ETV Bharat / bharat

ಸರ್ಕಾರದ ಕಾರ್ಯಸೂಚಿಗಳು 'ನಿರ್ಮಲ' ಆಗಿದ್ದಾಗ ಮಾತ್ರ ದೇಶದ ಪರಿಸರ ಶುದ್ಧಿ ಸಾಧ್ಯ

ಜಗತ್ತಿನಲ್ಲಿಯೇ ಮಾಲಿನ್ಯ ಸಂಬಂಧಿ ಸಾವುಗಳ ರಾಜಧಾನಿ ಎನಿಸಿಕೊಂಡಿರುವ ಭಾರತಕ್ಕೆ ಭವಿಷ್ಯದಲ್ಲಿಯೂ ಇದೇ ಪಟ್ಟ ಮುಂದುವರೆಯಲಿದೆ ಎಂದು ಹೇಳುತ್ತಿದೆ ಇತ್ತೀಚೆಗೆ ನಡೆದಿರುವ ಒಂದು ಅಧ್ಯಯನ.

pollution related deaths, pollution related deaths in India, pollution related deaths news, pollution related deaths latest news, ಮಾಲಿನ್ಯ ಸಂಬಂಧಿತ ಸಾವುಗಳು, ಭಾರತದಲ್ಲಿ ಮಾಲಿನ್ಯ ಸಂಬಂಧಿತ ಸಾವುಗಳು, ಮಾಲಿನ್ಯ ಸಂಬಂಧಿತ ಸಾವುಗಳು ಸುದ್ದಿ,
ಸಾಂದರ್ಭಿಕ ಚಿತ್ರ
author img

By

Published : Dec 25, 2019, 10:32 PM IST

40 ರಾಷ್ಟ್ರಗಳ 400 ಸಂಸ್ಥೆಗಳನ್ನು ಒಳಗೊಂಡಿರುವ ಗ್ಲೋಬಲ್ ಅಲಯನ್ಸ್ ಆನ್ ಹೆಲ್ತ್ ಅಂಡ್ ಪೊಲ್ಯೂಷನ್ ಸಂಸ್ಥೆ ( ಜಿ ಎ ಎಚ್‌ ಪಿ ) ಆರೋಗ್ಯ ಮತ್ತು ಮಾಲಿನ್ಯ ಕುರಿತಂತೆ ಅಧ್ಯಯನ ನಡೆಸುತ್ತದೆ. ಅದರ ಒಂದು ವರದಿ ಹೇಳುವ ಪ್ರಕಾರ 2017ರಲ್ಲಿ ಜಗತ್ತಿನ ಎಲ್ಲೆಡೆ ಸಂಭವಿಸಿದ ಸಾವುಗಳಲ್ಲಿ ಶೇ 15ರಷ್ಟು ಮಾಲಿನ್ಯಕ್ಕೆ ಸಂಬಂಧಿ ಸಾವುಗಳಾಗಿವೆ. ಆಶ್ಚರ್ಯಕರ ಸಂಗತಿ ಎಂದರೆ ಭಾರತ ಮತ್ತು ಚೀನಾದಲ್ಲಿ ಅಂತಹ ಮರಣ ಪ್ರಮಾಣ ಹೆಚ್ಚು ಎಂದು ಅಧ್ಯಯನದ ಒಟ್ಟು ಸಾರಾಂಶ ಬೊಟ್ಟು ಮಾಡಿದೆ.

ಹಲವು ದೇಶಗಳಲ್ಲಿ ಒಟ್ಟು 83 ಲಕ್ಷ ಹಠಾತ್ ಸಾವುಗಳು ಸಂಭವಿಸಿವೆ. ಅವುಗಳಲ್ಲಿ ಭಾರತದಲ್ಲಿ 23 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ ಹೀಗೆ ಸತ್ತವರ ಸಂಖ್ಯೆ 18 ಲಕ್ಷ. ಉಳಿದಂತೆ ನೈಜೀರಿಯಾದಲ್ಲಿ 2. 79 ಲಕ್ಷ, ಇಂಡೋನೇಷ್ಯಾದಲ್ಲಿ 2.32 ಲಕ್ಷ, ಪಾಕಿಸ್ತಾನದಲ್ಲಿ 2.23 ಲಕ್ಷ ಮಂದಿ ಅಕಾಲಿಕ ಸಾವಿಗೆ ತುತ್ತಾಗಿದ್ದಾರೆ.

ಅಮೆರಿಕದಲ್ಲಿ ಕೂಡ 2 ಲಕ್ಷ ಮಂದಿ ಮರಣ ಹೊಂದಿದ್ದಾರೆ. ಇದನ್ನು ಗಮನಿಸಿದರೆ ಮಾಲಿನ್ಯದ ತೀವ್ರತೆ ಎಷ್ಟಿದೆ ಎಂಬುದು ಅರ್ಥ ಆಗುತ್ತದೆ.

ಜಿ ಎ ಎಚ್‌ ಪಿ ವರದಿ ಪ್ರಕಾರ ಬಾಂಗ್ಲಾದೇಶ, ರಷ್ಯಾ, ಇಥಿಯೋಪಿಯಾ, ಬ್ರೆಜಿಲ್ ಸೇರಿದಂತೆ ಮೇಲಿನ 10 ರಾಷ್ಟ್ರಗಳಲ್ಲಿ ಮೂರನೇ ಎರಡರಷ್ಟು ಮಾಲಿನ್ಯ ಸಂಬಂಧಿ ಮರಣ ಸಂಭವಿಸಿರುವುದು ದೃಢಪಟ್ಟಿದೆ. ವಾಹನ ಮತ್ತು ಕೈಗಾರಿಕಾ ಮಾಲಿನ್ಯದಿಂದಾಗಿಯೇ 34 ಲಕ್ಷ ಮಂದಿ ( ಶೇ 40 ) ಇಹಲೋಕ ತ್ಯಜಿಸಿದ್ದಾರೆ.

ಪ್ರತಿ ದೇಶವನ್ನೂ ವರ್ಗೀಕರಿಸಿ ನೋಡಿದರೆ, ಚೀನಾದಲ್ಲಿ ಹಠಾತ್ ಸಾವಿನ ಪ್ರಕರಣಗಳು ಹೆಚ್ಚು ದಾಖಲಾಗಿವೆ. ಅಲ್ಲಿ 12.42 ಲಕ್ಷ ಮಂದಿ ಸಾವನ್ನಪ್ಪಿದ್ದರೆ ಭಾರತ 12.40 ಲಕ್ಷ ಅಚಾನಕ್ ಸಾವುಗಳನ್ನು ಕಂಡಿದೆ.

ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಮಾಲಿನ್ಯ ಉಂಟು ಮಾಡುವ ಕೈಗಾರಿಕೆಗಳ ವಿರುದ್ಧ ಚೀನಾ ಕಠಿಣ ಕ್ರಮ ಕೈಗೊಂಡ ಪರಿಣಾಮ ಕಳೆದ 10 ವರ್ಷಗಳಲ್ಲಿ ಅಲ್ಲಿ ಮಾಲಿನ್ಯದಿಂದಾಗಿ ನಿಧನ ಹೊಂದುವವರ ಸಂಖ್ಯೆ ಇಳಿಮುಖವಾಗಿದೆ.

ಆದರೆ ಭಾರತದಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು ಹಠಾತ್ ಸಾವಿಗೆ ತುತ್ತಾಗುವವರ ಸಂಖ್ಯೆ ಶೇಕಡಾ 23ರಷ್ಟು ಹೆಚ್ಚಳ ಆಗಿದೆ. ಮಾಲಿನ್ಯಕ್ಕೆ ಕಡಿವಾಣ ಹಾಕಲು ಕೈಗೊಂಡ ಕಳಪೆ ಕ್ರಮಗಳಿಗೆ ಇದು ಸಾಕ್ಷಿ ಆಗಿದೆ.

ಪ್ರತಿ ಎಂಟು ಸಾವುಗಳಲ್ಲಿ, ಒಂದು ವಾಯುಮಾಲಿನ್ಯದಿಂದ ಸಂಭವಿಸಿದ್ದು ವಿಷಯುಕ್ತ ಗಾಳಿ ಸೇವಿಸುವ ನಾಗರಿಕರ ಜೀವಿತಾವಧಿ 1.7 ವರ್ಷಗಳಷ್ಟು ಕುಸಿದಿದೆ.
ಇದನ್ನು ಕಳೆದ ವರ್ಷ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ( ಐ ಸಿ ಎಂ ಆರ್ ) ವರದಿ ಮಾಡಿದ್ದು ಕಳವಳಕ್ಕೆ ಕಾರಣ ಆಗಿದೆ.

ವಿಶೇಷ ಎಂದರೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಇದನ್ನು ನಿರಾಕರಿಸಿದ್ದು ವಾಯುಮಾಲಿನ್ಯದಿಂದಾಗಿ ಜೀವಿತಾವಧಿ ಕುಂಠಿತವಾದ ಬಗ್ಗೆ ಯಾವುದೇ ಭಾರತೀಯ ಅಧ್ಯಯನ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ. ಇದು ಅನೇಕರ ಅಚ್ಚರಿಗೆ ಕಾರಣ ಆಗಿದೆ.

ಸಿಎಸ್ಇ ಎರಡು ವರ್ಷಗಳ ಹಿಂದೆ ಬಿಡುಗಡೆ ಮಾಡಿದ್ದ ತನ್ನ ವರದಿಯಲ್ಲಿ ವಾಯುಮಾಲಿನ್ಯದಿಂದ ಶೇ 30ರಷ್ಟು ಸಾವು ಸಂಭವಿಸಿದೆ ಎಂದು ಉಲ್ಲೇಖಿಸಿತ್ತು. ಇದು ಬಹುಶಃ ಸಚಿವರ ಗಮನಕ್ಕೆ ಬಂದಿಲ್ಲ ಎಂದು ತೋರುತ್ತದೆ.

ಇತ್ತೀಚಿನ ಅಂತರರಾಷ್ಟ್ರೀಯ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ವಾಯುಮಾಲಿನ್ಯದ ಹೆಚ್ಚಳದಿಂದ ಉಂಟಾಗುವ ಸಾವುಗಳು ಲಕ್ಷಾಂತರ ಕುಟುಂಬಗಳನ್ನು ದುಃಖದಲ್ಲಿ ಮುಳುಗಿಸಿವೆ.

ಮನೆಯ ಪರಿಸರದಲ್ಲಿ ಸ್ವಲ್ಪ ಸುಧಾರಣೆಯಾಗಿದ್ದು ಅಲ್ಲಿ ಮಾಲಿನ್ಯ ತಗ್ಗಿದ್ದರೂ ಕೂಡ ಕೈಗಾರಿಕೀಕರಣ ಮತ್ತು ನಗರೀಕರಣದಿಂದಾಗಿ ಉಂಟಾಗುತ್ತಿರುವ ಕಲುಷಿತ ವಾತಾವರಣವನ್ನು ಭಾರತ ತಹಬಂದಿಗೆ ತರಬೇಕು ಎನ್ನುತ್ತದೆ ಜಿ ಎ ಎಚ್‌ ಪಿ ವರದಿ.

ರಾಸಾಯನಿಕ ತ್ಯಾಜ್ಯದಿಂದ ಕೂಡಿದ ನೀರಿನಲ್ಲಿ ಬೆಳೆದ ಆಹಾರ ಉತ್ಪನ್ನಗಳ ಬಳಕೆ ಮಾಡುವುದರಿಂದ ನಾಡಿ ಮಿಡಿತ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಾಲಿನ್ಯದ ಅಪಾಯ ನಮ್ಮ ಅಡಿಗೆಮನೆಗಳಿಗೆ ಬಂದಿರುವುದರ ಸ್ಪಷ್ಟ ಸಂಕೇತ ಇದಾಗಿದೆ.

ವಿಷಯುಕ್ತ ವಾತಾವರಣ ಮಾನವರ ಬದುಕನ್ನು ಬಲಿ ಪಡೆಯುತ್ತಿರುವಾಗ ಕೇಂದ್ರ ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ಕ್ರಿಯಾ ಯೋಜನೆಯೊಂದನ್ನು ರೂಪಿಸಲು ಮುಂದಾಗಬೇಕಿದೆ.

ಗಾಳಿ ಮತ್ತು ಜಲಮಾಲಿನ್ಯದಿಂದ ಉಂಟಾಗುವ ಮಾನವ ನಿರ್ಮಿತ ದೊಡ್ಡ ದುರಂತವನ್ನು 25 ವರ್ಷಗಳ ಹಿಂದೆಯೇ ಗ್ರಹಿಸಿದ್ದ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ( ಎ ಡಿ ಬಿ ) ಒಂದು ವೇಳೆ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದೆ ಇದ್ದರೆ ಏಷ್ಯಾ ಪೆಸಿಫಿಕ್ ಪ್ರದೇಶದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದೆ.

ಜೈವಿಕ ಪರಿಸರ ಸಂರಕ್ಷಣೆಯನ್ನು ಗುರಿಯಾಗಿಸಿಕೊಂಡು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ವಿಶ್ವಬ್ಯಾಂಕ್ ಹಾಗೂ ಇತರ ಸಂಸ್ಥೆಗಳು ಒಂದು ಯೋಜನೆ ಮತ್ತು ಮಾರ್ಗಸೂಚಿಯನ್ನು ರೂಪಿಸಿದ್ದವು. ಆದರೂ ಅಭಿಪ್ರಾಯ ಭೇದದಿಂದಾಗಿ ಇದನ್ನು ಅನುಷ್ಠಾನಕ್ಕೆ ತಾರದ ಕಾರಣ ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ಭಾರತ ಅಂತರರಾಷ್ಟ್ರೀಯ ಸಮುದಾಯದ ಎದುರು ತನ್ನ ಗೌರವ ಮತ್ತು ಪ್ರತಿಷ್ಠೆ ಕಳೆದುಕೊಂಡಿದೆ.

ಭಾರತದಲ್ಲಿ ಗಾಳಿ, ಮಣ್ಣು ಮತ್ತು ನೀರು ವಿಷಪೂರಿತವಾಗಿದ್ದು ಪರಿಸರವನ್ನು ಹೇಗೆ ಕಲುಷಿತಗೊಳಿಸುತ್ತಿವೆ ಎಂಬುದರ ಬಗ್ಗೆ ಮಾತನಾಡಲು ಇತರರ ಅಗತ್ಯ ಬೀಳುವುದಿಲ್ಲ. ದೇಶದ ನದಿಗಳಿಂದ ಪಡೆಯುತ್ತಿರುವ ಕುಡಿಯುವ ನೀರು ಸುರಕ್ಷಿತ ಅಲ್ಲ ಎಂಬ ಸರ್ಕಾರದ ಖುದ್ದು ಅಧ್ಯಯನ ವರದಿಯೇ ಇದನ್ನು ಸಾರಿ ಹೇಳುತ್ತದೆ.
ಗಾಳಿ ಮತ್ತು ನೀರನ್ನು ಪರೀಕ್ಷಿಸುವ ಉದ್ದೇಶದಿಂದ ಹುಟ್ಟಿಕೊಂಡ ದೇಶದ ಮಾಲಿನ್ಯ ನಿಯಂತ್ರಣ ಮಂಡಳಿಗಳು ಇದೀಗ ಭ್ರಷ್ಟಗೊಂಡಿವೆ.

ನೀರು ಮತ್ತು ಗಾಳಿಯ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಅಂತಹ ಮಾಲಿನ್ಯ ನಿಯಂತ್ರಣ ಕೇಂದ್ರಗಳ ಮೂಲಕ ಸಕಾರಾತ್ಮಕ ಫಲಿತಾಂಶ ಸಾಧಿಸಲು ನಮ್ಮ ನೆರೆಯ ದೇಶ ಚೀನಾಕ್ಕೆ ಸಾಧ್ಯ ಆಗಿದೆ.

ಭಾರತದಲ್ಲಿ ನಿಯಮ ಉಲ್ಲಂಘಿಸಿ ಹಣ ಚೆಲ್ಲುವವರಿಗೆ ಮಾಲಿನ್ಯ ನಿಯಂತ್ರಣ ಕೇಂದ್ರಗಳು ಟೊಂಕಕಟ್ಟಿ ನಿಂತು ಮಾರ್ಗದರ್ಶನ ನೀಡುತ್ತಿವೆ.
ಹಲವು ನಗರ ಮತ್ತು ಪಟ್ಟಣಗಳಲ್ಲಿ ಮಾಲಿನ್ಯದ ಕಬಂಧ ಬಾಹುಗಳು ಚಾಚಿಕೊಳ್ಳುತ್ತಿದ್ದು ಮಾಲಿನ್ಯವನ್ನು ನಿಯಂತ್ರಿಸುವುದು ಹೇಗೆ ಎಂಬುದು ದೇವರಿಗೇ ಗೊತ್ತಿರುವ ಸಂಗತಿ.

ಮಾಲಿನ್ಯ ಸಮಸ್ಯೆ ಪರಿಶೀಲಿಸಲು ಚೀನಾ ಐದು ವರ್ಷಗಳ ಕ್ರಿಯಾ ಯೋಜನೆ ಜಾರಿಗೆ ತಂದಿದೆ. ಐಸ್ಲೆಂಡ್, ಫಿನ್ಲೆಂಡ್ ಮತ್ತು ಎಸ್ಟೋನಿಯಾದಂತಹ ರಾಷ್ಟ್ರಗಳು ನಾಗರಿಕರನ್ನು ಒಳಗೊಳ್ಳುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಶ್ರಮಿಸುತ್ತಿವೆ.

ಮಾಲಿನ್ಯಕಾರಕ ವಾಸಸ್ಥಳ, ಕಚೇರಿ, ರಸ್ತೆ ಹಾಗೂ ನೀರಿನ ಸೆಲೆಗಳ ಕುರಿತಂತೆ ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಗಳು ‘ನಿರ್ಮಲ’ ಆಗಿದ್ದಾಗ ಮತ್ತು ಮಾಲಿನ್ಯಕ್ಕೆ ವಿರುದ್ಧವಾಗಿ ಸಾಮಾಜಿಕ ಚಳವಳಿಗಳು ರೂಪುಗೊಂಡಾಗ ಮಾತ್ರ ಭಾರತದ ಪರಿಸರ ಶುಚಿಯಾಗಿ ಇರಬಲ್ಲದು.

Intro:Body:

pollution related deaths, pollution related deaths in India, pollution related deaths news, pollution related deaths latest news, ಮಾಲಿನ್ಯ ಸಂಬಂಧಿತ ಸಾವುಗಳು, ಭಾರತದಲ್ಲಿ ಮಾಲಿನ್ಯ ಸಂಬಂಧಿತ ಸಾವುಗಳು, ಮಾಲಿನ್ಯ ಸಂಬಂಧಿತ ಸಾವುಗಳು ಸುದ್ದಿ, 

Pollution Altar - The pedestal of sacrificial offerings

ಸರ್ಕಾರದ ಕಾರ್ಯಸೂಚಿಗಳು ‘ನಿರ್ಮಲ’ ಆಗಿದ್ದಾಗ ಮಾತ್ರ ಭಾರತದ ಪರಿಸರ ಶುದ್ಧಿ ಸಾಧ್ಯ

ಜಗತ್ತಿನಲ್ಲಿಯೇ ಮಾಲಿನ್ಯ ಸಂಬಂಧಿ ಸಾವುಗಳ ರಾಜಧಾನಿ ಎನಿಸಿಕೊಂಡಿರುವ ಭಾರತಕ್ಕೆ ಭವಿಷ್ಯದಲ್ಲಿಯೂ ಇದೇ ಪಟ್ಟ ಮುಂದುವರಿಯಲಿದೆ ಎಂದು ಹೇಳುತ್ತಿದೆ ಇತ್ತೀಚೆಗೆ ನಡೆದಿರುವ ಒಂದು ಅಧ್ಯಯನ. 

40 ರಾಷ್ಟ್ರಗಳ 400 ಸಂಸ್ಥೆಗಳನ್ನು ಒಳಗೊಂಡಿರುವ ಗ್ಲೋಬಲ್ ಅಲಯನ್ಸ್ ಆನ್ ಹೆಲ್ತ್ ಅಂಡ್ ಪೊಲ್ಯೂಷನ್ ಸಂಸ್ಥೆ ( ಜಿ ಎ ಎಚ್‌ ಪಿ ) ಆರೋಗ್ಯ ಮತ್ತು ಮಾಲಿನ್ಯ ಕುರಿತಂತೆ ಅಧ್ಯಯನ ನಡೆಸುತ್ತದೆ. ಅದರ ಒಂದು ವರದಿ ಹೇಳುವ ಪ್ರಕಾರ 2017ರಲ್ಲಿ ಜಗತ್ತಿನ ಎಲ್ಲೆಡೆ ಸಂಭವಿಸಿದ ಸಾವುಗಳಲ್ಲಿ ಶೇ 15ರಷ್ಟು ಮಾಲಿನ್ಯಕ್ಕೆ ಸಂಬಂಧಿ ಸಾವುಗಳಾಗಿವೆ. 

ಆಶ್ಚರ್ಯಕರ ಸಂಗತಿ ಎಂದರೆ, ಭಾರತ ಮತ್ತು ಚೀನಾದಲ್ಲಿ ಅಂತಹ ಮರಣ ಪ್ರಮಾಣ ಹೆಚ್ಚು ಎಂದು ಅಧ್ಯಯನದ ಒಟ್ಟು ಸಾರಾಂಶ ಬೊಟ್ಟು ಮಾಡಿದೆ. 

ಹಲವು ದೇಶಗಳಲ್ಲಿ ಒಟ್ಟು 83 ಲಕ್ಷ ಹಠಾತ್ ಸಾವುಗಳು ಸಂಭವಿಸಿವೆ. ಅವುಗಳಲ್ಲಿ ಭಾರತದಲ್ಲಿ 23 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ ಹೀಗೆ ಸತ್ತವರ ಸಂಖ್ಯೆ 18 ಲಕ್ಷ. ಉಳಿದಂತೆ ನೈಜೀರಿಯಾದಲ್ಲಿ 2. 79 ಲಕ್ಷ, ಇಂಡೋನೇಷ್ಯಾದಲ್ಲಿ 2.32 ಲಕ್ಷ, ಪಾಕಿಸ್ತಾನದಲ್ಲಿ 2.23 ಲಕ್ಷ ಮಂದಿ ಅಕಾಲಿಕ ಸಾವಿಗೆ ತುತ್ತಾಗಿದ್ದಾರೆ. 

ಅಮೆರಿಕದಲ್ಲಿ ಕೂಡ 2 ಲಕ್ಷ ಮಂದಿ ಮರಣ ಹೊಂದಿದ್ದಾರೆ. ಇದನ್ನು ಗಮನಿಸಿದರೆ ಮಾಲಿನ್ಯದ ತೀವ್ರತೆ ಎಷ್ಟಿದೆ ಎಂಬುದು ಅರ್ಥ ಆಗುತ್ತದೆ.  

ಜಿ ಎ ಎಚ್‌ ಪಿ ವರದಿ ಪ್ರಕಾರ ಬಾಂಗ್ಲಾದೇಶ, ರಷ್ಯಾ, ಇಥಿಯೋಪಿಯಾ, ಬ್ರೆಜಿಲ್ ಸೇರಿದಂತೆ ಮೇಲಿನ 10 ರಾಷ್ಟ್ರಗಳಲ್ಲಿ ಮೂರನೇ ಎರಡರಷ್ಟು ಮಾಲಿನ್ಯ ಸಂಬಂಧಿ ಮರಣ  ಸಂಭವಿಸಿರುವುದು ದೃಢಪಟ್ಟಿದೆ. ವಾಹನ ಮತ್ತು ಕೈಗಾರಿಕಾ ಮಾಲಿನ್ಯದಿಂದಾಗಿಯೇ 34 ಲಕ್ಷ ಮಂದಿ ( ಶೇ 40 ) ಇಹಲೋಕ ತ್ಯಜಿಸಿದ್ದಾರೆ. 

ಪ್ರತಿ ದೇಶವನ್ನೂ ವರ್ಗೀಕರಿಸಿ ನೋಡಿದರೆ, ಚೀನಾದಲ್ಲಿ ಹಠಾತ್ ಸಾವಿನ ಪ್ರಕರಣಗಳು ಹೆಚ್ಚು ದಾಖಲಾಗಿವೆ. ಅಲ್ಲಿ 12.42 ಲಕ್ಷ ಮಂದಿ ಸಾವನ್ನಪ್ಪಿದ್ದರೆ ಭಾರತ 12.40 ಲಕ್ಷ ಅಚಾನಕ್ ಸಾವುಗಳನ್ನು ಕಂಡಿದೆ.  

ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಮಾಲಿನ್ಯ ಉಂಟು ಮಾಡುವ ಕೈಗಾರಿಕೆಗಳ ವಿರುದ್ಧ ಚೀನಾ ಕಠಿಣ ಕ್ರಮ ಕೈಗೊಂಡ ಪರಿಣಾಮ ಕಳೆದ 10 ವರ್ಷಗಳಲ್ಲಿ ಅಲ್ಲಿ ಮಾಲಿನ್ಯದಿಂದಾಗಿ ನಿಧನ ಹೊಂದುವವರ ಸಂಖ್ಯೆ ಇಳಿಮುಖವಾಗಿದೆ. 

ಆದರೆ ಭಾರತದಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು ಹಠಾತ್ ಸಾವಿಗೆ ತುತ್ತಾಗುವವರ ಸಂಖ್ಯೆ ಶೇಕಡಾ 23ರಷ್ಟು ಹೆಚ್ಚಳ ಆಗಿದೆ. ಮಾಲಿನ್ಯಕ್ಕೆ ಕಡಿವಾಣ ಹಾಕಲು ಕೈಗೊಂಡ ಕಳಪೆ ಕ್ರಮಗಳಿಗೆ ಇದು ಸಾಕ್ಷಿ ಆಗಿದೆ. 

ಪ್ರತಿ ಎಂಟು ಸಾವುಗಳಲ್ಲಿ, ಒಂದು ವಾಯುಮಾಲಿನ್ಯದಿಂದ ಸಂಭವಿಸಿದ್ದು ವಿಷಯುಕ್ತ ಗಾಳಿ ಸೇವಿಸುವ ನಾಗರಿಕರ ಜೀವಿತಾವಧಿ 1.7 ವರ್ಷಗಳಷ್ಟು ಕುಸಿದಿದೆ. 

ಇದನ್ನು ಕಳೆದ ವರ್ಷ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ( ಐ ಸಿ ಎಂ ಆರ್ ) ವರದಿ ಮಾಡಿದ್ದು ಕಳವಳಕ್ಕೆ ಕಾರಣ ಆಗಿದೆ.

ವಿಶೇಷ ಎಂದರೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಇದನ್ನು ನಿರಾಕರಿಸಿದ್ದು ವಾಯುಮಾಲಿನ್ಯದಿಂದಾಗಿ ಜೀವಿತಾವಧಿ ಕುಂಠಿತವಾದ ಬಗ್ಗೆ ಯಾವುದೇ ಭಾರತೀಯ ಅಧ್ಯಯನ  ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ. ಇದು ಅನೇಕರ ಅಚ್ಚರಿಗೆ ಕಾರಣ ಆಗಿದೆ.  

ಸಿಎಸ್ಇ ಎರಡು ವರ್ಷಗಳ ಹಿಂದೆ ಬಿಡುಗಡೆ ಮಾಡಿದ್ದ ತನ್ನ ವರದಿಯಲ್ಲಿ ವಾಯುಮಾಲಿನ್ಯದಿಂದ ಶೇ 30ರಷ್ಟು ಸಾವು ಸಂಭವಿಸಿದೆ ಎಂದು ಉಲ್ಲೇಖಿಸಿತ್ತು. ಇದು ಬಹುಶಃ ಸಚಿವರ ಗಮನಕ್ಕೆ ಬಂದಿಲ್ಲ ಎಂದು ತೋರುತ್ತದೆ.  

ಇತ್ತೀಚಿನ ಅಂತರರಾಷ್ಟ್ರೀಯ ಅಧ್ಯಯನವೊಂದರ ಪ್ರಕಾರ  ಭಾರತದಲ್ಲಿ ವಾಯುಮಾಲಿನ್ಯದ ಹೆಚ್ಚಳದಿಂದ ಉಂಟಾಗುವ ಸಾವುಗಳು ಲಕ್ಷಾಂತರ ಕುಟುಂಬಗಳನ್ನು ದುಃಖದಲ್ಲಿ ಮುಳುಗಿಸಿವೆ. 

ಮನೆಯ ಪರಿಸರದಲ್ಲಿ ಸ್ವಲ್ಪ ಸುಧಾರಣೆಯಾಗಿದ್ದು ಅಲ್ಲಿ ಮಾಲಿನ್ಯ ತಗ್ಗಿದ್ದರೂ ಕೂಡ  ಕೈಗಾರಿಕೀಕರಣ ಮತ್ತು ನಗರೀಕರಣದಿಂದಾಗಿ ಉಂಟಾಗುತ್ತಿರುವ ಕಲುಷಿತ ವಾತಾವರಣವನ್ನು ಭಾರತ ತಹಬಂದಿಗೆ ತರಬೇಕು ಎನ್ನುತ್ತದೆ ಜಿ ಎ ಎಚ್‌ ಪಿ ವರದಿ. 

ರಾಸಾಯನಿಕ ತ್ಯಾಜ್ಯದಿಂದ ಕೂಡಿದ ನೀರಿನಲ್ಲಿ ಬೆಳೆದ ಆಹಾರ ಉತ್ಪನ್ನಗಳ ಬಳಕೆ ಮಾಡುವುದರಿಂದ ನಾಡಿ ಮಿಡಿತ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಾಲಿನ್ಯದ ಅಪಾಯ  ನಮ್ಮ ಅಡಿಗೆಮನೆಗಳಿಗೆ ಬಂದಿರುವುದರ ಸ್ಪಷ್ಟ ಸಂಕೇತ ಇದಾಗಿದೆ.

ವಿಷಯುಕ್ತ ವಾತಾವರಣ ಮಾನವರ ಬದುಕನ್ನು ಬಲಿ ಪಡೆಯುತ್ತಿರುವಾಗ ಕೇಂದ್ರ ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ಕ್ರಿಯಾ ಯೋಜನೆಯೊಂದನ್ನು ರೂಪಿಸಲು ಮುಂದಾಗಬೇಕಿದೆ. 

ಗಾಳಿ ಮತ್ತು ಜಲಮಾಲಿನ್ಯದಿಂದ ಉಂಟಾಗುವ ಮಾನವ ನಿರ್ಮಿತ ದೊಡ್ಡ ದುರಂತವನ್ನು 25 ವರ್ಷಗಳ ಹಿಂದೆಯೇ ಗ್ರಹಿಸಿದ್ದ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ( ಎ ಡಿ ಬಿ ) ಒಂದು ವೇಳೆ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದೆ ಇದ್ದರೆ ಏಷ್ಯಾ ಪೆಸಿಫಿಕ್ ಪ್ರದೇಶದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದೆ.

ಜೈವಿಕ ಪರಿಸರ ಸಂರಕ್ಷಣೆಯನ್ನು ಗುರಿಯಾಗಿಸಿಕೊಂಡು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ವಿಶ್ವಬ್ಯಾಂಕ್ ಹಾಗೂ ಇತರ ಸಂಸ್ಥೆಗಳು ಒಂದು ಯೋಜನೆ ಮತ್ತು ಮಾರ್ಗಸೂಚಿಯನ್ನು ರೂಪಿಸಿದ್ದವು. ಆದರೂ ಅಭಿಪ್ರಾಯ ಭೇದದಿಂದಾಗಿ ಇದನ್ನು ಅನುಷ್ಠಾನಕ್ಕೆ ತಾರದ ಕಾರಣ ಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ಭಾರತ  ಅಂತರರಾಷ್ಟ್ರೀಯ ಸಮುದಾಯದ ಎದುರು ತನ್ನ ಗೌರವ ಮತ್ತು ಪ್ರತಿಷ್ಠೆ ಕಳೆದುಕೊಂಡಿದೆ. 

ಭಾರತದಲ್ಲಿ ಗಾಳಿ, ಮಣ್ಣು ಮತ್ತು ನೀರು ವಿಷಪೂರಿತವಾಗಿದ್ದು ಪರಿಸರವನ್ನು ಹೇಗೆ ಕಲುಷಿತಗೊಳಿಸುತ್ತಿವೆ ಎಂಬುದರ ಬಗ್ಗೆ ಮಾತನಾಡಲು ಇತರರ ಅಗತ್ಯ ಬೀಳುವುದಿಲ್ಲ. ದೇಶದ ನದಿಗಳಿಂದ ಪಡೆಯುತ್ತಿರುವ ಕುಡಿಯುವ ನೀರು ಸುರಕ್ಷಿತ ಅಲ್ಲ ಎಂಬ ಸರ್ಕಾರದ ಖುದ್ದು ಅಧ್ಯಯನ ವರದಿಯೇ ಇದನ್ನು ಸಾರಿ ಹೇಳುತ್ತದೆ.

ಗಾಳಿ ಮತ್ತು ನೀರನ್ನು ಪರೀಕ್ಷಿಸುವ ಉದ್ದೇಶದಿಂದ ಹುಟ್ಟಿಕೊಂಡ  ದೇಶದ ಮಾಲಿನ್ಯ ನಿಯಂತ್ರಣ ಮಂಡಳಿಗಳು ಇದೀಗ ಭ್ರಷ್ಟಗೊಂಡಿವೆ.

ನೀರು ಮತ್ತು ಗಾಳಿಯ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಅಂತಹ ಮಾಲಿನ್ಯ ನಿಯಂತ್ರಣ ಕೇಂದ್ರಗಳ ಮೂಲಕ ಸಕಾರಾತ್ಮಕ ಫಲಿತಾಂಶ ಸಾಧಿಸಲು ನಮ್ಮ ನೆರೆಯ ದೇಶ ಚೀನಾಕ್ಕೆ ಸಾಧ್ಯ ಆಗಿದೆ.  

ಭಾರತದಲ್ಲಿ ನಿಯಮ ಉಲ್ಲಂಘಿಸಿ ಹಣ ಚೆಲ್ಲುವವರಿಗೆ ಮಾಲಿನ್ಯ ನಿಯಂತ್ರಣ ಕೇಂದ್ರಗಳು ಟೊಂಕಕಟ್ಟಿ ನಿಂತು ಮಾರ್ಗದರ್ಶನ ನೀಡುತ್ತಿವೆ. 

ಹಲವು ನಗರ ಮತ್ತು ಪಟ್ಟಣಗಳಲ್ಲಿ ಮಾಲಿನ್ಯದ ಕಬಂಧ ಬಾಹುಗಳು ಚಾಚಿಕೊಳ್ಳುತ್ತಿದ್ದು ಮಾಲಿನ್ಯವನ್ನು ನಿಯಂತ್ರಿಸುವುದು ಹೇಗೆ ಎಂಬುದು ದೇವರಿಗೇ ಗೊತ್ತಿರುವ ಸಂಗತಿ.

ಮಾಲಿನ್ಯ ಸಮಸ್ಯೆ ಪರಿಶೀಲಿಸಲು ಚೀನಾ ಐದು ವರ್ಷಗಳ ಕ್ರಿಯಾ ಯೋಜನೆ ಜಾರಿಗೆ ತಂದಿದೆ. ಐಸ್ಲೆಂಡ್, ಫಿನ್ಲೆಂಡ್ ಮತ್ತು ಎಸ್ಟೋನಿಯಾದಂತಹ ರಾಷ್ಟ್ರಗಳು ನಾಗರಿಕರನ್ನು ಒಳಗೊಳ್ಳುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಶ್ರಮಿಸುತ್ತಿವೆ. 

ಮಾಲಿನ್ಯಕಾರಕ ವಾಸಸ್ಥಳ, ಕಚೇರಿ, ರಸ್ತೆ ಹಾಗೂ ನೀರಿನ ಸೆಲೆಗಳ ಕುರಿತಂತೆ  ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಗಳು ‘ನಿರ್ಮಲ’ ಆಗಿದ್ದಾಗ ಮತ್ತು ಮಾಲಿನ್ಯಕ್ಕೆ ವಿರುದ್ಧವಾಗಿ ಸಾಮಾಜಿಕ ಚಳವಳಿಗಳು ರೂಪುಗೊಂಡಾಗ ಮಾತ್ರ  ಭಾರತದ ಪರಿಸರ ಶುಚಿಯಾಗಿ ಇರಬಲ್ಲದು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.