ನವದೆಹಲಿ: ಭಾರತದಲ್ಲಿ ತನ್ನ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ (ಇಡಿ) ಪ್ರಾರಂಭಿಸಿರುವ ವಿಚಾರಣೆಯ ವಿರುದ್ಧ ವಿದೇಶಕ್ಕೆ ಪರಾರಿಯಾದ ಮದ್ಯ ದೊರೆ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಲಿದೆ.
ಕಳೆದ ನಾಲ್ಕು ವರ್ಷಗಳಿಂದ ತನಿಖಾ ಸಂಸ್ಥೆಗಳು ತನಗೆ ಮಾಡುತ್ತಿರುವುದು "ಸಂಪೂರ್ಣ ಅಸಮಂಜಸ" ಎಂದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಮತ್ತು ಇಡಿ ಯ ವಿರುದ್ಧ ಮಲ್ಯ ಆರೋಪಿಸಿದ್ದಾರೆ.
ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹಸ್ತಾಂತರದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ಯುಕೆ ಹೈಕೋರ್ಟ್‌ನಲ್ಲಿ ವಿಚಾರಣೆಯ ಮೂರನೇ ದಿನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಬಿಐ ಮತ್ತು ಇಡಿ ಅವಿವೇಕದ ಸಂಗತಿಯಾಗಿದವೆ, ಕಳೆದ ನಾಲ್ಕು ವರ್ಷಗಳಿಂದ ಅವೆಲ್ಲವೂ ಎಸಗುತ್ತಿರುವ ಕೃತ್ ಅಸಮಂಜಸವಾಗಿದೆ ಎಂದಿದ್ದಾರೆ. ನಿಮ್ಮ ಶೇಕಡಾ 100 ರಷ್ಟು ಹಣವನ್ನು ದಯವಿಟ್ಟು ಹಿಂಪಡೆಯುವಂತೆ ನಾನು ಕೈ ಮುಗಿದು ಬ್ಯಾಂಕುಗಳಿಗೆ ವಿನಂತಿಸುತ್ತೇನೆ ಎಂದಿದ್ದಾರೆ.
ದಯವಿಟ್ಟು ಬ್ಯಾಂಕುಗಳು ನಿಮ್ಮ ಹಣವನ್ನು ತೆಗೆದುಕೊಳ್ಳಿ ಎಂದು ನಾನು ಈಗ ಹೇಳುತ್ತಿದ್ದೇನೆ ಆದ್ರೆ ಇಡಿ ಈ ಸ್ವತ್ತುಗಳ ಮೇಲೆ ನಮಗೆ ಹಕ್ಕು ಇದೆ ಎನ್ನುತ್ತಿದೆ ಎಂದರು."ಒಂದು ಕಡೆ ಇಡಿ ಮತ್ತು ಇನ್ನೊಂದು ಬದಿಯಲ್ಲಿ ಬ್ಯಾಂಕುಗಳು ಒಂದೇ ಆಸ್ತಿಯ ಮೇಲೆ ಹೋರಾಡುತ್ತಿವೆ. ಆದ್ರೆ ನಾನು ಇಡಿಯಿಂದ ಯಾವುದೇ ಹಣವನ್ನು ಎರವಲು ಪಡೆದಿಲ್ಲ ಎಂದಿದ್ದಾರೆ.
ವಾಸ್ತವವಾಗಿ, ನಾನು ಬ್ಯಾಂಕುಗಳಿಂದ ಹಣವನ್ನು ಎರವಲು ಪಡೆಯಲಿಲ್ಲ, ನನ್ನ ಮೇಲಿನ ಗೌರವವನ್ನು ಖಾತರಿ ಪಡಿಸಲು ಹಣವನ್ನು ಪೂರ್ಣವಾಗಿ ಪಾವತಿಸಲು ನಾನು ಮುಂದಾಗಿದ್ದೇನೆ ಎಂದಿದ್ದಾರೆ.