ETV Bharat / bharat

ಸುಶಾಂತ್ ಸಾವು ಪ್ರಕರಣ: 1 ಲಕ್ಷಕ್ಕೂ ಹೆಚ್ಚು ಅನುಮಾನಾಸ್ಪದ ಟ್ವಿಟ್ಟರ್ ಖಾತೆಗಳನ್ನು ಪತ್ತೆಹಚ್ಚಿದ ಸೈಬರ್ ತಜ್ಞರು - ಋಣಾತ್ಮಕ ಟ್ವೀಟ್ / ರಿಟ್ವೀಟ್ ಮತ್ತು ಕಮೆಂಟ್​

ನಕಲಿ ಟ್ವಿಟ್ಟರ್ ಖಾತೆಗಳ ಮೂಲಕ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ಕುರಿತು ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರ ವಿರುದ್ಧ ಋಣಾತ್ಮಕ ಟ್ವೀಟ್/ರಿಟ್ವೀಟ್ ಮತ್ತು ಕಮೆಂಟ್​ಗಳನ್ನು ಸೈಬರ್​ ತಜ್ಞರು ಪತ್ತೆ ಮಾಡಿದ್ದಾರೆ.

mh police
mh police
author img

By

Published : Nov 4, 2020, 8:27 AM IST

ಮುಂಬೈ (ಮಹಾರಾಷ್ಟ್ರ): ಸೈಬರ್ ತಜ್ಞರ ತಂಡವು 1.5 ಲಕ್ಷಕ್ಕೂ ಹೆಚ್ಚು ಟ್ವಿಟ್ಟರ್ ಖಾತೆಗಳನ್ನು ಕಂಡುಹಿಡಿದಿದ್ದು, ಅವುಗಳಲ್ಲಿ ಸುಮಾರು 80%ದಷ್ಟು ಖಾತೆಗಳು ಅನುಮಾನಾಸ್ಪದವಾಗಿವೆ ಎಂದು ತಿಳಿದುಬಂದಿದೆ.

ಈ ಖಾತೆಗಳ ಮೂಲಕ ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ಕುರಿತು ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರ ವಿರುದ್ಧ ಋಣಾತ್ಮಕ ಟ್ವೀಟ್ /ರಿಟ್ವೀಟ್ ಮತ್ತು ಕಮೆಂಟ್​ಗಳನ್ನು ಮಾಡಲಾಗುತ್ತಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಮಾನಹಾನಿಕರ ವಿಷಯಗಳನ್ನು ಹರಡಲು ಬಳಸಲಾಗುತ್ತಿದ್ದ ಅನೇಕ ಟ್ವಿಟ್ಟರ್ ಖಾತೆಗಳು ನಕಲಿಯಾಗಿದ್ದು, ವಿವಿಧ ದೇಶಗಳ ಮೂಲಕ ಇವುಗಳನ್ನು ಕಂಟ್ರೋಲ್ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.