ETV Bharat / bharat

ಶಬರಿಮಲೆಯಲ್ಲಿ ಮಂಡಲ ಪೂಜೆ : ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಸಕಲ ಸಿದ್ಧತೆ - Sabarimala Sannidhanam

ಡಿ.30ರಂದು ಮಕರವಿಲಕ್ಕು ಹಬ್ಬಕ್ಕಾಗಿ ಅಯ್ಯಪ್ಪ ದೇಗುಲ ಮತ್ತೆ ತೆರೆಯಲಿದ್ದು, ಡಿ.31 ರಿಂದ ಜ.19ರವರೆಗೆ ನಡೆಯಲಿದೆ. ಈ ನಡುವೆ ಡಿ.31ರಿಂದ ಯಾತ್ರಾರ್ಥಿಗಳು ದೇವಾಲಯಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತದೆ..

ಶಬರಿಮಲೆ ಅಯ್ಯಪ್ಪ ಸನ್ನಿಧಿ
Sabarimala
author img

By

Published : Dec 26, 2020, 10:10 AM IST

Updated : Dec 26, 2020, 11:21 AM IST

ಪಥನಮತ್ತಟ್ಟ : ಅಯ್ಯಪ್ಪ ಸ್ವಾಮಿಯ ವಾರ್ಷಿಕ ಮಂಡಲ ಪೂಜೆಗೆ ಶಬರಿಮಲೆಯಲ್ಲಿ ಸಿದ್ಧತೆಗಳು ನಡೆದಿದ್ದು, ಇಂದು ಬೆಳಗ್ಗೆ 11:40ರಿಂದ ಮಧ್ಯಾಹ್ನ 12.20ಕ್ಕೆ ಪೂಜೆ ನಡೆಯಲಿದೆ. ಅಯ್ಯಪ್ಪ ಸ್ವಾಮಿಗೆ ತೊಡಿಸುವ ಚಿನ್ನದ ಅಂಗಿಯ ಮೆರವಣಿಗೆ ಶುಕ್ರವಾರ ಶಬರಿಮಲೆಗೆ ತಲುಪಲಿದೆ. ಅಲ್ಲಿಂದ ಸನ್ನಿಧಾನಕ್ಕೆ ಅದನ್ನು ಕೊಂಡೊಯ್ದ ಬಳಿಕ ಮಂಡಲ ಪೂಜೆ ಆರಂಭವಾಗಲಿದೆ. ಅದಕ್ಕೆ ಅಗತ್ಯವಾದ ಎಲ್ಲಾ ತಯಾರಿಗಳು ಪೂರ್ಣಗೊಂಡಿದೆ.

42 ದಿನಗಳ ವ್ರತದ ಬಳಿಕ ಶಬರಿಮಲೆ ದೇವಸ್ಥಾನವು ಮಂಡಲ ಪೂಜೆಗೆ ಸಜ್ಜುಗೊಂಡಿದೆ. ಆಚರಣೆಗಳಿಗೆ ಅನುಗುಣವಾಗಿ ಅರಣ್ಮುಲ ಪಾರ್ಥ ಸಾರಥಿ ದೇವಸ್ಥಾನದಿಂದ ಹೊರಟ ಥಂಕ ಅಂಕಿ ರಥಯಾತ್ರೆಯು ಪಂಬಾಕ್ಕೆ ಮಧ್ಯಾಹ್ನ ತಲುಪಲಿದೆ.

ಅಲ್ಲಿ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆದ ನಂತರ ಮೆರವಣಿಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೆರವಣಿಗೆಯು ಸನ್ನಿಧನಕ್ಕೆ ಚಾರಣವನ್ನು ಪ್ರಾರಂಭಿಸಿತು. ಸಂಜೆ 5.15ಕ್ಕೆ ತಿರುವಾಂಕೂರು ದೇವಸ್ವಂ ಮಂಡಳಿಯ ಸದಸ್ಯರ ನೇತೃತ್ವದ ಗುಂಪು ಶರಂ ಕುತಿಯಲ್ಲಿ ನಡೆದ ಮೆರವಣಿಗೆಯನ್ನು ವಿಧ್ಯುಕ್ತವಾಗಿ ಸ್ವಾಗತಿಸಿ ದೇವಾಲಯಕ್ಕೆ ಕರೆದೊಯ್ದಿತು.

ಓದಿ: ಗುಂಡಿನ ಚಕಮಕಿ : ಓರ್ವ ಉಗ್ರ ಸಾವು, ಇಬ್ಬರು ಭದ್ರತಾ ಸಿಬ್ಬಂದಿ ಗಾಯ

ದೇವಸ್ವಂ ಮಂಡಳಿಯ ಅಧಿಕಾರಿಗಳು ಥಂಕ ಅಂಕಿಯನ್ನು ಶರಮುಕ್ತಿಯಲ್ಲಿ ಬರಮಾಡಿಕೊಂಡು ಸನ್ನಿಧಾನಕ್ಕೆ ಸಾಗಿಸುತ್ತಾರೆ. ಅದನ್ನು ಸೋಪಾನದಲ್ಲಿ ಮುಕ್ತ ಅರ್ಚಕರು ಸ್ವಾಗತಿಸುತ್ತಾರೆ. ಇದರ ನಂತರ ಅಯ್ಯಪ್ಪನ ವಿಗ್ರಹಕ್ಕೆ ಚಿನ್ನದ ಉಡುಪನ್ನು ತೊಡಿಸಿ ಸಂಜೆ 6.30ರಿಂದ ದೀಪಾರಾಧನೆ ಆರಂಭವಾಗುತ್ತದೆ.

ಸಂಜೆ 6.30ರ ಆಚರಣೆಗಳು ಪೂರ್ಣಗೊಳ್ಳುವವರೆಗೂ 18 ಮೆಟ್ಟಿಲನ್ನು ಏರಿ ಬರಲು ಭಕ್ತರಿಗೆ ಅವಕಾಶ ನೀಡುವುದಿಲ್ಲ. ಪೂಜಾ ಆರಂಭವಾದ ನಂತರ ಮಧ್ಯಾಹ್ನ 3 ಗಂಟೆಯವರೆಗೆ ಮೆರವಣಿಗೆ ಹೊರಡುವವರೆಗೂ ಭಕ್ತರು ಪಂಬಾದಿಂದ ಹೊರ ಹೋಗುವಂತಿಲ್ಲ.

ಡಿ.30ರಂದು ಮಕರವಿಲಕ್ಕು ಹಬ್ಬಕ್ಕಾಗಿ ಅಯ್ಯಪ್ಪ ದೇಗುಲ ಮತ್ತೆ ತೆರೆಯಲಿದ್ದು, ಡಿ.31 ರಿಂದ ಜ.19ರವರೆಗೆ ನಡೆಯಲಿದೆ. ಈ ನಡುವೆ ಡಿ.31ರಿಂದ ಯಾತ್ರಾರ್ಥಿಗಳು ದೇವಾಲಯಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತದೆ.

Last Updated : Dec 26, 2020, 11:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.