ಮಧ್ಯಪ್ರದೇಶ: ಚಲಿಸುತ್ತಿದ್ದ ರೈಲಿನಿಂದ ಅಚಾನಕ್ಕಾಗಿ ಉರುಳುತ್ತಿದ್ದ ವೃದ್ಧನ ಜೀವ ಉಳಿಸಿದ ಪೊಲೀಸ್ ಒಬ್ಬರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉಜ್ಜಯಿನಿ ಬಳಿಯ ನಾಗ್ಡಾ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನಲ್ಲೇ, ಸ್ವಾಧೀನ ಕಳೆದುಕೊಂಡ ವೃದ್ಧನನ್ನು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಕಾನ್‌ಸ್ಟೆಬಲ್ ಅಪಾಯದಿಂದ ಉಳಿಸಿದ್ದು ಸಂಪೂರ್ಣ ಘಟನೆ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರೈಲು ಇನ್ನೇನು ನಿಲ್ದಾಣದಲ್ಲಿ ನಿಲ್ಲಬೇಕಿತ್ತು ಆದರೆ, ರೈಲು ಚಲಿಸುವಾಗಲೇ ವೃದ್ಧನೋರ್ವ ತನ್ನ ಸಮತೋಲನ ಕಳೆದುಕೊಂಡಿದ್ದಾನೆ. ವೃದ್ಧನು ಚಕ್ರಗಳ ನಡುವೆ ಬೀಳುವ ಮೊದಲು, ಕಾನ್‌ಸ್ಟೆಬಲ್ ಆತನನ್ನು ರಕ್ಷಿಸಿದ್ದಾನೆ.