ETV Bharat / bharat

ಅನಿಲ ಸೋರಿಕೆ ಭೀತಿಯಿಂದ ಜನ ಬೀಚ್ ಬದಿಯ ರಸ್ತೆಯಲ್ಲೇ ಮಲಗಿದರು..

author img

By

Published : May 8, 2020, 5:44 PM IST

ರಾಮಕೃಷ್ಣ ಬೀಚ್ ಪಕ್ಕದ ಫುಟ್‌ಪಾತ್‌ನಲ್ಲಿ ಅಪಾರ ಸಂಖ್ಯೆಯ ಜನರು ಬೀಚ್ ರಸ್ತೆಯಲ್ಲೇ ಬಂದು ಮಲಗಿದ್ದರು. ಎನ್‌ಎಡಿ ಜಂಕ್ಷನ್ ಪ್ರದೇಶದಲ್ಲಿ ಹಲವಾರು ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಇದ್ದವು.

Vizag
ಬೀಚ್ ಬದಿಯ ರಸ್ತೆಯಲ್ಲಿ ಮಲಗಿದ ಅಸಹಾಯಕರು

ವಿಶಾಖಪಟ್ಟಣ : ಅನಿಲ ಸೋರಿಕೆ ದುರಂತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಮನೆಗಳನ್ನು ಸ್ಥಳಾಂತರಿಸಿದ ಹಲವು ಜನ ಇಲ್ಲಿನ ರಾಮಕೃಷ್ಣ ಬೀಚ್‌ನ ಉದ್ದಕ್ಕೂ ರಸ್ತೆಯಲ್ಲೇ ಮಲಗಿದ್ದಾರೆ.

ಅನಿಲ ಸೋರಿಕೆ ದುರ್ಘಟನೆಯ ಸ್ಥಳದಿಂದ ಎರಡು ಕಿ.ಮೀ ವ್ಯಾಪ್ತಿಯವರೆಗೆ ವಾಸಿಸುತ್ತಿದ್ದ ಜನರನ್ನು ಪೊಲೀಸರು ಸ್ಥಳಾಂತರಿಸಿದ್ದರು. ಆದರೂ ಭಯಭೀತರಾದ ಜನರು ಸುಮಾರು 10 ಕಿ.ಮೀ ವ್ಯಾಪ್ತಿಯವರೆಗಿನ ತಮ್ಮ ತಮ್ಮ ಮನೆಗಳನ್ನು ತೊರೆದು ಬೀಚ್ ಬದಿಯ ರಸ್ತೆ​ಗಳಲ್ಲೇ ನೆಲೆ ಕಂಡುಕೊಂಡಿದ್ದರು. ರಾಮಕೃಷ್ಣ ಬೀಚ್ ಪಕ್ಕದ ಫುಟ್‌ಪಾತ್‌ನಲ್ಲಿ ಅಪಾರ ಸಂಖ್ಯೆಯ ಜನರು ಬೀಚ್ ರಸ್ತೆಯಲ್ಲೇ ಬಂದು ಮಲಗಿದ್ದರು. ಎನ್‌ಎಡಿ ಜಂಕ್ಷನ್ ಪ್ರದೇಶದಲ್ಲಿ ಹಲವಾರು ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಇದ್ದವು.

ವಿಶಾಖಪಟ್ಟಣ ಪೊಲೀಸ್ ಆಯುಕ್ತರಾದ ಆರ್ ಕೆ ಮೀನಾ, ಭಯಭೀತರಾಗದಂತೆ ಜನರನ್ನು ಕೋರಿದ್ದರು. ಅಲ್ಲದೆ ಕೇವಲ ಮುನ್ನೆಚ್ಚರಿಕೆ ಕ್ರಮದ ದೃಷ್ಟಿಯಿಂದ ಅನಿಲ ಸೋರಿಕೆ ಪ್ರದೇಶದ ಸುತ್ತಮುತ್ತಲಿನ ಎರಡು ಕಿಲೋಮೀಟರ್ ಪ್ರದೇಶದ ಜನರನ್ನು ಸ್ಥಳಾಂತರಿಸಿದ್ದೇವೆ ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.