ETV Bharat / bharat

ಹರಿಯಾಣದಲ್ಲಿ ರೈತರ ಮೇಲೆ ಪೊಲೀಸರಿಂದ ಲಾಠಿಚಾರ್ಜ್

author img

By

Published : Jan 3, 2021, 10:05 PM IST

ಹರಿಯಾಣದ ಶಹಜಹಾನಪುರ ಗಡಿ ಬಳಿ ರೈತರು ಮತ್ತು ಹರಿಯಾಣ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ ಅಶ್ರುವಾಯು ಸಿಡಿಸಿದ್ದಾರೆ.

dcss
ಹರಿಯಾಣದಲ್ಲಿ ರೈತರ ಮೇಲೆ ಪೊಲೀಸರಿಂದ ಮತ್ತೆ ಲಾಠಿಚಾರ್ಜ್​..!

ಹರಿಯಾಣ: ಶಹಜಹಾನಪುರ ಗಡಿ ಪ್ರವೇಶಿಸಲು ಯತ್ನಿಸಿದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ.

ಹರಿಯಾಣದಲ್ಲಿ ರೈತರ ಮೇಲೆ ಪೊಲೀಸರಿಂದ ಲಾಠಿಚಾರ್ಜ್

ಹರಿಯಾಣ ಪೊಲೀಸರು ಧರುಹೆರಾ ಬಳಿ ರೈತರನ್ನು ತಡೆದಿದ್ದರಿಂದ 3 ದಿನಗಳ ಕಾಲ ರೈತರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಲಗಿದ್ದರು. ಇದರಿಂದಾಗಿ 5 ಕಿಲೋಮೀಟರ್ ಸಂಚಾರ ಅಸ್ತವ್ಯಸ್ಥವಾಗಿದೆ. ಇದಲ್ಲದೇ ರಾಜಸ್ಥಾನದ ಗಡಿಯಿಂದ ಧರುಹೆರಾದಲ್ಲಿ 4 ದಿನಗಳ ಹಿಂದೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಹಾಕಲಾಗಿದೆ. ಇಂದು ಸಹ ಹರಿಯಾಣ ಗಡಿಯಿಂದ ಹೆಚ್ಚಿನ ಸಂಖ್ಯೆಯ ರೈತರು ಆಗಮಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಡೆ ನಿಯೋಜಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಕ್ಸ್ ರೈತ ಸಂಘಟನೆಯ ಪ್ರತಿನಿಧಿ ರಾಜು ಪಂಜಾಬಿ, ರೈತರ ಹೋರಾಟ ಮುಂದುವರೆಯುತ್ತದೆ. ನಾವು ಯಾವುದೇ ಕಾರಣಕ್ಕೂ ಹಿಂದಿರುಗುವುದಿಲ್ಲ, ಹರಿಯಾಣ ಪೊಲೀಸರ ಅನಾಗರಿಕತೆಗೆ ತಕ್ಕ ಉತ್ತರ ನೀಡುತ್ತೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.