ETV Bharat / bharat

ಸಂಸದರಾಗಿ ಕಾರ್ಯಾರಂಭ ಮಾಡಿದ ರಾಹುಲ್​: ರೈತರ ಆತ್ಮಹತ್ಯೆ ವರದಿ ನೀಡಲು ಸಿಎಂಗೆ ಪತ್ರ

author img

By

Published : May 31, 2019, 11:37 PM IST

ಕೇರಳ ರಾಜ್ಯದಲ್ಲಾದ ರೈತರ ಆತ್ಮಹತ್ಯೆ ಕುರಿತು ತನಿಖೆ ನಡೆಸುವಂತೆ ಸಂಸದ ರಾಹುಲ್​ ಗಾಂಧಿ ಅವರು ಸಿಎಂ ಪಿಣರಾಯಿ ವಿಜಯನ್​ ಅವರಿಗೆ ಪತ್ರ ಬರೆದಿದ್ದಾರೆ.

ರಾಹುಲ್​ ಗಾಂಧಿ

ತಿರುವನಂತಪುರ: ಕೇರಳದ ವಯನಾಡಿನ ಸಂಸದರಾಗಿ ಆಯ್ಕೆಯಾಗಿರುವ ರಾಹುಲ್​ ಗಾಂಧಿ, ಈಗಾಗಲೇ ಕಾರ್ಯಾರಂಭ ಮಾಡಿದ್ದಾರೆ. ರಾಜ್ಯದಲ್ಲಾದ ರೈತರ ಆತ್ಮಹತ್ಯೆ ಕುರಿತು ತನಿಖೆ ನಡೆಸುವಂತೆ ಸಿಎಂಗೆ ಪತ್ರ ಬರೆದು ತಿಳಿಸಿದ್ದಾರೆ.

ಮೇ 25ರಂದು ವಿ. ದಿನೇಶ್​ ಕುಮಾರ್​ ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲಬಾಧೆಯಿಂದ ಈತ ಆತ್ಮಹತ್ಯೆ ಮಾಡಿಕೊಂಡನೆಂದು ಕುಟುಂಬದವರು ತಿಳಿಸಿದ್ದರು. ಇವರಂತೆಯೇ ಹಲವಾರು ರೈತರು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರಾಹುಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗ್ತಿದೆ.

ಕೇರಳ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿದ್ದರೂ ಸಹ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ದಿನೇಶ್​ ಸಾವು ಹಾಗೂ ಅವರ ಕುಟುಂಬದ ಆರ್ಥಿಕ ಸ್ಥಿತಿಗತಿ ಬಗ್ಗೆ ಸೂಕ್ತ ತನಿಖೆಯಾಗಬೇಕು. ನಮ್ಮ ರೈತರನ್ನು ಸಾಲಮುಕ್ತರನ್ನಾಗಿಸುವುದು ಮುಖ್ಯ. ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನನ್ನ ಸಂಪೂರ್ಣ ಸಹಕಾರವಿದೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಪಿಣರಾಯಿ ವಿಜಯನ್​ ಅವರು, ರೈತರ ಆತ್ಮಹತ್ಯೆ ಕುರಿತಾಗಿ ರಾಜ್ಯ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಸೂಕ್ತ ಪರಿಹಾರ ದೊರೆಯಬೇಕಿದೆ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದಿದ್ದಾರೆ. ಅಲ್ಲದೆ, ದಿನೇಶ್​ ಆತ್ಮಹತ್ಯೆ ಕುರಿತಾಗಿ ತನಿಖಾ ವರದಿಯನ್ನು ನೀಡುವುದಾಗಿ ಸಹ ಹೇಳಿದ್ದಾರೆ.

Intro:Body:

Rahul

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.