ETV Bharat / bharat

ಕೊನೆಗೂ ಪಕ್ಷ ಸ್ಥಾಪನೆಗೆ ತಲೈವಾ ಸಜ್ಜು.. ಅಭಿಮಾನಿಗಳು ಫುಲ್ ಖುಷ್​!

2017 ರಲ್ಲೇ  ರಾಜಕೀಯ ಪಕ್ಷವನ್ನು ಕಟ್ಟುವ ಆಸೆಯನ್ನು ವ್ಯಕ್ತಪಡಿಸಿದ್ದ ಸೂಪರ್​ಸ್ಟಾರ್​ ರಜನಿಕಾಂತ್​, ಈ ವರ್ಷದ ಮೇ ಅಥವಾ ಜೂನ್​ ತಿಂಗಳಲ್ಲಿ ಮುಹೂರ್ತ ಫಿಕ್ಸ್​ ಮಾಡಲಿದ್ದಾರೆ.

Superstar Rajinikanth latest news
ರಾಜಕೀಯ ಪಕ್ಷ ಸ್ಥಾಪಿಸಲಿರುವ ತಲೈವ
author img

By

Published : Feb 11, 2020, 2:57 AM IST

Updated : Feb 11, 2020, 7:10 AM IST

ಮುಂಬೈ: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ರಜನಿಕಾಂತ್​ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲು ನಿರ್ಧರಿಸಿದ್ದು, ಅವರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

2017 ರಲ್ಲೇ ರಾಜಕೀಯ ಪಕ್ಷವನ್ನು ಕಟ್ಟುವ ಆಸೆಯನ್ನು ರಜಿನಿಕಾಂತ್​​ ವ್ಯಕ್ತಪಡಿಸಿದ್ದು, ಈ ವರ್ಷದ ಮೇ ಅಥವಾ ಜೂನ್​ ತಿಂಗಳಲ್ಲಿ ರಜನಿಕಾಂತ್ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲಿದ್ದಾರೆ ಎಂದು ಅವರ ಆಪ್ತರಲ್ಲಿ ಒಬ್ಬರಾದ ಕರಾಟೆ ತ್ಯಾಗರಾಜನ್​ ಸೋಮವಾರ ಮಾಹಿತಿ ನೀಡಿದ್ದಾರೆ.

ಬಾಲ್ಯದಿಂದಲೇ ರಜನಿಕಾಂತ್​ ಫೋಟೊಗಳನ್ನು ಸಂಗ್ರಹಿಸಿ ತಮ್ಮ ಮನೆಯಲ್ಲಿ ಫ್ರೇಮ್​ ಹಾಕಿಸಿಟ್ಟುಕೊಂಡಿರುವ ಡೈ-ಹಾರ್ಡ್ ಫ್ಯಾನ್​ ಒಬ್ಬರು, ತಮ್ಮ ನೆಚ್ಚಿನ ನಟನ ಈ ನಿರ್ಧಾರಕ್ಕೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ನಾವು ರಜನಿ ಅವರ ಮಾತನ್ನು ಮಾತ್ರ ನಂಬುತ್ತೇವೆ. ರಜನಿಕಾಂತ್​ ಏನಾದರೂ ಏಪ್ರಿಲ್​ 14 ಕ್ಕೆ ಪಕ್ಷವನ್ನ ಸ್ಥಾಪಿಸಿದರೆ, ಆ ದಿನ ನಮಗೆ ಡಬಲ್​ ಖುಷಿ ಎಂದು ಹೇಳಿದ್ದಾರೆ.

ಏಪ್ರಿಲ್​ 14, ತಮಿಳುನಾಡಿನ ಜನತೆಗೆ ಹೊಸ ವರ್ಷವಾಗಿದ್ದು, ತಮಿಳು ಕ್ಯಾಲೆಂಡರ್​ನಲ್ಲಿ ಇದು ವರ್ಷದ ಮೊದಲ ದಿನವಾಗಿದೆ. ಈ ದಿನವನ್ನ ಸಾಂಪ್ರದಾಯಿಕ ಹಬ್ಬವನ್ನಾಗಿ ಆಚರಿಸಲಾಗುತ್ತದೆ.

Last Updated : Feb 11, 2020, 7:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.