ETV Bharat / bharat

ಮತ್ತೊಂದು ಸಾಂಕ್ರಾಮಿಕ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು: ದಲೈ ಲಾಮಾ

ನಾವೀಗ ಕೊರೊನಾ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇದು ನಾವು ಹಿಂದೆ ಮಾಡಿದ ಕರ್ಮದ ಫಲ. ಭವಿಷ್ಯದಲ್ಲಿ ಇಂತಹ ಮತ್ತೊಂದು ಸಾಂಕ್ರಾಮಿಕ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಟಿಬೆಟಿಯನ್​ ಧರ್ಮಗುರು ದಲೈ ಲಾಮಾ ಕರೆ ನೀಡಿದ್ದಾರೆ.

Dalai Lama
ದಲೈ ಲಾಮಾ
author img

By

Published : Oct 10, 2020, 3:33 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ಕೋವಿಡ್​ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್​​ಗಳ ಕಾರ್ಯವನ್ನು ಶ್ಲಾಘಿಸಿರುವ ಬೌದ್ಧ ಧರ್ಮ ಪ್ರತಿಪಾದಕ, ಟಿಬೆಟಿಯನ್​ ಧರ್ಮಗುರು ದಲೈ ಲಾಮಾ, ಇಂತಹ ಇನ್ನೊಂದು ಸಾಂಕ್ರಾಮಿಕ ರೋಗ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಾವೀಗ ಕೊರೊನಾ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ, ಇದು ಬಹಳ ದುಃಖಕರ ಸಂಗತಿಯಾಗಿದೆ. ಈಗ ಏನಾಗಿದೆಯೇ ಅದು ನಾವು ಹಿಂದೆ ಮಾಡಿದ ಕರ್ಮದ ಫಲ, ಅದನ್ನು ಬದಲಾಯಿಸಲಾಗುವುದಿಲ್ಲ. ಆದರೂ ಭವಿಷ್ಯದಲ್ಲಿ ಇಂತಹ ಮತ್ತೊಂದು ಪರಿಸ್ಥಿತಿ ಬರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿಶ್ವ ಮಾನಸಿಕ ಆರೋಗ್ಯ ದಿನವಾದ ಇಂದು ದಲೈ ಲಾಮಾ ಸಂದೇಶ ಸಾರಿದ್ದಾರೆ.

ಪ್ರತಿದಿನ ಬೆಳಗ್ಗೆ ನಾನು ಮಂತ್ರಗಳನ್ನು ಪಠಿಸುತ್ತೇನೆ, ಈ ಸಾಂಕ್ರಾಮಿಕ ಆದಷ್ಟು ಬೇಗನೆ ಕೊನೆಗೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ಅಭ್ಯಾಸಗಳನ್ನು ವಿಶ್ವದ ಒಳಿತಿಗಾಗಿ, ವಿಶೇಷವಾಗಿ ಭಾರತದ ಒಳಿತಿಗಾಗಿ ಅರ್ಪಿಸುತ್ತೇನೆ ಟಿಬೆಟಿಯನ್ ಧರ್ಮಗುರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.