ETV Bharat / bharat

ನೆಹರೂ ದೂಷಿಸುವವರು, ಆತ್ಮಾವಲೋಕನ ಮಾಡಿಕೊಳ್ಳಲಿ: ಪ್ರಧಾನಿಗೆ ಸವಾಲೆಸೆದ ಶಿವಸೇನೆ

author img

By

Published : Jun 19, 2020, 3:02 PM IST

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಹಿಂಸಾತ್ಮಕವಾಗಿ ಚೀನಾ ಸೈನಿಕರು 20 ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಸಾಮ್ನಾ ಸಂಪಾದಕೀಯ ಬರೆದಿದೆ. ಪ್ರಧಾನಿ 56 ಇಂಚಿನ ಎದೆಯ ಬಗ್ಗೆ ಪ್ರಶ್ನಿಸಿದೆ.

Shiv Sena targets PM Modi over killing of 20 Indian soldiers in Ladakh face-off
ಮುಖ್ಯಮಂತ್ರಿ ಉದ್ಧವ್​ ಠಾಕ್ರೆ

ಮುಂಬೈ (ಮಹಾರಾಷ್ಟ್ರ): ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಶಿವಸೇನೆ ತನ್ನ 'ಸಾಮ್ನಾ' ಮುಖವಾಣಿಯಲ್ಲಿ ಲಡಾಖ್​​​​ನ ಗಾಲ್ವನ್​​ ಕಣಿವೆಯಲ್ಲಿ ಭಾರತದ ಸೈನಿಕರ ಮೇಲೆ ಚೀನಾ ಸೈನಿಕರು ದಾಳಿ ನಡೆಸಿದ ಘಟನೆಯನ್ನು ಉಲ್ಲೇಖಿಸಿದೆ.

ಸುಮ್ಮನೆ ಜವಾಹರಲಾಲ್​ ನೆಹರೂ ಅವರನ್ನು ಟೀಕಿಸಿ, ದೂಷಿಸುತ್ತಿರುವರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡರೆ ಹುತಾತ್ಮರಾದ ಸೈನಿಕರ ತ್ಯಾಗಕ್ಕೆ ಅರ್ಥ ಸಿಗಲಿದೆ ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಹೇಳಿದೆ.

ಗಡಿಯಲ್ಲಿ ಏಕಾಏಕಿ ಭಾರತದ ಸೈನಿಕರನ್ನು ಸುತ್ತುವರೆದ ಚೀನಾ ಸೈನಿಕರು, ಮುಳ್ಳು ತಂತಿಯಿಂದ ಗದೆ ಸೇರಿದಂತೆ ಕಬ್ಬಿಣ ರಾಡ್​​​​​ಗಳಿಂದ ಭೀಕರ ದಾಳಿ ನಡೆಸಿದರು. ಕೆಲವು ಯೋಧರನ್ನು ಅಪಹರಿಸಿದರು. ಆದರೆ, ಯೋಜಿತ ದಾಳಿ ಕುರಿತು ಭಾರತದ ಯೋಧರಿಗೆ ಗೊತ್ತಿರಲಿಲ್ಲ.

ಈ ಹಿಂದೆ ಪಾಕಿಸ್ತಾನದ ಸೇನೆಯೂ ನಮ್ಮ ಸೈನಿಕರ ಶಿರಚ್ಛೇದ ಮಾಡಿತ್ತು. ಆಗ ನಾವೆಲ್ಲರೂ ಒಂದರ ಬದಲಿಗೆ ಹತ್ತು ತಲೆಗಳನ್ನು ತರುತ್ತೇವೆ ಎಂದು ಹೇಳಿದ್ದರು. ಈಗ ಚೀನಾದ ಕೋತಿಗಳು ನಮ್ಮ 20 ಸೈನಿಕರನ್ನು ಕ್ರೂರವಾಗಿ ಕೊಂದಿವೆ. ಕೆಲ ಸೈನಿಕರನ್ನು ಗಂಭೀರವಾಗಿ ಗಾಯಗೊಳಿಸಿವೆ. ಭಾರತ ಎಂದಿಗೂ ಸಮಗ್ರತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳಲ್ಲ. ನಮ್ಮನ್ನು ಪ್ರಚೋದಿಸಲು ಪ್ರಯತ್ನಿಸಿದರೆ, ಸರಿಯಾಗಿ ಪಾಠ ಕಲಿಸುತ್ತೇವೆ ಎಂದು ಮೋದಿ ಈ ಹಿಂದೆ ಹೇಳಿದ್ದರು ಎಂದು ಸಂಪಾದಕೀಯ ಹೇಳಿದೆ.

ಪ್ರಚೋದನೆ ನೀಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದ್ದ ಮೋದಿ ಅವರು, ಈಗ ಶಾಂತಿ ಬೇಕು. ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದರೆ ಹೇಗೆ? ಈ ರೀತಿ ಪ್ರತಿಪಾದಿಸಿದರೆ, ಸೂಕ್ತ ಉತ್ತರ ನೀಡಿದಂತಾಗುತ್ತದೆಯೇ? 20 ಸೈನಿಕರು ಕ್ರೂರವಾಗಿ ಹುತಾತ್ಮರಾಗಿದ್ದಾರೆ. ಪ್ರತೀಕಾರ ತೀರಿಸಿಕೊಳ್ಳಲು ಇಷ್ಟು ಪ್ರಚೋದನೆ ಸಾಕಲ್ಲವೇ? ಎಂದು ಪ್ರಶ್ನಿಸಿದೆ.

1962ರಲ್ಲಿ ಭಾರತದ ಸೈನಿಕರ ಮೇಲೆ ಚೀನಾ ಸೈನಿಕರು ನಡೆಸಿದ ದಾಳಿಗಿಂತಲೂ ಈ ಬಾರಿ ಭೀಕರವಾಗಿದೆ. ಇದು ಸ್ವಾಭಿಮಾನ ಮತ್ತು ಸಮಗ್ರತೆ ಮೇಲಿನ ದೊಡ್ಡ ದಾಳಿ. ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಮೋದಿ ಹೇಳುತ್ತಿದ್ದಾರೆ. ಪಾಕಿಸ್ತಾನಕ್ಕೆ ಮಾತ್ರ ಬೆದರಿಕೆ ಹಾಕಬಹುದು. ಚೀನಾದೊಂದಿಗೆ ವ್ಯವಹರಿಸಲು ನಮಗೆ ಸಾಧ್ಯವಾಗಲ್ಲ ಎಂಬ ಸಂದೇಶ ನೀಡುವುತ್ತಿರುವುದು ಎಷ್ಟು ಸರಿ? ಅದರ ಭ್ರಮೆಯನ್ನು ದೇಶದ ಜನರಿಂದ ಮುಕ್ತಗೊಳಿಸುತ್ತೀರಾ ಎಂದು ಅದು ಪ್ರಧಾನಿ ಅವರನ್ನ ಪ್ರಶ್ನಿಸಿದೆ.

ಚೀನಾವನ್ನು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಸಬಹುದು. ಅದು ನಮ್ಮಿಂದ ಸಾಧ್ಯವಿದೆ. ಚೀನಾದಿಂದ ಬರುವ ಸರಕುಗಳನ್ನು ಬಹಿಷ್ಕರಿಸಬೇಕು ಎಂದು ಸಾಮ್ನಾ ಮೂಲಕ ಶಿವಸೇನೆ ಹೇಳಿಸಿದೆ. ಭಾರತದ ಅನೇಕ ಚೀನಾ ಕಂಪನಿಗಳಿಗೆ ನೀವು ಏನು ಮಾಡಲಿದ್ದೀರಿ? ಚೀನಾ ಕಂಪನಿಗಳನ್ನು ಮಹಾರಾಷ್ಟ್ರ ನಿಲ್ಲಿಸಿದರೆ, ಬೇರೆ ರಾಜ್ಯವು ಅದರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ, ಕೇಂದ್ರ ಸರ್ಕಾರವು ಚೀನಾದ ಕಂಪನಿಗಳ ವಿರುದ್ಧ ರಾಷ್ಟ್ರೀಯ ನೀತಿ ರೂಪಿಸಬೇಕು. ಎರಡೂ ದೇಶಗಳ ನಡುವೆ 6 ಲಕ್ಷ ಕೋಟಿ ವಹಿವಾಟು ನಡೆಯುತ್ತಿದೆ. ಹೂಡಿಕೆ ಮತ್ತು ಉದ್ಯೋಗ ಎರಡೂ ಇದೆ. ಆದರೆ, ಅದರಲ್ಲಿ ಚೀನಾವೇ ಹೆಚ್ಚಿನ ಬಹುಪಾಲು ಲಾಭ ಪಡೆಯುತ್ತಿದೆ. ಹೀಗಾಗಿ, ಆ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಅದು ಪ್ರತಿಪಾದಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.