ETV Bharat / bharat

ಕಾಂಗ್ರೆಸ್‌ ಸೇರಿ ತಂದೆ ಇನ್ನಷ್ಟು ಒಳ್ಳೇ ಕೆಲಸ ಮಾಡಲಿ..-ಬಿಟೌನ್ ನಟಿ ಸೋನಾಕ್ಷಿ

ಬಿಹಾರದ ಪಟ್ನಾ ಸಾಹಿಬ್‌ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಶತ್ರುಘ್ನ ಸಿನ್ಹಾ, ಸದ್ಯ ಕಮಲ ತೊರೆದು ಕೈಗೆ ಜೈ ಅಂದಿದ್ದಾರೆ. ಈ ಬಗ್ಗೆ ಸಿನ್ಹಾ ಪುತ್ರಿ, ಬಿಟೌನ್ ನಟಿ ಸೋನಾಕ್ಷಿ ಮೌನ ಮುರಿದಿದ್ದು, ತಂದೆ ನಿರ್ಧಾರವನ್ನ ಬೆಂಬಲಿಸಿದ್ದಾರೆ.

author img

By

Published : Mar 30, 2019, 7:47 AM IST

Updated : Mar 30, 2019, 8:12 AM IST

ನಟಿ ಸೋನಾಕ್ಷಿ

ಮುಂಬೈ : ತಾವಿದ್ದ ವ್ಯವಸ್ಥೆಯಲ್ಲಿ ಖುಷಿಯಿಲ್ಲ ಅಂದ್ರೇ ಬದಲಾವಣೆ ಬಯಸಿ ಅದರಿಂದ ಹೊರಗೆ ಬರೋದು ಒಳ್ಳೇದು. ಅದನ್ನ ನಮ್ಮ ತಂದೆ ಈಗ ಮಾಡಿದ್ದಾರೆ. ಇದು ಅವರ ಆಯ್ಕೆ. ಕಾಂಗ್ರೆಸ್‌ ಜತೆಗೆ ಸೇರಿ ತಂದೆ ಮತ್ತೊಂದಿಷ್ಟು ಒಳ್ಳೇ ಕೆಲಸ ಮಾಡಲಿ. ಯಾವುದೇ ಕಾರಣಕ್ಕೂ ತುಳಿತಕ್ಕೊಳಗಾಗದಿರಲಿ ಅಂತಾ ಶತ್ರುಘ್ನ ಸಿನ್ಹಾ ಪುತ್ರಿ ಬಿಟೌನ್‌ ನಟಿ ಸೋನಾಕ್ಷಿ ಸಿನ್ಹಾ ಆಶಿಸಿದ್ದಾರೆ.

ಬಿಜೆಪಿಯಲ್ಲಿದ್ದರೂ ಆ ಪಕ್ಷದಲ್ಲಿನ ನಾಯಕತ್ವದ ವಿರುದ್ಧವೇ ಬಂಡಾಯವೆದ್ದು ರೆಬೆಲಾಗಿದ್ದ ಸಂಸದ ಶತ್ರುಘ್ನ ಸಿನ್ಹಾ ಈಗ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ಬಾಲಿವುಡ್‌ ಲೆಜೆಂಡ್ ಶತ್ರುಘ್ನ ಸಿನ್ಹಾ ಕಾಂಗ್ರೆಸ್‌ ಸೇರ್ಪಡೆ ಕುರಿತಂತೆ ಪ್ರತಿಕ್ರಿಯಿಸಿರುವ ಪುತ್ರಿ ಸೋನಾಕ್ಷಿ ಸಿನ್ಹಾ, ಬಹಳ ಹಿಂದೆಯೇ ತಂದೆ ಈ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ, ತಡವಾದರೂ ಒಳ್ಳೇ ನಿರ್ಧಾರವನ್ನೇ ಕೈಗೊಂಡಿದ್ದಾರೆ, ಅದಕ್ಕಾಗಿ ತಾವೂ ಕೂಡ ತಂದೆ ನಡೆಯನ್ನ ಗೌರವಿಸುವುದಾಗಿ ಹೇಳಿದ್ದಾರೆ.

Shatrughan Sinha
ರಾಹುಲ್ ಗಾಂಧಿ ಜೊತೆ ಶತ್ರುಘ್ನ ಸಿನ್ಹಾ

72 ವರ್ಷದ ಶತ್ರುಘ್ನ ಸಿನ್ಹಾ ಬಿಜೆಪಿ ತೊರೆಯುತ್ತಾರೆ ಅಂತಾ ಬಹಳ ದಿನಗಳಿಂದಲೂ ಕೇಳಿ ಬರುತ್ತಿದ್ದ ಮಾತಾಗಿತ್ತು. ಗುರುವಾರವಷ್ಟೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನ ಅವರ ನಿವಾಸದಲ್ಲಿಯೇ ಭೇಟಿಯಾಗಿದ್ದ ಶತ್ರುಘ್ನ ಸಿನ್ಹಾ, ಮಾತುಕತೆ ನಡೆಸಿದ್ದರು. ಹೊಸ ನಾಯಕತ್ವದಲ್ಲಿ ಹೊಸ ರಾಜಕೀಯ ಆರಂಭ ಅಂತಾ ಶತ್ರುಘ್ನ ಸಿನ್ಹಾ ಹೇಳಿಕೊಂಡಿದ್ದರು. ಶತ್ರುಘ್ನ ಸಿನ್ಹಾ ಬಿಹಾರದ ಪಟ್ನಾ ಸಾಹಿಬ್‌ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈಗ ಕಾಂಗ್ರೆಸ್‌ನಿಂದ 3ನೇ ಬಾರಿ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.

Intro:Body:Conclusion:
Last Updated : Mar 30, 2019, 8:12 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.