ಮುಂಬೈ: ಮಹಾಮಾರಿ ಕೊರೊನಾ ಭೀತಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಿಢೀರ್ ಆಗಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿರುವ ಪರಿಣಾಮ ಮುಂಬೈ ಷೇರು ಪೇಟೆಯಲ್ಲಿ ಬರೋಬ್ಬರಿ 2,200 ಸಾವಿರ ಅಂಕ ಇಳಿಕೆಯಾಗಿದೆ.
ಮುಂಬೈ ಷೇರು ಪೇಟೆ ಆರಂಭಗೊಳ್ಳುತ್ತಿದ್ದಂತೆ ಬರೋಬ್ಬರಿ 2 ಸಾವಿರ ಅಂಕ ಇಳಿಕೆಯಾಗಿದ್ದು, 35,337.66ರಲ್ಲಿ ವಹಿವಾಟು ನಡೆಸಿದ್ರೆ, ನಿಫ್ಟಿ ಕೂಡ ಬರೋಬ್ಬರಿ 625.58 ಅಂಕ ಕುಸಿತಗೊಂಡು 10,363ಯಲ್ಲಿ ವಹಿವಾಟು ನಡೆಸಿದೆ.
ದಾಖಲೆ ಮಟ್ಟದಲ್ಲಿ ಇಳಿಕೆಯಾಗುತ್ತಿದ್ದಂತೆ ಕಳೆದ 10 ವರ್ಷದಲ್ಲಿ ಇದೇ ಮೊದಲ ಸಲ ರಿಲಯನ್ಸ್ ಷೇರುಗಳ ಬೆಲೆಯಲ್ಲಿ ಶೇ. 11ರಷ್ಟು ಇಳಿಕೆಯಾಗಿದೆ. ಷೇರುದಾರರು ಕೆಲವೇ ಕ್ಷಣಗಳಲ್ಲಿ ಬರೋಬ್ಬರಿ 10 ಲಕ್ಷ ಕೋಟಿ ರೂ ಗೂ ಹೆಚ್ಚು ಮೊತ್ತದ ಹಣವನ್ನ ಕಳೆದುಕೊಂಡಿದ್ದಾರೆ.
ಪ್ರಮುಖವಾಗಿ ರಿಲಯನ್ಸ್, ಇಂಡಸ್ ಬ್ಯಾಂಕ್, ಟಾಟಾ ಸ್ಟೀಲ್ಸ್, ಐಸಿಸಿಐ ಬ್ಯಾಂಕ್, ಇನ್ಪೋಸಿಸ್ ಸೇರಿದಂತೆ ಪ್ರಮುಖ ಷೇರುಗಳಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ.