ETV Bharat / bharat

ರೇಪ್​ ಇನ್​ ಇಂಡಿಯಾ ಎಂದ ರಾಹುಲ್​ ವಿರುದ್ಧ ಸ್ಮೃತಿ ಇರಾನಿ ದೂರು..

ಜಾರ್ಖಂಡ್​ ಚುನಾವಣಾ ರ್ಯಾಲಿಯಲ್ಲಿ ರೇಪ್​ ಇನ್​ ಇಂಡಿಯಾ ಎಂದು ಹೇಳಿಕೆ ನೀಡಿರುವ ವಯನಾಡ್​ ಸಂಸದ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಸಚಿವೆ ಸ್ಮೃತಿ ಇರಾನಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ.

Smruti irani complaint against rahul gandhi

author img

By

Published : Dec 13, 2019, 11:02 PM IST

ನವದೆಹಲಿ: ಜಾರ್ಖಾಂಡ್‌ನ ಚುನಾವಣಾ ರ್ಯಾಲಿಯಲ್ಲಿ ರೇಪ್​ ಇನ್​ ಇಂಡಿಯಾ ಎಂದು ಹೇಳಿಕೆ ನೀಡಿರುವ ವಯನಾಡ್​ ಸಂಸದ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಸಚಿವೆ ಸ್ಮೃತಿ ಇರಾನಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ.

  • Union Minister and BJP leader Smriti Irani: We have registered our objection against the remark of Rahul Gandhi. Election Commission has assured us that they will follow the legal procedure and do justice. pic.twitter.com/lNnvvy3JYj

    — ANI (@ANI) December 13, 2019 " class="align-text-top noRightClick twitterSection" data=" ">

ಅತ್ಯಾಚಾರವನ್ನೂ ಕೂಡ ರಾಜಕೀಯ ವಿಷಯವಾಗಿ ರಾಹುಲ್​​ ಗಾಂಧಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ರಾಹುಲ್​ ಗಾಂಧಿ ನೀಡಿರುವ ಹೇಳಿಕೆ ಲೋಕಸಭೆ ಅಧಿವೇಶನದಲ್ಲೂ ಸಹ ಕೋಲಾಹಲಕ್ಕೆ ಕಾರಣವಾಯಿತು. ಅಲ್ಲದೆ, ಹೇಳಿಕೆಯನ್ನು ಬಿಜೆಪಿ ಖಂಡಿಸಿತು. ಕ್ಷಮೆ ಕೇಳುವಂತೆ ಆಗ್ರಹಿಸಿತು.

ಆದರೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರಾಹುಲ್​ ಗಾಂಧಿ, ಈ ಮೊದಲು ಅತ್ಯಾಚಾರ ಕುರಿತು ಪ್ರಧಾನಿ ಮೋದಿ ಅವರು ಹೇಳಿಕೆ ನೀಡಿದ್ದಾರೆ ಎಂದು ಟ್ವಿಟರ್​ನಲ್ಲಿ ಮೋದಿ ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.