ETV Bharat / bharat

ಮದ್ಯದ ದೊರೆ ಮಲ್ಯ ಕಂಪನಿ ಬಂದ್‌ ಪ್ರಕರಣ ; ಅ.8ಕ್ಕೆ ವಿಚಾರಣೆ ಮುಂದೂಡಿಕೆ - ಮಲ್ಯ ಕಂಪನಿ ಬಂದ್‌ ಮಾಡುವ ಪ್ರಕರಣ

ಮದ್ಯದ ದೊರೆ ವಿಜಯ್‌ ಮಲ್ಯ ₹6,203 ಕೋಟಿ ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಇದೀಗ 14,500 ಕೋಟಿ ರೂ. ಪಾವತಿಗೆ ಸಿದ್ಧರಿದ್ದಾರೆ ಎಂದು ಮಲ್ಯ ಒಡೆತನದ ಯುನೈಟೆಡ್‌ ಬ್ರಿವರೈಸ್ ಮಂಡಳಿ ಸುಪ್ರೀಂಕೋರ್ಟ್‌ಗೆ ತಿಳಿಸಿದೆ..

sc-defers-hearing-of-united-breweries-pleas-to-oct-8
ಮದ್ಯದ ದೊರೆ ಮಲ್ಯ ಕಂಪನಿ ಬಂದ್‌ ಪ್ರಕರಣ ; ಅ.8ಕ್ಕೆ ವಿಚಾರಣೆ ಮುಂದೂಡಿಕೆ
author img

By

Published : Sep 30, 2020, 4:41 PM IST

ನವದೆಹಲಿ : ಬ್ಯಾಂಕುಗಳಿಂದ 9 ಸಾವಿರ ಕೋಟಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಪ್ರಕರಣವನ್ನು ಸುಪ್ರೀಂಕೋರ್ಟ್‌ ಅಕ್ಟೋಬರ್‌ 8ಕ್ಕೆ ಮುಂದೂಡಿದೆ.

ವಿಜಯ್‌ ಮಲ್ಯಗೆ ಸೇರಿದ ಕಂಪನಿಗಳನ್ನು ಮುಚ್ಚುವಂತೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಲ್ಯ ಒಡೆತನದ ಯುನೈಟೆಡ್‌ ಬ್ರಿವರೈಸ್ ಸುಪ್ರೀಂಕೋರ್ಟ್‌ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಇಂದು ವಿಚಾರಣೆ ನಡೆಸಿದ ಕೋರ್ಟ್‌ ಇತರೆ ಅರ್ಜಿ ಸೇರಿ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಅಕ್ಟೋಬರ್‌ 8ಕ್ಕೆ ಮುಂದೂಡಿದೆ.

ನ್ಯಾ. ಯು ಯು ಲಲಿತ್‌ ನೇತೃತ್ವದ ಪೀಠದಲ್ಲಿ ನಡೆದ ವಿಚಾರಣೆ ವೇಳೆ, ಮಲ್ಯ ಕಂಪನಿಗಳು ಬ್ಯಾಂಕುಗಳಿಂದ ₹6,203 ಕೋಟಿ ಸಾಲ ಪಡೆದಿದ್ದಾರೆ. ₹14,500 ಕೋಟಿ ನೀಡಿ ಸೆಟ್ಲ್‌ಮೆಂಟ್‌ ಮಾಡಿಕೊಳ್ಳುವ ಆಹ್ವಾನವನ್ನು ಬ್ಯಾಂಕುಗಳಿಗೆ ಕಂಪನಿ ನೀಡಿದೆ ಎಂದು ಯುನೈಟೆಡ್‌ ಬ್ರಿವರೈಸ್‌ ಪರ ವಕೀಲರು ಕೋರ್ಟ್‌ಗೆ ಹೇಳಿದ್ದಾರೆ.

ಹಿರಿಯ ವಕೀಲ ಸಿ ಎಸ್‌ ವೈದ್ಯನಾಥನ್‌ ವಾದ ಮಂಡಿಸಿ ಕಂಪನಿ ಮುಚ್ಚುವ ಅವಶ್ಯಕತೆ ಇಲ್ಲ. ಪಡೆದ ಸಾಲಕ್ಕಿಂತ ಹೆಚ್ಚಿನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕೋರ್ಟ್‌ಗೆ ವಿವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.