ಚಂಡೀಗಢ್ (ಪಂಜಾಬ್) : ಕೊರೊನಾ ಪ್ರೇರಿತ ಲಾಕ್ಡೌನ್ ಸಮಯದಲ್ಲಿ ಚಂಡೀಗಢ್ನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಹಿರಿಯರು ಮತ್ತು ವಿವಾಹಿತ ದಂಪತಿಗೆ ಪಂಜಾಬ್ ವಿಶ್ವವಿದ್ಯಾಲಯ (ಪಿಯು) ಎಲ್ಲಾ ವಿಷಯಗಳ ಕೌನ್ಸೆಲಿಂಗ್ ನೀಡಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಕುಟುಂಬ, ವೃತ್ತಿಪರರು ಮತ್ತು ಇತರರಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗೆ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘವು ವಿಶೇಷ ಸಹಾಯವಾಣಿ ಸ್ಥಾಪಿಸಿತ್ತು. 'ಲಾಕ್ಡೌನ್ ಘೋಷಿಸಿದ ನಂತರ, ಜನರಿಗೆ ಅವಶ್ಯಕತೆಗಳು ಮತ್ತು ದೈಹಿಕ ಬೆಂಬಲಕ್ಕಿಂತ ಹೆಚ್ಚಾಗಿ, ಜನರಿಗೆ ಮಾನಸಿಕ ಬೆಂಬಲ ಬೇಕಾಗುತ್ತದೆ ಎಂಬ ತೀರ್ಮಾನಕ್ಕೆ ಬಂದರು. ಹಾಗಾಗಿ ಸಹಾಯವಾಣಿ ಪ್ರಾರಂಭಿಸಿದರು' ಎಂದು ಪಿಯು ಅಲುಮ್ನಿ ಡೀನ್ ದೀಪ್ತಿ ಅರೋರಾ ಹೇಳಿದರು.
ಸಂಘವು ಸ್ವಯಂಪ್ರೇರಿತ ಸಮಾಲೋಚನೆ ಮಾಡಲು ನಿರ್ಧರಿಸಿ, 'ಟಾಕ್ ಟು ಪಂಜಾಬ್ ಯೂನಿವರ್ಸಿಟಿ ಅಸೋಸಿಯೇಷನ್' ಸಹಾಯವಾಣಿ ಪ್ರಾರಂಭಿಸಿತು. ತಮ್ಮ ಅಧ್ಯಯನದ ಬಗ್ಗೆ ಆತಂಕದ ಪರಿಸ್ಥಿತಿಯಲ್ಲಿದ್ದ ವಿದ್ಯಾರ್ಥಿಗಳು ಈ ಮುಖೇನ ತಮ್ಮ ಪ್ರಶ್ನೆಗಳನ್ನು ಕೇಳುವ ವ್ಯವಸ್ಥೆ ಮಾಡಿದೆ.
ಸುಮಾರು 75 ಸಂಘದ ಸದಸ್ಯರು ದೂರವಾಣಿ ಮೂಲಕ ಜನರಿಗೆ ಸಲಹೆ ನೀಡಿದರು. ಈ 75 ಜನರಲ್ಲಿ ಕೇವಲ 25-30 ಪ್ರತಿಶತದಷ್ಟು ಮಂದಿ ಮಾತ್ರ ತರಬೇತಿ ಪಡೆದ ಸಲಹೆಗಾರರಾಗಿದ್ದಾರೆ ಎಂದು ಅರೋರಾ ಹೇಳಿದ್ದಾರೆ.