ಅಮರಾವತಿ : ಆಡಳಿತರೂಡ ವೈಎಸ್ಆರ್ ಕಾಂಗ್ರೆಸ್ ಮತ್ತು ಪ್ರತಿಪಕ್ಷ ತೆಲುಗು ದೇಶಂ ಪಾರ್ಟಿ(ಟಿಡಿಪಿ) ನಡುವಿನ ಗದ್ದಲದಿಂದ ನಿರ್ಣಾಯಕ ವಿನಿಯೋಗ ಮಸೂದೆಯನ್ನು ಅಂಗೀಕರಿಸದೇ ಆಂಧ್ರ ಪ್ರದೇಶದ ವಿಧಾನ ಪರಿಷತ್ ಕಲಾಪವನ್ನುಅನಿರ್ದಿಷ್ಠಾವಧಿಗೆ ಮುಂದೂಡಲಾಯಿತು.
ವಿಧಾನಪರಿಷತ್ನಲ್ಲಿ 58 ಸದಸ್ಯ ಬಲದ ಸದನದಲ್ಲಿ ಬಹುಮತ ಹೊಂದಿರುವ ಟಿಡಿಪಿ ಪಕ್ಷ, 2020 ರ ಎಪಿ ವಿಕೇಂದ್ರೀಕರಣ ಮತ್ತು 2020 ರ ಎಪಿ ಕ್ಯಾಪಿಟಲ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ (ರದ್ದುಗೊಳಿಸುವಿಕೆ) ಮಸೂದೆಯನ್ನು ಅಂಗೀಕರಿಸಲು ಬಿಡಲಿಲ್ಲ.
ವಿನಿಯೋಗ ಮಸೂದೆಯನ್ನು ಮೊದಲು ಚರ್ಚೆಗೆ ತೆಗೆದುಕೊಳ್ಳಬೇಕು ನಂತರ ಆಂಧ್ರಪ್ರದೇಶ ವಿಕೇಂದ್ರಿಕರಣ ಮತ್ತು ಸಿಆರ್ಡಿಗೆ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಟಿಡಿಪಿ ಆಗ್ರಹಿಸಿತು. ಆದರೆ, ಈ ಮಸೂದೆಯನ್ನು ಮೊದಲು ಚರ್ಚೆಗೆ ತೆಗೆದುಕೊಂಡರೆ ಗದ್ದಲವುಂಟಾಗಿ ಸದನ ಮೊಟುಗೊಳ್ಳಬಹುದು ಎಂದು ಅರಿತ ಹಣಕಾಸು ಮತ್ತು ಶಾಸಕಾಂಗ ವ್ಯವಹಾರಗಳ ಸಚಿವ ಬುಗ್ಗನಾ ರಾಜೇಂದ್ರನಾಥ್ ವಿನಿಯೋಗ ಮಸೂದೆಯನನ್ನು ಸದನ ಮುಂದೂಡುವ ಮುಂಚೆ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಆದರೆ, ಇದಕ್ಕೆ ಒಪ್ಪದ ಟಿಡಿಪಿ ಸದಸ್ಯರು ಗದ್ದಲವನ್ನುಂಟು ಮಾಡಿದರು. ಕೊನೆಗೆ ಯಾವುದೇ ಮಸೂದೆ ಅಂಗೀಕರಿಸದೇ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಹೀಗಾಗಿ, ರಾಜ್ಯದ ವಾರ್ಷಿಕ ಬಜೆಟ್‌ಗೆ ದಾರಿ ಮಾಡಿಕೊಡುವ ವಿನಿಯೋಗ ಮಸೂದೆ ಮಂಡನೆಯಾಗದೆ ಉಳಿಯಿತು. ಹಣದ ಮಸೂದೆಯಾಗಿರುವುದರಿಂದ ನಿಯಮಗಳ ಪ್ರಕಾರ 14 ದಿನಗಳಲ್ಲಿ ಅಂಗೀಕರಿಸಲಾಗುವುದು ಎಂದು ಶಾಸಕಾಂಗದ ಮೂಲಗಳು ತಿಳಿಸಿವೆ.