ETV Bharat / bharat

ಮದುವೆಗೂ ಮುನ್ನ ದಂಪತಿಯ ವೈಯಕ್ತಿಕ ವಿವರ ಸಾರ್ವಜನಿಕವಾಗಿ ಬಹಿರಂಗ: ಕೇಂದ್ರಕ್ಕೆ ಸುಪ್ರೀಂಕೋರ್ಟ್​ ನೋಟಿಸ್​! - 1954ರ ವಿಶೇಷ ವಿವಾಹ ಕಾಯ್ದೆ

ವಿಶೇಷ ವಿವಾಹ ಕಾಯ್ದೆಯ ಕೆಲವು ನಿಬಂಧನೆಗಳ ಸಿಂಧುತ್ವ ಪ್ರಶ್ನಿಸಿರುವ ಮನವಿಯೊಂದಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರವನ್ನು ಸುಪ್ರೀಂಕೋರ್ಟ್​ ಕೋರಿದೆ. ಇಬ್ಬರು ವಯಸ್ಕರು ತಮ್ಮ ವಿವಾಹದ ವೈಯಕ್ತಿಕ ವಿವರಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಅನುಮತಿಸುವ 1954ರ ವಿಶೇಷ ವಿವಾಹ ಕಾಯ್ದೆಯ ನಿಬಂಧನೆಗಳು ಪ್ರಶ್ನಿಸಿ ಕೇರಳ ಮೂಲದ ಕಾನೂನು ವಿದ್ಯಾರ್ಥಿನಿ ಅರ್ಜಿ ಸಲ್ಲಿಸಿದ್ದರು.

Supreme Court
ಸುಪ್ರೀಂಕೋರ್ಟ್
author img

By

Published : Sep 16, 2020, 9:16 PM IST

ನವದೆಹಲಿ: ವಿವಾಹಿತ ದಂಪತಿಗಳ ವೈಯಕ್ತಿಕ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಾಗುವಂತೆ ಅನುಮತಿಸುವ ನಿಬಂಧನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ವಿಶೇಷ ವಿವಾಹ ಕಾಯ್ದೆಯ ಕೆಲವು ನಿಬಂಧನೆಗಳ ಸಿಂಧುತ್ವ ಪ್ರಶ್ನಿಸಿದ್ದ ಮನವಿಯೊಂದಕ್ಕೆ ಕೋರ್ಟ್ ಬುಧವಾರ ಪ್ರತಿಕ್ರಿಯೆ ನೀಡುವಂತೆ ಕೇಂದ್ರವನ್ನು ಕೋರಿದೆ. ಇಬ್ಬರು ವಯಸ್ಕರು ತಮ್ಮ ವಿವಾಹದ ವೈಯಕ್ತಿಕ ವಿವರಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಅನುಮತಿಸುವ 1954ರ ವಿಶೇಷ ವಿವಾಹ ಕಾಯ್ದೆಯ ನಿಬಂಧನೆಗಳು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಆಗಿತ್ತು. ಮದುವೆ ಮತ್ತು ಗೌಪ್ಯತೆಯ ಮೂಲಭೂತ ಹಕ್ಕಾಗಿದೆ ಎಂದು ಅರ್ಜಿದಾರರು ಹೇಳಿದ್ದರು.

ಕೇರಳ ಮೂಲದ ಕಾನೂನು ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಕೇಂದ್ರಕ್ಕೆ ನೋಟಿಸ್ ನೀಡಿದೆ.

ಅರ್ಜಿಯಲ್ಲಿ 1954ರ ಕಾಯ್ದೆಯ 5, 6 (2), 7, 8, 9 ಮತ್ತು 10ನೇ ಸೆಕ್ಷನ್​ಗಳು ಸಂವಿಧಾನದ 14, 15 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರಿದ್ದರು.

ಈ ಸೆಕ್ಷೆನ್​ಗಳ ಅನ್ವಯ, ಮದುವೆಗೂ 30 ದಿನ ಮೊದಲು ಎರಡೂ ಕಡೆಯವರು ತಮ್ಮ ವೈಯಕ್ತಿಕ ವಿವರಗಳನ್ನು ಸಾರ್ವಜನಿಕ ಪರಿಶೀಲನೆಗೆ ಲಭ್ಯವಾಗುವಂತೆ ಇರಿಸಬೇಕಾಗುತ್ತದೆ. ಮದುವೆ ಬಗ್ಗೆ ಯಾರಿಗಾದರೂ ಆಕ್ಷೇಪಣೆಗಳು ಇದ್ದರೆ ಕೋರಿಕೆ ಸಲ್ಲಿಸಲು ಅವಕಾಶ ಮಾಡಿಕೊಳ್ಳಲಾಗುತ್ತದೆ. ಅಂತಹ ಆಕ್ಷೇಪಣೆಗಳ ವಿಚಾರಣೆಗೆ ವಿವಾಹ ಅಧಿಕಾರಿ ನೀಡಲಾಗುತ್ತದೆ ಎನ್ನುತ್ತವೆ.

ಈ ಮೇಲಿನ ನಿಬಂಧನೆಗಳು ಮದುವೆ ಆಗಲು ಇಚ್ಛಿಸುವ ದಂಪತಿಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಸಿಗುವ ಗೋಪ್ಯತೆ ಕಾಪಾಡಿಕೊಳ್ಳುವ ಹಕ್ಕು ಮೊಟಕುಗೊಳಿಸಿದಂತ್ತಾಗುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.