ETV Bharat / bharat

ನಾಲ್ಕು ವರ್ಷಗಳ ಬಳಿಕ ಬೆಳ್ಳಿಗೆ ಬಂತು ಭಾರೀ ಬೇಡಿಕೆ...! ಕಾರಣ ಏನು? - ಬೇಡಿಕೆ

ಮೂಲಗಳು ತಿಳಿಸುವ ಪ್ರಕಾರ ಕೇಂದ್ರ ಸರ್ಕಾರ ಭಾರತೀಯ ಸಣ್ಣ ರೈತರ ಸಂಕಷ್ಟಗಳನ್ನ ದೂರ ಮಾಡಲು 75 ಸಾವಿರ ಕೋಟಿ ರೂ ಅನುದಾನ ಘೋಷಣೆ ಮಾಡಿರುವುದು ಬೆಳ್ಳಿ ಬೇಡಿಕೆ ಹೆಚ್ಚಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಬೆಳ್ಳಿ
author img

By

Published : Mar 20, 2019, 1:18 PM IST

ನವದೆಹಲಿ: ಹಲವು ವರ್ಷಗಳಿಂದ ಭಾರಿ ಇಳಿಕೆಯತ್ತ ಮುಖ ಮಾಡಿದ್ದ ಬೆಳ್ಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಬಂದಿದೆ. ಬಡವರ ಲೋಹ ಎಂದೇ ಕರೆಯಿಸಿಕೊಳ್ಳುವ ಬೆಳ್ಳಿಗೆ 2015 ರ ಬಳಿಕ ಇದೇ ಮೊದಲ ಬಾರಿಗೆ ಡಿಮ್ಯಾಂಡ್​ ಕ್ರಿಯೇಟ್​ ಆಗಿದೆ.

ಭಾರತದಲ್ಲಿ ಈಗ ಚುನಾವಣಾ ಪರ್ವ ಆರಂಭವಾಗಿದ್ದರೆ ಮತ್ತೊಂದೆಡೆ ಆರ್ಥಿಕತೆಯಲ್ಲೂ ಚೇತರಿಕೆ ಕಂಡು ಬರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೊಂದು ಮೂಲಗಳು ತಿಳಿಸುವ ಪ್ರಕಾರ ಕೇಂದ್ರ ಸರ್ಕಾರ ಭಾರತೀಯ ಸಣ್ಣ ರೈತರ ಸಂಕಷ್ಟಗಳನ್ನ ದೂರ ಮಾಡಲು 75 ಸಾವಿರ ಕೋಟಿ ರೂ ಅನುದಾನ ಘೋಷಣೆ ಮಾಡಿರುವುದು ಬೆಳ್ಳಿ ಬೇಡಿಕೆ ಹೆಚ್ಚಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವಾದ ಏನೇ ಇರಲಿ, 2018 ರಲ್ಲಿ ಭಾರತ 6,442 ಟನ್​ ಬೆಳ್ಳಿಯನ್ನ ಖರೀದಿ ಮಾಡಿತ್ತು. ಆದರೆ ಈ ಬಾರಿ ಮೂರೇ ತಿಂಗಳಲ್ಲಿ ಈ ಪ್ರಮಾಣ 6590 ಟನ್​​ ಗೆ ತಲುಪಿದೆ. 2015 ರಲ್ಲಿ ಭಾರತ 7,579 ಟನ್​ ಬೆಳ್ಳಿ ಖರೀದಿಸಿತ್ತು. ಇದು ಭಾರತ ಖರೀದಿಸಿ ಆಲ್​ ಟೈಮ್​ ಹೈ ಖರೀದಿ ಎಂದು ದಾಖಲಾಗಿತ್ತು.

ಇದೀಗ ಆ ದಾಖಲೆಯನ್ನ ಮುರಿಯಲು ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಬೆಳ್ಳಿ ಬೆಳೆ 38 ರಿಂದ 40 ಸಾವಿರದ ಆಸುಪಾಸಿನಲ್ಲಿ ನಿಗದಿ ಆಗಿತ್ತು. 2011 ರಲ್ಲಿ ಬೆಳ್ಳಿ ಬೆಳೆ 75 ರಿಂದ 80 ಸಾವಿರದ ಗಡಿ ಮುಟ್ಟಿತ್ತು. ಅದೇ ದಾಖಲೆ.. ಆ ಬಳಿಕ ಬೆಳ್ಳಿ ಬೆಲೆ ಏರಿಕೆ ಆಗಲೇ ಇಲ್ಲ.

ಇನ್ನು ಬಂಗಾರದ ಆಮದಿನಲ್ಲಿ ಕಳೆದ ವರ್ಷ ಭಾರಿ ಇಳಿಕೆ ಕಂಡು ಬಂದಿದೆ. ಆದರೆ, ಶೇ 30 ರಷ್ಟು ಬೆಳ್ಳಿ ಆಮದಿನಲ್ಲಿ ಹೆಚ್ಚಳ ಕಂಡು ಬಂದಿದೆ. ಬೆಳ್ಳಿ ಬೆಲೆ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ಜನರು, ರೈತಾಪಿ ವರ್ಗ ಬೆಳ್ಳಿ ಖರೀದಿಯಲ್ಲಿ ತೊಡಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

Intro:Body:

ನಾಲ್ಕು ವರ್ಷಗಳ ಬಳಿಕ ಬೆಳ್ಳಿಗೆ ಬಂತು ಭಾರೀ ಬೇಡಿಕೆ...!! ಕಾರಣ ಏನು?

ನವದೆಹಲಿ:   ಹಲವು ವರ್ಷಗಳಿಂದ ಭಾರಿ ಇಳಿಕೆಯತ್ತ ಮುಖ  ಮಾಡಿದ್ದ ಬೆಳ್ಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಬಂದಿದೆ.   ಬಡವರ ಲೋಹ ಎಂದೇ ಕರೆಯಿಸಿಕೊಳ್ಳುವ  ಬೆಳ್ಳಿಗೆ 2015 ರ ಬಳಿಕ ಇದೇ ಮೊದಲ ಬಾರಿಗೆ ಡಿಮ್ಯಾಂಡ್​ ಕ್ರಿಯೇಟ್​ ಆಗಿದೆ.  

ಭಾರತದಲ್ಲಿ ಈಗ ಚುನಾವಣಾ ಪರ್ವ ಆರಂಭವಾಗಿದ್ದರೆ ಮತ್ತೊಂದೆಡೆ ಆರ್ಥಿಕತೆಯಲ್ಲೂ ಚೇತರಿಕೆ ಕಂಡು ಬರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  ಇನ್ನೊಂದು ಮೂಲಗಳು ತಿಳಿಸುವ ಪ್ರಕಾರ ಕೇಂದ್ರ ಸರ್ಕಾರ ಭಾರತೀಯ ಸಣ್ಣ ರೈತರ ಸಂಕಷ್ಟಗಳನ್ನ ದೂರ ಮಾಡಲು 75 ಸಾವಿರ ಕೋಟಿ ರೂ ಅನುದಾನ ಘೋಷಣೆ ಮಾಡಿರುವುದು ಬೆಳ್ಳಿ ಬೇಡಿಕೆ ಹೆಚ್ಚಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ವಾದ ಏನೇ ಇರಲಿ,  2018 ರಲ್ಲಿ ಭಾರತ 6,442 ಟನ್​ ಬೆಳ್ಳಿಯನ್ನ ಖರೀದಿ ಮಾಡಿತ್ತು.  ಆದರೆ ಈ ಬಾರಿ ಮೂರೇ ತಿಂಗಳಲ್ಲಿ  ಈ ಪ್ರಮಾಣ 6590 ಟನ್​​ ಗೆ ತಲುಪಿದೆ.   2015 ರಲ್ಲಿ ಭಾರತ 7,579 ಟನ್​ ಬೆಳ್ಳಿ ಖರೀದಿಸಿತ್ತು. ಇದು  ಭಾರತ ಖರೀದಿಸಿ ಆಲ್​ ಟೈಮ್​ ಹೈ ಖರೀದಿ ಎಂದು ದಾಖಲಾಗಿತ್ತು.

ಇದೀಗ ಆ ದಾಖಲೆಯನ್ನ ಮುರಿಯಲು  ಸಜ್ಜಾಗುತ್ತಿರುವಂತೆ ಕಾಣುತ್ತಿದೆ.   ಕಳೆದ ಎರಡು ವರ್ಷಗಳಲ್ಲಿ ಬೆಳ್ಳಿ ಬೆಳೆ 38 ರಿಂದ 40 ಸಾವಿರದ ಆಸುಪಾಸಿನಲ್ಲಿ ನಿಗದಿ ಆಗಿತ್ತು.  2011 ರಲ್ಲಿ ಬೆಳ್ಳಿ ಬೆಳೆ 75 ರಿಂದ 80 ಸಾವಿರದ ಗಡಿ ಮುಟ್ಟಿತ್ತು. ಅದೇ ದಾಖಲೆ.. ಆ ಬಳಿಕ ಬೆಳ್ಳಿ ಬೆಲೆ ಏರಿಕೆ ಆಗಲೇ ಇಲ್ಲ.   

ಇನ್ನು ಬಂಗಾರದ ಆಮದಿನಲ್ಲಿ ಕಳೆದ ವರ್ಷ ಭಾರಿ ಇಳಿಕೆ ಕಂಡು ಬಂದಿದೆ.  ಆದರೆ, ಶೇ 30 ರಷ್ಟು ಬೆಳ್ಳಿ ಆಮದಿನಲ್ಲಿ ಹೆಚ್ಚಳ ಕಂಡು ಬಂದಿದೆ. ಬೆಳ್ಳಿ ಬೆಲೆ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ಜನರು, ರೈತಾಪಿ ವರ್ಗ ಬೆಳ್ಳಿ ಖರೀದಿಯಲ್ಲಿ ತೊಡಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ.   

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.