ETV Bharat / bharat

ದೇಶಕ್ಕೆ ಬೃಹತ್​ ಆರ್ಥಿಕ ಪ್ಯಾಕೇಜ್​​​​​ನ​ ಅಗತ್ಯವಿದೆ:  ನೊಬೆಲ್​ ಪುರಸ್ಕೃತನ ಪ್ರತಿಪಾದನೆ - ಭಾರತದ ಆರ್ಥಿಕತೆ

ಲಾಕ್​ಡೌನ್​ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಹೊರಬರಬೇಕಾದರೆ ಅತಿ ದೊಡ್ಡ ಆರ್ಥಿಕ ಪ್ಯಾಕೇಜ್​ನೊಂದಿಗೆ ಜನರ ಕೈಗೆ ಒಂದಷ್ಟು ಹಣ ನೀಡುವ ಕೆಲಸವಾಗಬೇಕು ಎಂದು ನೊಬೆಲ್​ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ

Abhijit Banerjee, Rahul Gandhi
ಅಭಿಜಿತ್​ ಬ್ಯಾನರ್ಜಿ, ರಾಹುಲ್​ ಗಾಂಧಿ
author img

By

Published : May 5, 2020, 11:53 AM IST

ನವದೆಹಲಿ: ಕೊರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಪುನಶ್ಚೇತನಗೊಳಿಸಲು ಬೃಹತ್ ಆರ್ಥಿಕ ಪ್ಯಾಕೇಜ್ ಅವಶಕ್ಯತೆ ಇದೆ ಎಂದು ನೊಬೆಲ್ ಪುರಸ್ಕೃತ ಅನಿವಾಸಿ ಭಾರತೀಯ ಅಭಿಜಿತ್​ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯೊಂದಿಗೆ ಕೊರೊನಾ ಹಾಗೂ ರಾಷ್ಟ್ರದ ಆರ್ಥಿಕತೆ ಕುರಿತು ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು ಆರ್ಥಿಕ ಸಂಕಷ್ಟದಿಂದ ಹೊರಬರಬೇಕಾದರೆ ಅತಿ ದೊಡ್ಡ ಆರ್ಥಿಕ ಪ್ಯಾಕೇಜ್​ನೊಂದಿಗೆ ಜನರ ಕೈಗೆ ಒಂದಷ್ಟು ಹಣ ನೀಡಬೇಕು. ಆ ಹಣ ಕಡು ಬಡವರಿಗೆ ತಲುಪಬೇಕು ಎಂದು ಅಭಿಜಿತ್​ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ, ಜಪಾನ್​ ಹಾಗೂ ಯೂರೋಪಿನ ಹಲವು ರಾಷ್ಟ್ರಗಳು ಆರ್ಥಿಕತೆಗಾಗಿ ಬೃಹತ್​ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿವೆ. ನಾವು ಆ ಬಗ್ಗೆ ಯೋಚನೆ ಮಾಡದೇ ಕೇವಲ ಶೇ.1ರಷ್ಟು ಜಿಡಿಪಿ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.

ಆರ್ಥಿಕತೆ ಸುಧಾರಣೆ ಮತ್ತಷ್ಟು ಸಲಹೆ ನೀಡಿರುವ ಅಭಿಜಿತ್ ಬ್ಯಾನರ್ಜಿ ಲಾಕ್​ಡೌನ್​ ವೇಳೆ, ವಲಸೆ ಕಾರ್ಮಿಕರನ್ನು ನಿಯಂತ್ರಿಸಲು ಕೇವಲ ರಾಜ್ಯಗಳಿಂದ ಮಾತ್ರ ಸಾಧ್ಯವಿಲ್ಲ. ವಲಸಿಗರನ್ನು ಕೇಂದ್ರ ಸರ್ಕಾರ ನಿಯಂತ್ರಿಸಬೇಕು. ತಾತ್ಕಾಲಿಕವಾಗಿ ಜನರಿಗೆ ಪಡಿತರ ನೀಡಬೇಕು. ರಾಜ್ಯಗಳ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಒದಗಿಸಬೇಕು. ಹೀಗಾದಾಗ ಮಾತ್ರ ಆರ್ಥಿಕತೆ ಸುಧಾರಣೆಯಾಗುತ್ತದೆ ಎಂದು ಈ ವೇಳೆ ಸಲಹೆ ನೀಡಿದ್ದಾರೆ.

ರಾಹುಲ್​​ ಗಾಂಧಿ ಇತ್ತೀಚೆಗೆ ಕೊರೊನಾ ವಿಚಾರವಾಗಿ ಆರ್ಥಿಕ ತಜ್ಞರೊಂದಿಗೆ ವಿಡಿಯೋ ಸಂವಾದ ಮಾಡುತ್ತಿದ್ದು, ಹಿಂದಿನ ವಾರದ ವಿಡಿಯೋ ಸಂವಾದದಲ್ಲಿ ಆರ್​ಬಿಐನ ಮಾಜಿ ಗವರ್ನರ್​ ರಘುರಾಮ್​ ರಾಜನ್​ ಭಾಗವಹಿಸಿದ್ದರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.