ETV Bharat / bharat

ವಸೂಲಾಗದ ಸಾಲ: ದೊಡ್ಡ ಕಂಪನಿಗಳ ಪರ ಬ್ಯಾಟ್​ ಬೀಸಿದ ಆರ್​ಬಿಐ -

ಆರ್​ಬಿಐನ ಈ ಹಿಂದಿನ ಸುತ್ತೋಲೆಯನ್ನು ಸುಪ್ರೀಂಕೋರ್ಟ್​ ರದ್ದುಗೊಳಿಸಿದ ಎರಡು ತಿಂಗಳ ನಂತರ ನೂತನ ಸುತ್ತೋಲೆ ಪ್ರಕಟಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Jun 8, 2019, 2:48 PM IST

ನವದೆಹಲಿ: ವಸೂಲಾಗದ ಸಾಲ (ಎನ್​ಪಿಎ) ನಿರ್ವಹಣೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಿದೆ.

ಆರ್​ಬಿಐನ ಈ ಹಿಂದಿನ ಸುತ್ತೋಲೆಯನ್ನು ಸುಪ್ರೀಂಕೋರ್ಟ್​ ರದ್ದುಗೊಳಿಸಿದ ಎರಡು ತಿಂಗಳ ನಂತರ ನೂತನ ಸುತ್ತೋಲೆ ಪ್ರಕಟಿಸಿದೆ.

ಎನ್​ಪಿಎ ಬಿಕ್ಕಟ್ಟು ಪರಿಹಾರಕ್ಕೆ ಆರ್​ಬಿಐ ಹೊರಡಿಸಿದ್ದ ಸುತ್ತೋಲೆ ಈ ಹಿಂದೆ ಪ್ರಬಲ ಅಸ್ತ್ರವಾಗಿತ್ತು. ದೊಡ್ಡ ಕಂಪನಿಗಳು ಸಾಲ ಮರುಪಾವತಿ ಮಾಡುವಲ್ಲಿ ಒಂದೇ ಒಂದು ದಿನ ವಿಳಂಬ ಮಾಡಿದರೂ ಅಂಥ ಸಾಲ ಖಾತೆಗಳನ್ನು ಸುಸ್ತಿ ಸಾಲ ಎಂದು ವರ್ಗೀಕರಿಸಿ ಹಾಗೂ ದಿವಾಳಿ ಸಂಹಿತೆಯಡಿ ಕ್ರಮಕೈಗೊಳ್ಳಲು ಬ್ಯಾಂಕ್​ಗಳಿಗೆ ಆರ್​ಬಿಐ ಅವಕಾಶ ನೀಡಿತ್ತು.

ಸದ್ಯದ ಪರಿಷ್ಕೃತ ಸುತ್ತೋಲೆಯಡಿ ಇದನ್ನು ವಾಪಸ್‌ ಪಡೆದಿರುವ ಆರ್‌ಬಿಐ ಒಂದು ದಿನದ ಗಡವನ್ನು 30 ದಿನಕ್ಕೆ ವಿಸ್ತರಿಸಿದೆ. ಹೆಚ್ಚುವರಿಯಾಗಿ 29 ದಿನಗಳ ಸಮಯ ನಿಗದಿಗೊಳಿಸಿದೆ.

ಎನ್​ಪಿಎ ಕುರಿತು ಆರ್​ಬಿಐ ಫೆಬ್ರವರಿ 12ರಂದು ಹೊರಡಿಸಿದ್ದ ಸುತ್ತೋಲೆಯನ್ನು ಸುಪ್ರೀಂಕೋರ್ಟ್​ ಏಪ್ರಿಲ್​​ 2ರಂದು ವಜಾಗೊಳಿಸಿತ್ತು. ₹ 2,000 ಕೋಟಿಗೂ ಅಧಿಕ ಮೊತ್ತದ ಎನ್​ಪಿಎಗಳನ್ನು ಬ್ಯಾಂಕ್​ಗಳು 180 ದಿನಗಳಲ್ಲಿ ನಿರ್ವಹಿಸಬೇಕಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.