ETV Bharat / bharat

ಬಾಲಕಿಯ 'ಹತ್ಯಾ'ಚಾರಗೈದು ದುಷ್ಕೃತ್ಯ ಮೆರೆದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು - ವಿಧಿವಿಜ್ಞಾನ ಪ್ರಯೋಗಾಲಯದ ವರದಿ

ಘಟನೆ ನಡೆದ ವಾರದೊಳಗೆ ದುಷ್ಕೃತ್ಯಕ್ಕೆ ಕಾರಣವಾದ ಮಖ್ಯ ಆರೋಪಿಯನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟಿದ್ದಾರೆ. ಪೊಲೀಸರ ಚಲನವಲನ ಗಮನಿಸುತ್ತಿದ್ದ ಆರೋಪಿ ಗರಾಸಿಯಾ, ಬಂಧನದ ಭೀತಿಯಿಂದ ನಿರಂತರವಾಗಿ ಸ್ಥಳ ಬದಲಾಯಿಸುತ್ತಿದ್ದ. ಬೆನ್ನು ಬಿಡದ ಖಾಕಿ ಪಡೆ ಅವಿತು ಕುಳಿತಿರುವ ಸ್ಥಳಕ್ಕೆ ತೆರಳಿ ಕಾಮುಕನನ್ನು ಕರೆತಂದಿದ್ದಾರೆ..

rajasthan-man-arrested-for-rape-murder-of-minor
ಅಪ್ರಾಪ್ತ ಬಾಲಕಿಯ ಅತ್ಯಾಚಾರ
author img

By

Published : Oct 2, 2020, 6:42 PM IST

ಸಿಹೋರಿ (ರಾಜಸ್ಥಾನ): ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ ಮುಖ್ಯ ಆರೋಪಿಯೊಬ್ಬನನ್ನು ಇಲ್ಲಿನ ಪೊಲೀಸರು ಘಟನೆ ನಡೆದ ವಾರದೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೆ.26ರಂದು ಇಲ್ಲಿನ ತೆಲಾಪಿ ಖೇಡಾದಲ್ಲಿ 8 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಬಗ್ಗೆ ಎಫ್​ಐಆರ್​ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾಮುಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೆಲ್ಪಿಖೆಡಾ ನಿವಾಸಿ ನೋಕರಾಮ್ ಅಲಿಯಾಸ್ ಭಾರಮಾ ರಾಮ್ ಗರಾಸಿಯಾ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಬಾಲಕಿಯು ತನ್ನ ಸಹೋದರನೊಂದಿಗೆ ಸ್ನಾನ ಮಾಡಲೆಂದು ತೆರಳಿದ್ದಳು. ಈ ವೇಳೆ ಅಲ್ಲಿಗೆ ಬಂದ ಕಾಮುಕನು ಬಾಲಕಿಯನ್ನು ಹೆದರಿಸಿ ಅತ್ಯಾಚಾರ ಮಾಡಿದ್ದನು. ಸಂತ್ರಸ್ತೆಯು ಕೂಗಲು ಪ್ರಾರಂಭಿಸಿದಾಗ ಬಂಧಿತ ಕಾಮುಕನು ಬಾಲಕಿಯ ಕತ್ತು ಹಿಸುಕಿ ಕೊಲೆಗೈದಿದ್ದನು. ಪ್ರಕರಣದ ಗಂಭೀರತೆ ಅರಿತ ಎಸ್‌ಪಿ ಪೂಜಾ ಅವನಾ ಅವರ ಸೂಚನೆ ಮೇರೆಗೆ ರೇವದಾರ್ ಸಿಒ ನರೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಆರೋಪಿಗಳ ಶೋಧನೆಗಾಗಿ ತಂಡಗಳನ್ನು ರಚಿಸಲಾಗಿತ್ತು.

ಘಟನೆ ನಡೆದ ವಾರದೊಳಗೆ ದುಷ್ಕೃತ್ಯಕ್ಕೆ ಕಾರಣವಾದ ಮಖ್ಯ ಆರೋಪಿಯನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟಿದ್ದಾರೆ. ಪೊಲೀಸರ ಚಲನವಲನ ಗಮನಿಸುತ್ತಿದ್ದ ಆರೋಪಿ ಗರಾಸಿಯಾ, ಬಂಧನದ ಭೀತಿಯಿಂದ ನಿರಂತರವಾಗಿ ಸ್ಥಳ ಬದಲಾಯಿಸುತ್ತಿದ್ದ. ಬೆನ್ನು ಬಿಡದ ಖಾಕಿ ಪಡೆ ಅವಿತು ಕುಳಿತಿರುವ ಸ್ಥಳಕ್ಕೆ ತೆರಳಿ ಕಾಮುಕನನ್ನು ಕರೆತಂದಿದ್ದಾರೆ. ತನಿಖೆ ವೇಳೆ ತನ್ನ ದುಷ್ಕೃತ್ಯವನ್ನು ಆತ ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವನ್ನು ಕರೆದು ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು. ದುಷ್ಕೃತ್ಯದಲ್ಲಿ ಹಲವರು ಭಾಗಿಯಾಗಿರುವುದು ಕಂಡು ಬಂದಿತ್ತು. ಬೇರೆ ಬೇರೆ ಸ್ಥಳದಲ್ಲಿ ಅವಿತು ಕುಳಿತಿದ್ದ ಆರೋಪಿಗಳಾದ ಮೌಂಟ್ ಅಬು, ಉತ್ತರಾಜ್, ಗಿರ್ವಾರ್, ಚಂಡೇಲಾ, ಇಶಾರಾ, ಕೃಷ್ಣಗಂಜ್ ಎಂಬ ಆರೋಪಿಗಳನ್ನು ಸೈಬರ್ ತಂಡದ ಸಹಾಯದೊಂದಿಗೆ ಇಂದು ಬಂಧಿಸಲಾಗಿದೆ.

ಸಿಒ ನರೇಂದ್ರ ಸಿಂಗ್ ನೇತೃತ್ವದ ಪೊಲೀಸ್ ತಂಡದಲ್ಲಿ ಅನಾದರಾ ತನಡಿಕರಿ ಹಮೀರ್ಸಿಂಗ್, ಹೆಡ್​ಕಾನ್ಸ್​ಟೇಬಲ್​ ಗಣೇಶರಂ, ಕಾನ್ಸ್​ಟೇಬಲ್​ಗಳಾದ ಬನ್ಸಿಂಗ್, ಲಕ್ಷ್ಮಿ ನಾರಾಯಣ್, ದೇವೇಂದ್ರ ಸಿಂಗ್ ಮತ್ತು ಖೇರಾಜ್ ರಾಮ್ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.