ಪುಣೆ: ಮಹಾರಾಷ್ಟ್ರದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಕಳ್ಳತನವಾಗಿದ್ದ ಕಾರೊಂದರಲ್ಲಿ ಕಳ್ಳರು ಪತ್ರ ಬರೆದು, ಆ ಕಾರನ್ನು ಮಾಲೀಕನಿಗೆ ತಲುಪಿಸಿ ಎಂದು ಹೇಳಿರುವ ಘಟನೆ ಪುಣೆಯ ಭೀಮಾ ಕೊರೊಗಾಂನಲ್ಲಿ ನಡೆದಿದೆ.
ಪುಣೆ ನಿವಾಸಿ ವಿಜಯ್ ಗವಾನೆ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದಾರೆ. ಇತ್ತಿಚೇಗೆ ತನ್ನ ಚಾಲಕ ಕಾರು ತೆಗೆದುಕೊಂಡು ಭೀಮಾ ಕೊರೇಗಾಂ ಗ್ರಾಮದಲ್ಲಿರುವ ಮನೆಯೊಂದರ ಮುಂದೆ ನಿಲ್ಲಿಸಿದ್ರು. ಕೆಲವರು ಆ ಕಾರನ್ನು ಕದ್ದೊಯ್ದಿದ್ದರು.
ಏನಾಯ್ತೋ ಏನೋ ತಿಳಿದಿಲ್ಲ, ಕಳ್ಳರು ತಮ್ಮ ಮನಸ್ಸನ್ನು ಬದಲಾಯಿಸಿಕೊಂಡು ಕದ್ದ ಕಾರನ್ನು ಅಹ್ಮದ್ನಗರದಲ್ಲಿ ಬಿಟ್ಟು ಹೋಗಿದ್ದಾರೆ. ಆದ್ರೆ ಕಾರಿನಲ್ಲಿ ಪೊಲೀಸರಿಗೆ ಪತ್ರವೊಂದು ಸಿಕ್ಕಿದೆ. ಈ ಕಾರನ್ನು ಸಂಬಂಧಿತ ಟ್ರಾವೆಲ್ ಏಜೆನ್ಸಿ ಮಾಲೀಕರಿಗೆ ತಲುಪಿಸಬೇಕೆಂದು ಕಳ್ಳರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಕಳ್ಳರ ಮನವಿಗೆ ಸ್ಪಂಧಿಸಿದ ಪೊಲೀಸರು ಕಾರನ್ನು ಸಂಬಂಧಪಟ್ಟ ಮಾಲೀಕನಿಗೆ ಹಸ್ತಾಂತರಿಸಿದ್ದಾರೆ. ಆದ್ರೆ ಕಳ್ಳರು ಕಾರನ್ನು ಬಿಟ್ಟು ಅದರಲ್ಲಿದ್ದ 55 ಸಾವಿರ ಬೆಲೆ ಬಾಳುವ ವಸ್ತಗಳನ್ನ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.