ETV Bharat / bharat

ಲಾಕ್‌ಡೌನ್‌ ಅಪಹಾಸ್ಯ ಮಾಡಿದವರಿಗೆ ತೀಕ್ಷ್ಣ ಸಂದೇಶ ಕೊಟ್ಟ ಸಲ್ಮಾನ್‌ ಖಾನ್‌

ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹರಡುತ್ತಲಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ ಎರಡನೇ ಹಂತದ ಲಾಕ್​ಡೌನ್​ ವಿಸ್ತರಣೆ ಮಾಡಿದೆ. ಆದರೆ ಕೆಲವರು ಇದನ್ನು ಅಪಹಾಸ್ಯ ಮಾಡುತ್ತಿದ್ದು, ಇದರ ವಿರುದ್ಧ ಗುಡುಗಿರುವ ಬಾಲಿವುಡ್​​ ನಟ, ನಿರೂಪಕ ಸಲ್ಮಾನ್‌ ಖಾನ್‌ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

author img

By

Published : Apr 16, 2020, 1:59 PM IST

salman khan
ಸಲ್ಮಾನ್‌ ಖಾನ್‌

ಮುಂಬೈ: ಕೋವಿಡ್‌19 ವೈರಸ್‌ ಹರಡುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿ ಲಾಕ್‌ಡೌನ್‌ ಮುಂದುವರೆಸಿದೆ. ಆದ್ರೆ ಇದನ್ನು ಅಪಹಾಸ್ಯ ಮಾಡುತ್ತಿರುವ ಜೋಕರ್ಸ್‌ಗೆ ಬಾಲಿವುಡ್‌ ಬಾದ್‌ಷಾ ಸಲ್ಮಾನ್‌ ಖಾನ್‌ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಮಾತ್ರವಲ್ಲದೇ, ಮನೆಯಿಂದ ಹೊರ ಬರುತ್ತಿರುವವರಿಗೂ ಸಂದೇಶವೊಂದನ್ನು ರವಾನಿಸಿದ್ದಾರೆ.

ಕೋವಿಡ್‌ -19 ತಡೆಯಲು ಹೋರಾಟ ಮಾಡುತ್ತಿರುವ ವೈದ್ಯರು, ನರ್ಸ್‌ಗಳು, ಪೊಲೀಸ್‌ ಸಿಬ್ಬಂದಿ ಮೇಲೆ ಯಾವುದೇ ಕಾರಣಕ್ಕೂ ದಾಳಿ ಮಾಡಬೇಡಿ ಅಂತ ಜನರಲ್ಲಿ ಮನವಿ ಮಾಡಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ 10 ನಿಮಿಷಗಳು ವಿಡಿಯೋ ಶೇರ್‌ ಮಾಡಿರುವ ಸಲ್ಲು ಭಾಯ್‌, ಹಲೋ ಎಲ್ಲರಿಗೂ ನಮಸ್ಕಾರ ಅಂತ ಹಿಂದಿ ಬಿಗ್‌ ಬಾಸ್‌ ರಿಯಾಲಿಟಿ ಷೋನಲ್ಲಿ ಹೇಳುವ ಸ್ಟೈಲ್‌ನಲ್ಲಿ ಹೇಳಿದ್ದಾರೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಇರುವುದರಿಂದ ಜೀನದ ಬಿಗ್‌ ಬಾಸ್‌ ಆರಂಭವಾಗಿದೆ. ನಾನು ಎರಡು ದಿನ ಚುಟ್ಟಿ (ರಜೆ ) ತೆಗೆದುಕೊಂಡಿದ್ದೆ. ಆದ್ರೆ ಕೋವಿಡ್‌19 ಎಲ್ಲರಿಗೂ ರಜೆ ನೀಡಿದೆ ಅಂತ ಹೇಳಿದ್ದಾರೆ.

ತಾಯಿ, ಇಬ್ಬರು ಸೋಹದರಿಯರ ಮಕ್ಕಳು ಮತ್ತು ಇತರ ಕೆಲ ಸಂಬಂಧಕರೊಂದಿಗೆ ಮುಂಬೈ ಸಮೀಪದ ಪಾನ್‌ವೆಲ್‌ನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್‌ ಖಾನ್‌ ಕಾಲ ಕಳೆಯುತ್ತಿದ್ದಾರೆ. ತಾವಿರುವ ಐದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿರುವ ಹಳ್ಳಿ ಜನರಿಗೆ ತಮ್ಮ ಸ್ನೇಹಿತರೊಬ್ಬರ ಮೂಲಕ ರೇಷನ್‌ ಕಳುಹಿಸಿಕೊಡಲಾಗಿದೆ. ಆದ್ರೆ ಆತ ಮಾಸ್ಕ್‌ ಹಾಕದ ಕಾರಣ ಪೊಲೀಸರು ತಡೆದು ವಿಚಾರಿಸಿದ್ರು. ನಾನು ಸ್ನೇಹಿತನಿಗೆ ತಿಳಿ ಹೇಳಿದ್ದೇನೆ ಅಂತ ವಿಡಿಯೋದಲ್ಲಿ ತಿಳಿಸಿದ್ದಾರೆ.

ಯಾರೂ ಹೊರಗಡೆ ಹೋಗಬೇಡಿ, ಎಲ್ಲರೂ ಒಟ್ಟಾಗಿ ಸೇರಬೇಡಿ, ನಿಮ್ಮ ಕುಟುಂಬದವರ ಜೊತೆ ಮನೆಯಲ್ಲೇ ಇರುವಂತೆ ಸರ್ಕಾರ ಹೇಳಿದೆ. ಇದನ್ನು ಎಲ್ಲರೂ ಪಾಲಿಸಿ. ಒಂದು ವೇಳೆ ನಮಾಜ್‌ ಮಾಡಬೇಕಿದ್ರೆ ಮನೆಯಲ್ಲೇ ಮಾಡಿ. ಪೂಜೆಯನ್ನು ಮನೆಯಲ್ಲೇ ಮಾಡಿ ಅಂತ ಮನವಿ ಮಾಡಿದ್ದಾರೆ.

ಸಮೀಪದ ಅಂಗಡಿಗಳಿಗೆ ಒಬ್ಬರಾಗಿಯೇ ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸಿ. ಯಾರೂ ಕೂಡ ನಿಮ್ಮನ್ನು ತಡೆಯುವುದಿಲ್ಲ. ಮಾಸ್ಕ್‌ ಮತ್ತು ಗ್ಲೌಸ್‌ ಉಪಯೋಗಿಸಿ. ಕೊರೊನಾ ವೈರಸ್‌ ತಡೆಗೆ ವೈದ್ಯರು, ನರ್ಸ್‌ಗಳು, ಪೊಲೀಸರು ಗಂಟೆಗಟ್ಟಲೇ ಶ್ರಮಿಸುತ್ತಿದ್ದಾರೆ. ಇವರ ಕೆಲಸವನ್ನು ಪ್ರತಿಯೊಬ್ಬರು ಗೌರವಿಸಬೇಕು. ಸರ್ಕಾರದ ಮಾರ್ಗ ಸೂಚಿಗಳನ್ನು ನೀವು ಪಾಲಿಸಿದರೆ ಪೊಲೀಸರು ನಿಮಗೆ ಹೊಡೆಯುವುದಿಲ್ಲ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.