ETV Bharat / bharat

ರಾಜ'ಸ್ಥಾನ' ಬಿಕ್ಕಟ್ಟು: ಸಚಿವರೊಂದಿಗೆ ಸಿಎಂ ಸಭೆ... ಶಾಸಕರೊಂದಿಗೆ ದೆಹಲಿ ತೆರಳಿದ ಡಿಸಿಎಂ!

ರಾಜಸ್ಥಾನದ ಕಾಂಗ್ರೆಸ್​ ಸರ್ಕಾರವನ್ನು ಕೆಡವಲು ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಪಕ್ಷದ ಹೈಕಮಾಂಡ್​ ಭೇಟಿ ಮಾಡಲು 25 ಶಾಸಕರನ್ನು ಕರೆದುಕೊಂಡು ಡಿಸಿಎಂ ಸಚಿನ್​ ಪೈಲಟ್​ ದೆಹಲಿಗೆ ತೆರಳಿದ್ದಾರೆ.

Rajasthan political turmoil
ರಾಜಸ್ಥಾನ ರಾಜಕೀಯ
author img

By

Published : Jul 12, 2020, 12:34 PM IST

ಜೈಪುರ: ರಾಜಸ್ಥಾನದ ಕಾಂಗ್ರೆಸ್​ ಸರ್ಕಾರವನ್ನು ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​, ಎಲ್ಲಾ ಸಚಿವರನ್ನು ಶನಿವಾರ ರಾತ್ರಿ ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ಸಭೆ ನಡೆಸಲಿದ್ದಾರೆ.

ಇದರ ಬೆನ್ನಲ್ಲೇ ಪಕ್ಷದ ಹೈಕಮಾಂಡ್​ ಭೇಟಿ ಮಾಡಲು 25 ಶಾಸಕರನ್ನು ಕರೆದುಕೊಂಡು ಡಿಸಿಎಂ ಸಚಿನ್​ ಪೈಲಟ್​ ದೆಹಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕೈ ಶಾಸಕರಲ್ಲದೇ ಕೆಲವು ಪಕ್ಷೇತರ ಶಾಸಕರು ಕೂಡ ಸರ್ಕಾರಕ್ಕೆ ಬೆಂಬಲ ಸೂಚಿಸಲು ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.

ಶಾಸಕರಿಗೆ ಆಮಿಷವೊಡ್ಡುವ ಮೂಲಕ ರಾಜ್ಯದ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ರಾಜಸ್ಥಾನದ 24ಕ್ಕೂ ಹೆಚ್ಚು ಕಾಂಗ್ರೆಸ್​ ಶಾಸಕರು ಶುಕ್ರವಾರ ರಾತ್ರೋರಾತ್ರಿ ಜಂಟಿ ಹೇಳಿಕೆ ಹೊರಡಿಸಿದ್ದರು.

ಬಳಿಕ ಪ್ರತಿಕ್ರಿಯೆ ನೀಡಿದ್ದ ಸಿಎಂ ಗೆಹ್ಲೋಟ್, ಮಧ್ಯಪ್ರದೇಶದ ಕಮಲನಾಥ್​ ಸರ್ಕಾರವನ್ನು ಉರುಳಿಸಿದಂತೆಯೇ ಬಿಜೆಪಿಯು ರಾಜಸ್ಥಾನ ಸರ್ಕಾರವನ್ನೂ ಕೆಡವಲು ಮುಂದಾಗಿದೆ ಎಂದು ಆರೋಪಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.