ವಯನಾಡ್ (ಕೇರಳ): ಪೂರ್ವ ಲಡಾಖ್‌ನಲ್ಲಿ ಚೀನಾ ನಡೆಸಿದ ಅತಿಕ್ರಮಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಕಾಯ್ದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದು, ಚೀನಾ 1,200 ಕಿ.ಮೀ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಿದ್ದಾರೆ.
ತಮ್ಮ ಸಂಸದೀಯ ಕ್ಷೇತ್ರದಲ್ಲಿ ಮಾಧ್ಯಮಗಳೊಂದಿಗೆ ಸಂವಹನ ನಡೆಸಿದ ರಾಹುಲ್ ಗಾಂಧಿ, ಗಡಿಯಲ್ಲಿ ಚೀನಾದಿಂದ ಉಂಟಾದ ಉದ್ವಿಗ್ನತೆಯನ್ನು ಎನ್‌ಡಿಎ ಸರ್ಕಾರ ಜನರ ಗಮನಕ್ಕೆ ತರುತ್ತಿಲ್ಲ ಎಂದು ಆರೋಪಿಸಿದರು.
"ಕಳೆದ ಎರಡು ತಿಂಗಳುಗಳಲ್ಲಿ ಪ್ರಧಾನ ಮಂತ್ರಿ ಚೀನಾ ಬಗ್ಗೆ ಮಾತನಾಡುವುದನ್ನು ನೀವು ಕೇಳಿದ್ದೀರಾ? ಅವರು ಚೀನಾ ಪದವನ್ನು ಏಕೆ ಹೇಳುತ್ತಿಲ್ಲ ಎಂದು ನೀವು ಭಾವಿಸುತ್ತೀರಿ? ಇದಕ್ಕೆ ಕಾರಣ ಅವರು ಚೀನಾದಿಂದಾದ ಉದ್ವಿಗ್ನತೆ ಕುರಿತು ದೇಶದ ಜನರ ಗಮನಕ್ಕೆ ತರಲು ಬಯಸುವುದಿಲ್ಲ. ಚೀನೀಯರು ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ. ಚೀನಿಯರು ನಮ್ಮ ಪ್ರದೇಶದ 1,200 ಚದರ ಕಿಲೋಮೀಟರ್‌ಗಳನ್ನು ಆಕ್ರಮಿಸಿಕೊಂಡಿದ್ದಾರೆ "ಎಂದುರಾಹುಲ್ ಹೇಳಿದರು.
"ನಮ್ಮ ಪ್ರದೇಶದಿಂದ ಚೀನಿಯರನ್ನು ಹೊರಹಾಕಲು ನೀವು ಯಾವಾಗ ಯೋಜಿಸುತ್ತಿದ್ದೀರಿ ಎಂದು ನಾನು ಪ್ರಧಾನಿಯನ್ನು ಕೇಳುತ್ತೇನೆ. ಇದೀಗ ಅದಕ್ಕಿಂತ ದೊಡ್ಡ ಸಮಸ್ಯೆ ಇದೆ ಎಂದು ನೀವು ಭಾವಿಸುತ್ತೀರಾ? ಭಾರತದ ಭೂಪ್ರದೇಶದ ಬಗ್ಗೆ ಪ್ರಧಾನಮಂತ್ರಿಯವರಿಗೆ ಏಕೆ ಒಂದು ಮಾತು ಕೂಡ ಆಡುತ್ತಿಲ್ಲ? ಇದು ವಿಚಿತ್ರ ಸಂಗತಿಯಾಗಿದೆ" ಎಂದು ಅವರು ಹೇಳಿದರು.