ಆಂಧ್ರಪ್ರದೇಶ: ಕರ್ನೂಲ್ ಜಿಲ್ಲೆಯ ಪಗಿದ್ಯಾಲ್ ಮಂಡಲ್ ಮತ್ತು ಪ್ರತಾಕೋಟ ಗ್ರಾಮದಲ್ಲಿ ಪೊಲೀಸರು 10 ರಿಂದ 12 ವರ್ಷದ ಮಕ್ಕಳ ವಿರುದ್ಧ ಎಸ್ಸಿ, ಎಸ್ಟಿ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಪ್ರತಾಕೋಟಾದಲ್ಲಿರುವ ಓವರ್‌ಹೆಡ್ ಟ್ಯಾಂಕ್‌ನಲ್ಲಿ 6 ಮಕ್ಕಳು ಮೂತ್ರ ವಿಸರ್ಜಿಸುತ್ತಿದ್ದರು. ಇದನ್ನು ಗಮನಿಸಿದ ಸುರೇಖಾ ಮತ್ತು ರಮಣ ಎಂಬ ದಂಪತಿ ಮಕ್ಕಳನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ದಂಪತಿ ಕೈಗೆ ಕೆಲವು ಮಕ್ಕಳು ಸಿಕ್ಕಿ ಬಿದ್ದಿದ್ದಾರೆ. ಅವರನ್ನು ತಡೆದು ಯಾಕೆ ಹೇಗೆ ಟ್ಯಾಂಕ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮಕ್ಕಳು ಗ್ರಾಮಸ್ಥರ ಸೂಚನೆಯಂತೆ ಈ ಕೆಲಸ ಮಾಡಿರುವುದಾಗಿ ಹೇಳಿದ್ದಾರೆ.
ಈ ಸಂಬಂಧ ದಂಪತಿ ಮುಚುಮರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮಸ್ಥರು ಮತ್ತು ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.