ETV Bharat / bharat

ಗಂಗಾ ನದಿಯಲ್ಲಿ ಪ್ರಣಬ್ ಮುಖರ್ಜಿ ಚಿತಾ ಭಸ್ಮ ವಿಸರ್ಜನೆ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಚಿತಾ ಭಸ್ಮವನ್ನು ಮಂಗಳವಾರ ಸಂಜೆ ಇಲ್ಲಿನ ಹರ್ ಕಿ ಪೌರಿಯಲ್ಲಿರುವ ಗಂಗಾ ನದಿಯಲ್ಲಿ ಪ್ರಣಬ್​ ಪುತ್ರ ಅಭಿಜಿತ್ ಮುಖರ್ಜಿ ವಿಸರ್ಜನೆ ಮಾಡಿದ್ದಾರೆ.

Pranab Mukherjee's ashes immersed in Ganga at Har ki Pauri
ಹರ್ ಕಿ ಪೌರಿಯ ಗಂಗಾ ಸೇರಿದ ಮುಖರ್ಜಿ ಅವರ ಚಿತಾಭಸ್ಮ
author img

By

Published : Sep 2, 2020, 11:23 AM IST

ಹರಿದ್ವಾರ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಚಿತಾ ಭಸ್ಮವನ್ನು ಮಂಗಳವಾರ ಸಂಜೆ ಇಲ್ಲಿನ ಹರ್ ಕಿ ಪೌರಿಯಲ್ಲಿರುವ ಗಂಗಾ ನದಿಯಲ್ಲಿ ಅವರ ಪುತ್ರ ಅಭಿಜಿತ್ ಮುಖರ್ಜಿ ವಿಸರ್ಜಿಸಿದ್ದಾರೆ.

ಹರ್ ಕಿ ಪೌರಿಯ ಗಂಗಾ ನದಿಯಲ್ಲಿ ಪ್ರಣಬ್ ಮುಖರ್ಜಿ ಚಿತಾ ಭಸ್ಮ ವಿಸರ್ಜನೆ

ಚಿತಾ ಭಸ್ಮ ವಿಸರ್ಜಿಸುವ ಮೊದಲು ಗಂಗಾ ಸಭಾ ಮುಖ್ಯಸ್ಥ ಪ್ರದೀಪ್ ಝಾ, ಪ್ರಧಾನ ಕಾರ್ಯದರ್ಶಿ ತನ್ಮಯ್ ವಸಿಷ್ಠ ಮತ್ತು ಸಭಾಪತಿ ಕೃಷ್ಣ ಕುಮಾರ್ ಶರ್ಮಾ ಅವರ ಸಮ್ಮುಖದಲ್ಲಿ ಮಾಜಿ ರಾಷ್ಟ್ರಪತಿಯವರ ಭಾವಚಿತ್ರದ ಮುಂದೆ ಪೂಜೆ ನೆರವೇರಿಸಲಾಯಿತು.

Pranab Mukherjee's ashes immersed in Ganga at Har ki Pauri
ಹರ್ ಕಿ ಪೌರಿಯ ಗಂಗಾ ನದಿಯಲ್ಲಿ ಪ್ರಣಬ್ ಮುಖರ್ಜಿ ಚಿತಾ ಭಸ್ಮ ವಿಸರ್ಜನೆ

ಈ ವೇಳೆ ಕಾಂಗ್ರೆಸ್ ಮುಖಂಡರಾದ ಸತ್ಪಾಲ್ ಬ್ರಹ್ಮಚಾರಿ, ಸಂಜಯ್ ಅಗ್ರವಾಲ್, ಸಂಜಯ್ ಪಲಿವಾಲ್ ಉಪಸ್ಥಿತರಿದ್ದರು.

ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ ಸಂಜೆ ನಿಧನರಾದರು. ದೀರ್ಘ ಕಾಲದ ಕಾಂಗ್ರೆಸ್ ನಾಯಕರಾಗಿದ್ದ ಇವರು ಏಳು ಬಾರಿ ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಕೊರೊನಾ ವರದಿ ಕೂಡ ಪಾಸಿಟಿವ್​ ಬಂದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.