ETV Bharat / bharat

ತಿರುವಾಂಕೂರು ರಾಜಮನೆತನಕ್ಕೆ ಒಲಿದ ಶ್ರೀ ಪದ್ಮನಾಭ ಸ್ವಾಮಿ... ಇದು ಸುಪ್ರೀಂ ಆಜ್ಞೆ! - ಕೇರಳದ ಶ್ರೀ ಪದ್ಮನಾಭ ಸ್ವಾಮಿ ದೇಗುಲ ಸುದ್ದಿ,

ಕೇರಳದ ಶ್ರೀ ಪದ್ಮನಾಭ ಸ್ವಾಮಿ ದೇಗುಲದ ಆಡಳಿತ ಮಂಡಳಿ ವಿವಾದ ಸಂಬಂಧ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ.

Padmanabhaswamy temple case, Padmanabhaswamy temple case news, SC upholds rights of Travancore royal family, rights of Travancore royal family in Padmanabhaswamy temple, ಕೇರಳದ ಶ್ರೀ ಪದ್ಮನಾಭ ಸ್ವಾಮಿ ದೇಗುಲ, ಕೇರಳದ ಶ್ರೀ ಪದ್ಮನಾಭ ಸ್ವಾಮಿ ದೇಗುಲ ಸುದ್ದಿ, ತಿರುವಾಂಕೂರು ರಾಜಮನೆತನಕ್ಕೆ ಹಕ್ಕು ನೀಡಿದ ಸುಪ್ರೀಂಕೋರ್ಟ್​,
ಶ್ರೀ ಪದ್ಮನಾಭ ಸ್ವಾ ದೇವಸ್ಥಾನ
author img

By

Published : Jul 13, 2020, 11:30 AM IST

Updated : Jul 13, 2020, 11:48 AM IST

ನವದೆಹಲಿ: ದೇವಸ್ಥಾನದ ಆಡಳಿತದಲ್ಲಿ ತಿರುವಾಂಕೂರು ರಾಜಮನೆತನದ ಹಕ್ಕನ್ನು ಸುಪ್ರೀಂಕೋರ್ಟ್​ ಎತ್ತಿ ಹಿಡಿದಿದೆ. ಜಸ್ಟಿಸ್​ ಯು.ಯು. ಲಲಿತ್ ಮತ್ತು ಜಸ್ಟಿಸ್​ ಇಂದು ಮಲ್ಹೋತ್ರಾ ಅವರ ದ್ವಿ ಸದಸ್ಯ ನ್ಯಾಯಪೀಠವು ತಿರುವಾಂಕೂರು ರಾಜಮನೆತನದ ಪರವಾಗಿ ತೀರ್ಪು ನೀಡಿತು. ದೇವಾಲಯದ ನಿರ್ವಹಣೆಯನ್ನು ತಿರುವಾಂಕೂರು ರಾಜವಂಶಕ್ಕೆ ವಹಿಸಿತು. ಸದ್ಯದ ಮಟ್ಟಿಗೆ ಮಧ್ಯಂತರ ಸಮಿತಿಯನ್ನು ರಚಿಸಲು ಸುಪ್ರೀಂ ಸೂಚಿಸಿದೆ. ತಿರುವನಂತಪುರ ಜಿಲ್ಲಾ ನ್ಯಾಯಾಧೀಶರು ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಹೊಸ ಸಮಿತಿ ರಚನೆಯಾಗುವವರೆಗೂ ಮಧ್ಯಂತರ ಸಮಿತಿ ದೇವಸ್ಥಾನದ ವ್ಯವಹಾರವನ್ನು ನೋಡಿಕೊಳ್ಳಲಿದೆ.

ವಿವಾದವೇನು?

18ನೇ ಶತಮಾನದಲ್ಲಿ ತಿರುವಾಂಕೂರು ರಾಜಮನೆತನದವರು ನಿರ್ಮಿಸಿದ್ದ ದೇಗುಲವನ್ನು ಸ್ವಾತಂತ್ರ್ಯಾನಂತರವೂ ರಾಜಮನೆತನದವರೇ ಟ್ರಸ್ಟ್​ ರಚಿಸಿಕೊಂಡು ನೋಡಿಕೊಳ್ಳುತ್ತಿದ್ದರು. ಆದರೆ ದೇಗುಲದ ನಿರ್ವಹಣೆಗೆ ಪ್ರತ್ಯೇಕ ಟ್ರಸ್ಟ್​ ರಚಿಸಿ, ದೇಗುಲ ವಶಕ್ಕೆ ಪಡೆಯಬೇಕೆಂದು 2011ರ ಜನವರಿ 31ರಂದು ಕೇರಳ ಹೈಕೋರ್ಟ್​ ತೀರ್ಪು ನೀಡಿತ್ತು.

9 ವರ್ಷಗಳ ನಂತರ ತೀರ್ಪು

ಕೇರಳ ಹೈಕೋರ್ಟ್​ ನಿರ್ಧಾರ ಪ್ರಶ್ನಿಸಿ ತಿರುವಾಂಕೂರು ರಾಜಮನೆತನದವರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಸುಮಾರು 9 ವರ್ಷಗಳ ನಂತರ ಇವತ್ತು ಸುಪ್ರೀಂಕೋರ್ಟ್​ ತೀರ್ಪು ನೀಡಿದ್ದು, ಸುದೀರ್ಘ ಹೋರಾಟದಲ್ಲಿ ರಾಜಮನೆತನದ ಕೈ ಮೇಲಾಗಿದೆ.

ಅನಂತ ಪದ್ಮನಾಭ ದೇವಸ್ಥಾನದ ನೆಲಮಾಳಿಗೆಯಲ್ಲಿ ಆರು ರಹಸ್ಯ ಕೋಣೆಗಳಿವೆ. ಈ ಕೊಠಡಿಗಳಲ್ಲಿ ಚಿನ್ನಾಭರಣಗಳಿವೆ ಎಂದು ಹೇಳಲಾಗಿದೆ.

Last Updated : Jul 13, 2020, 11:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.