ETV Bharat / bharat

ಕೊಲ್ಲೋಕೆ ಇಷ್ಟ ಅಂತ ಸಹೋದರನ ಮಕ್ಕಳ ಕೊಂದು, ಅಣ್ಣನಿಗೆ ಸ್ಕೆಚ್​ ಹಾಕಿದ್ದ ಸೈಕೋ ಕಿಲ್ಲರ್!

author img

By

Published : Jun 14, 2020, 11:00 AM IST

ಸಹೋದರನ ಅಪ್ರಾಪ್ತ ಮಕ್ಕಳನ್ನೇ ಕೊಂದು, ಅಣ್ಣನನ್ನು ಕೊಲ್ಲಲು ಯತ್ನಿಸಿದ ಸೈಕೋ ಕಿಲ್ಲರ್​ನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

Psycho killer
ಸಾಂದರ್ಭಿಕ ಚಿತ್ರ

ಇಟಾ(ಉತ್ತರ ಪ್ರದೇಶ): ಸಹೋದರರ ಮಕ್ಕಳಾದ ಇಬ್ಬರು ಅಪ್ರಾಪ್ತರ ಕೊಲೆಗೈದು, ಮೂರನೇಯದಾಗಿ ತನ್ನ ಅಣ್ಣನನ್ನೇ ಕೊಡಲಿಯಿಂದ ಕೊಲ್ಲಲು ಸಂಚು ರೂಪಿಸಿದ ಆರೋಪದಲ್ಲಿ 30 ವರ್ಷ ವಯಸ್ಸಿನ ಸೈಕೋ ಕಿಲ್ಲರ್​ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಟಾ ಜಿಲ್ಲೆಯ ಧರ್ಮಪುರ್​ ಗ್ರಾಮದ ರಾಧೆಶ್ಯಾಮ್​ ಬಂಧಿತ ಸೈಕೋ ಕಿಲ್ಲರ್ ಆಗಿದ್ದು, ಫೆಬ್ರವರಿ 6ರಂದು ತನ್ನ ಸಹೋದರನ ಮಗನಾದ ಸತ್ಯೇಂದ್ರ (6) ಹಾಗೂ ಜೂನ್​ 9ರಂದು ಮತ್ತೊಬ್ಬ ಸಹೋದರನ ಮಗನಾದ ಪ್ರಶಾಂತ್​ (9) ಅನ್ನು ಕೊಂದಿದ್ದ ಎಂದು ಆರೋಪ ಕೇಳಿಬಂದಿದೆ.

ಜೊತೆಗೆ ಜೂನ್​ 11ರ ರಾತ್ರಿ ತನ್ನ ಅಣ್ಣನಾದ ವಿಶ್ವನಾಥ್ ಸಿಂಗ್ ನಿದ್ರೆ ಮಾಡುತ್ತಿರಬೇಕಾದರೆ​ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದಾಗ ಸಂಬಂಧಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಸಕ್ರೌಲಿ ಸ್ಟೇಷನ್​ ಹೌಸ್ ಆಫೀಸರ್​ ಕೃತ್ಪಾಲ್​ ಸಿಂಗ್ ಸ್ಪಷ್ಟಪಡಿಸಿದ್ದಾರೆ.

'ಕೊಲೆ ಮಾಡುವುದು ಇಷ್ಟ'!

ಪೊಲೀಸ್​ ಠಾಣೆಯಲ್ಲಿ ಸೈಕೋ ಕಿಲ್ಲರ್​ನನ್ನು ವಿಚಾರಣೆಗೆ ಒಳಪಡಿಸಿದಾಗ ತನಗೆ ಕೊಲೆ ಮಾಡುವುದು ಇಷ್ಟದ ಕೆಲಸ ಎಂದು ಉತ್ತರಿಸಿದ್ದಾನೆ. ಜೊತೆಗೆ ತಾನೇ ತನ್ನ ಸಹೋದರರ ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದು, ಇನ್ನೂ ಮೂವರ ಕೊಲೆಗೆ ಸಂಚು ರೂಪಿಸಿದ್ದನ್ನು ಬಹಿರಂಗಪಡಿಸಿದ್ದಾನೆ ಎಂದು ಇಟಾದ ಎಸ್​​ಪಿ ಸುನೀಲ್​ ಕುಮಾರ್​ ಸಿಂಗ್​ ಹೇಳಿದ್ದಾರೆ.

ಈ ಮೊದಲು ಅಪ್ರಾಪ್ತ ಬಾಲಕ ಸತ್ಯೇಂದ್ರನನ್ನು ಕೊಂದ ಆರೋಪದಲ್ಲಿ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಶಾಂತ್​ ಕೊಲೆ ಪ್ರಕರಣದಲ್ಲಿ ಮೂವರ ಮೇಲೆ ಕೇಸ್​ ದಾಖಲಾಗಿದೆ. ಈಗ ಅವರೆಲ್ಲರನ್ನೂ ಬಿಡುಗಡೆ ಮಾಡಿ ರಾಧೆಶ್ಯಾಮ್​ ಮೇಲೆ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.