ETV Bharat / bharat

ಭಾರತಕ್ಕೆ ಮರಳುವ ಕೇರಳಿಗರ ನೋಂದಣಿಗೆ ವೆಬ್​ಸೈಟ್ ಪ್ರಾರಂಭಿಸಿದ ಪಿಣರಾಯಿ ವಿಜಯನ್ ಸರ್ಕಾರ - ಪಿಣರಾಯಿ ವಿಜಯನ್ ಸರ್ಕಾರ

ವಿದೇಶದಲ್ಲಿದ್ದು, ಭಾರತಕ್ಕೆ ಬರಲು ಇಚ್ಛಿಸುವ ಕೇರಳಿಗರಿಗಾಗಿ ರಾಜ್ಯ ಸರ್ಕಾರ ವೆಬ್​ಸೈಟ್ ಪ್ರಾರಂಭಿಸಿದ್ದು, ಅನಿವಾಸಿ ಕೇರಳಿಗರಿಗೆ ಹೆಸರು ನೋಂದಾಯಿಸಿಕೊಳ್ಳಲು ತಿಳಿಸಿದೆ.

Registration for Keralites wishing to return begins
ಪಿಣರಾಯಿ ವಿಜಯನ್ ಸರ್ಕಾರ
author img

By

Published : Apr 27, 2020, 10:10 AM IST

ತಿರುವನಂತಪುರಂ(ಕೇರಳ): ಕೇಂದ್ರವು ಭಾರತೀಯ ವಲಸಿಗರನ್ನು ವಾಪಸ್ ಕರೆಸಿಕೋಳ್ಳಲು ಯೋಚಿಸುತ್ತಿದೆ. ಹೀಗಿರುವಾಗ ವಿದೇಶದಿಂದ ರಾಜ್ಯಕ್ಕೆ ಬರಲು ಇಚ್ಛಿಸುವಂತ ಕೇರಳಿಗರಿಗಾಗಿ ರಾಜ್ಯ ಸರ್ಕಾರ ವೆಬ್​ಸೈಟ್ ಬಿಡುಗಡೆ ಮಾಡಿದೆ.

ವಿದೇಶದಿಂದ ಮರಳಲು ಬಯಸುವವರೆಲ್ಲರೂ ಈ ವೆಬ್​ಸೈಟ್​ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ವಲಸೆಗಾರರ ​​ಅಧಿಕೃತ ಸಂಸ್ಥೆಯಾದ ನಾರ್ಕಾ-ರೂಟ್ಸ್‌ನ www.norkaroots.org ಯಲ್ಲಿ ನೋಂದಣಿ ಮಾಡಬೇಕಾಗಿದೆ.

ಅಂದಾಜು 25 ಲಕ್ಷ ಅನಿವಾಸಿ ಕೇರಳಿಗರಲ್ಲಿ, 90 ರಷ್ಟು ಮಂದಿ ಮಧ್ಯಪ್ರಾಚ್ಯ ದೇಶಗಳಲ್ಲಿದ್ದಾರೆ. 3 ರಿಂದ 5 ಲಕ್ಷ ಜನರು ವಾಯು ಮಾರ್ಗದ ಮೂಲಕ ಮರಳುವ ಸಾಧ್ಯತೆಯಿದೆ. ಈ ನೋಂದಣಿಯು ವಿಮಾನದಲ್ಲಿ ಸೀಟು ಹಂಚಿಕೆಗಾಗಿ ಅಲ್ಲ, ವಿದೇಶದಿಂದ ಆಗಮಿಸುವವರಿಗೆ ಕ್ವಾರಂಟೈನ್ ಮತ್ತು ಐಸೋಲೇಷನ್ ವ್ಯವಸ್ಥೆ ಮಾಡಲು ಸಹಕಾರಿಯಾಗುತ್ತದೆ ಎಂದು ನಾರ್ಕಾ ರೂಟ್ಸ್​ ಹೇಳಿದೆ.

ವಿದೇಶದಿಂದ ಬರುವ ಎಲ್ಲರನ್ನೂ ಸ್ಕ್ರೀನಿಂಗ್ ಮಾಡಲಾಗುತ್ತದೆ. ಕೊರೊನಾ ರೋಗ ಲಕ್ಷಣಗಳಿಲ್ಲದವರಿಗೆ ಹೋಮ್ ಕ್ವಾರಂಟೈನ್​ನಲ್ಲಿ ಇರುವಂತೆ ತಿಳಿಸಿಲಾಗುತ್ತದೆ. ಒಂದು ವೇಳೆ ಲಕ್ಷಣಗಳು ಕಂಡುಬಂದರೆ ಅಂತವರನ್ನು ಪ್ರತ್ಯೇಕಿಸಲಾಗುತ್ತದೆ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.