ಚರ್ಚೆಯ ಸಮಯದಲ್ಲಿ, ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಮೊಂಗಾ ಮತ್ತು ಪಿಡಿಪಿಯ ರೌಫ್ ಭಟ್ ಕೂಡ ಸಾಗರ್ ಅವರ ಅಭಿಪ್ರಾಯಗಳಿಗೆ ಒಪ್ಪಿಗೆ ಸೂಚಿಸಿದರು.

"ಎನ್‌ಸಿ ಅಧ್ಯಕ್ಷ ಮತ್ತು ಸಂಸತ್ ಸದಸ್ಯ ಡಾ.ಫಾರೂಕ್ ಅಬ್ದುಲ್ಲಾ ಅವರು ಕೈಗೊಂಡ ಉಪಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಈ ರಾಜಕೀಯ ಬದ್ಧತೆಯನ್ನು ಪ್ರಾಮಾಣಿಕತೆಯಿಂದ ಮುಂದುವರೆಸುವ ಅವಶ್ಯಕತೆಯಿದೆ "ಮೊಂಗಾ ಹೇಳಿದರು. ನಾಯಕರು ಈಗ ಒಂದು ವರ್ಷದಿಂದ ಬಂಧನದಲ್ಲಿದ್ದಾರೆ ಎಂಬ ಬಗ್ಗೆ ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿದರು.

"ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಹಲವಾರು ನಾಯಕರು ಇನ್ನೂ ಬಂಧನದಲ್ಲಿದ್ದಾರೆ, ಇದರಿಂದಾಗಿ ನಮ್ಮ ರಾಜಕೀಯ ಚಟುವಟಿಕೆಗಳನ್ನು ಪುನಾರಂಭಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರ ಆಡಳಿತವು ನಮಗೆ ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ. ನಾವು ರಾಜಕೀಯ ಚಟುವಟಿಕೆಯನ್ನು ಹೇಗೆ ಪುನಾರಂಭಿಸಬಹುದು ಎಂಬುದರ ಬಗ್ಗೆ ಯೋಚಿಸುತ್ತಿದ್ದೇವೆ" ಎಂದರು.

"ಬಿಜೆಪಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಜನರಿಗೆ ದ್ರೋಹ ಬಗೆದಿದೆ. ಅವರು ಜನರ ಭಾವನೆಗಳೊಂದಿಗೆ ಆಟ ಆಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ನಮ್ಮ ಪಕ್ಷವು ಎನ್‌ಸಿ, ಕಾಂಗ್ರೆಸ್ ಮತ್ತು ಕಣಿವೆಯ ಇತರ ಮುಖ್ಯವಾಹಿನಿಯ ಪಕ್ಷಗಳೊಂದಿಗೆ ಕೈಜೋಡಿಸುತ್ತದೆ" ಎಂದು ಹೇಳಿದರು.

"ಬಿಜೆಪಿ ಮತ್ತು ಆರೆಸ್ಸೆಸ್ ಒಟ್ಟಾಗಿ ಪಿತೂರಿ ನಡೆಸಿ ನಮ್ಮ ಪಕ್ಷವನ್ನು ಮುರಿಯಲು ಪ್ರಯತ್ನಿಸಿದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳು ಈಗ ಒಂದು ವರ್ಷದಿಂದ ಬಂಧನದಲ್ಲಿದ್ದಾರೆ. ಏಕೆ? ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ ವಿಧಾನವನ್ನು ಅಳವಡಿಸಿಕೊಂಡಿದೆ. ನಾವು ಇದರ ವಿರುದ್ಧ ರಾಜಕೀಯವಾಗಿ ಹೋರಾಡುತ್ತೇವೆ" ಎಂದರು.

"ನಮ್ಮ ಸಂಸದರಾದ ಗುಲಾಮ್ ನಬಿ ಆಜಾದ್, ಅಕ್ಬರ್ ಲೋನ್ ಮತ್ತು ಇತರರು ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನವನ್ನು ಸುಂದರವಾಗಿ ಸಮರ್ಥಿಸಿಕೊಂಡರು. ಜನರು ಜಮ್ಮು ಕಾಶ್ಮೀರದ ರಾಕಜೀಯ ನಾಯಕರ ರಾಜೀನಾಮೆಯನ್ನು ಕೇಳುವುದನ್ನು ನಿಲ್ಲಿಸಬೇಕು. ಅವರು ಕೇಂದ್ರದಲ್ಲಿ ಜಮ್ಮು ಮತ್ತು ಕಾಶ್ಮೀರದ ಧ್ವನಿಯಾಗಿದ್ದಾರೆ. ರಾಜಕೀಯ ವಿಷಯಗಳನ್ನು ರಾಜಕೀಯ ವೇದಿಕೆಗಳ ಮೂಲಕ ಮಾತ್ರ ಗೆಲ್ಲಬಹುದು" ಎಂದು ಸಾಗರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.