ETV Bharat / bharat

ಕೇಂದ್ರ ಕೃಷಿ ನೀತಿಗಳಿಗೆ ವಿರೋಧ: ರಾಹುಲ್ ಗಾಂಧಿಯಿಂದ ಟ್ರ್ಯಾಕ್ಟರ್ ರ‍್ಯಾಲಿ

ಟ್ರ್ಯಾಕ್ಟರ್ ರ‍್ಯಾಲಿಗೆ ರೈತರ ಸಂಘಟನೆಗಳು ಬೆಂಬಲ ನೀಡಲಿದ್ದು, ಮೂರು ದಿನಗಳಲ್ಲಿ 50 ಕಿ.ಮೀ ಕ್ರಮಿಸಲಿದೆ. ರ‍್ಯಾಲಿ ಮೂರು ದಿನಗಳಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.

author img

By

Published : Oct 1, 2020, 8:33 PM IST

Rahul Gandhi
ರಾಹುಲ್ ಗಾಂಧಿ

ನವದೆಹಲಿ: ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅ. 3 ರಿಂದ 5 ರವರೆಗೆ ಪಂಜಾಬ್‌ನಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಮತ್ತು ಪಂಜಾಬ್ ವ್ಯವಹಾರಗಳ ಉಸ್ತುವಾರಿ, ಹರೀಶ್ ರಾವತ್, ಪ್ರದೇಶ ಪಂಜಾಬ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುನಿಲ್ ಜಖರ್ ಮತ್ತು ಎಲ್ಲಾ ರಾಜ್ಯ ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರೈತರ ಉದ್ವೇಗ, ನೋವು, ಅವರ ಜೀವನೋಪಾಯ ಮತ್ತು ಭವಿಷ್ಯವನ್ನು ಕೇಂದ್ರದ ಶಾಸನಗಳು ಅಪಾಯಕ್ಕೆ ಸಿಲುಕಿಸಿವೆ ಹಾಗಾಗಿ ರೈತರೊಂದಿಗೆ ದನಿಗೂಡಿಸಲು ಸಿದ್ಧರಾಗಿದ್ದಾರೆ.

ಟ್ರ್ಯಾಕ್ಟರ್ ರ‍್ಯಾಲಿಗೆ ರೈತರ ಸಂಘಟನೆಗಳು ಬೆಂಬಲ ನೀಡಲಿದ್ದು, ಮೂರು ದಿನಗಳಲ್ಲಿ 50 ಕಿ.ಮೀ ಕ್ರಮಿಸಲಿದೆ. ರ‍್ಯಾಲಿಗೆ ಮೂರು ದಿನಗಳಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ. ಇದನ್ನು ಕಟ್ಟುನಿಟ್ಟಾದ ಕೋವಿಡ್ -19 ಪ್ರೋಟೋಕಾಲ್‌ಗಳ ಮಧ್ಯೆ ನಡೆಸಲಾಗುವುದು ಎಂದು ಪಂಜಾಬ್ ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.

ಪ್ರತಿಭಟನಾ ರ‍್ಯಾಲಿಯು ಅಕ್ಟೋಬರ್ 3 ರಂದು, 22 ಕಿ.ಮೀ ನಷ್ಟು ಕ್ರಮಿಸಲಿದೆ. ಮೊದಲು ಬಡ್ನಿ ಕಲಾನ್​ನಲ್ಲಿ ಸಾರ್ವಜನಿಕ ಸಭೆಯೊಂದಿಗೆ ಪ್ರಾರಂಭವಾಗಿ ಲೋಪನ್ ಮೂಲಕ ಚಲಿಸಲಿದೆ. ಆ ಬಳಿಕ ಜಾಗ್ರಾವ್ (ಲುಧಿಯಾನ) ದಲ್ಲಿ ಮುಂದುವರಿದು, ಅಲ್ಲಿಂದ ಅದು ಚಕರ್, ಲಖಾ ಮತ್ತು ಮನೋಕೆಗಳಲ್ಲಿ ಕ್ರಮಿಸಲಿದೆ. ಅಂತಿಮವಾಗಿ ಜಟ್ಪುರ (ರಾಯ್ಕೋಟ್, ಲುಧಿಯಾನ) ಸಾರ್ವಜನಿಕ ಸಭೆಯಲ್ಲಿ ಅಂತ್ಯಗೊಳ್ಳುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.

ಅ.4 ರಂದು, ರಾಹುಲ್ ಗಾಂಧಿ ಅವರು ಭವಾನಿಗರ್​ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅ. 5 ರಂದು ದುಧಾನ್ ಸಾಧನ್ (ಪಟಿಯಾಲ) ದಿಂದ ಸಾರ್ವಜನಿಕ ಸಭೆಯೊಂದಿಗೆ ಪ್ರತಿಭಟನೆ ಪ್ರಾರಂಭವಾಗಲಿದ್ದು, ಬಳಿಕ ಟ್ರಾಕ್ಟರ್​ಗಳು ಪೆಹೋವಾ ಗಡಿಗೆ 10 ಕಿ.ಮೀ ಪ್ರಯಾಣಿಸಲಿದ್ದು, ಅಲ್ಲಿಂದ ರಾಹುಲ್ ಗಾಂಧಿ ಸರಣಿ ಕಾರ್ಯಕ್ರಮಗಳಿಗಾಗಿ ಹರಿಯಾಣಕ್ಕೆ ಪ್ರಯಾಣಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.