ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 31ರ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದು, ಆ ವೇಳೆ 5ನೇ ಹಂತದ ಲಾಕ್‌ಡೌನ್ ವಿಸ್ತರಣೆಯನ್ನು ಘೋಷಿಸಲಿದ್ದಾರೆ ಎಂಬ ವದಂತಿಗೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.
ಮೇ 31ರಂದು ಲಾಕ್‌ಡೌನ್ 4.0 ಮುಗಿದ ಬಳಿಕ ಜೂನ್ 1ರಿಂದ ಮುಂದಿನ ಹಂತದ ಲಾಕ್‌ಡೌನ್ ವಿಧಿಸಿ, ದೇಶದ ಹೆಚ್ಚಿನ ಭಾಗಗಳಲ್ಲಿ ನಿರ್ಬಂಧಗಳನ್ನು ಸರಾಗಗೊಳಿಸುವ ಕ್ರಮಗಳನ್ನು ಪ್ರಕಟಿಸುತ್ತಾರೆ ಎಂಬ ವದಂತಿಯ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.
ಗೃಹ ಸಚಿವಾಲಯದ ಮೂಲಗಳಿಂದ ಉಲ್ಲೇಖಿತ ಲಾಕ್‌ಡೌನ್ 5ನೇ ಹಂತದ ವರದಿಯ ಬಗೆಗಿನ ಸ್ಪಷ್ಟನೆ. ಅದರಲ್ಲಿ (ವರದಿ) ಹೇಳಲಾದ ಎಲ್ಲವೂ ವರದಿಗಾರನ ಊಹಾಪೋಹಗಳಾಗಿವೆ. ಗೃಹ ಸಚಿವಾಲಯ ಬಗ್ಗೆ ಆರೋಪಿಸುವುದು ತಪ್ಪಾಗಿದೆ ಮತ್ತು ಬೇಜವಾಬ್ದಾರಿಯಿಂದ ಕೂಡಿರುತ್ತದೆ. ಇದೊಂದು ಸತ್ಯಕ್ಕೆ ದೂರವಾದ ವರದಿ ಎಂದು ಸಚಿವಾಲಯದ ವಕ್ತಾರರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.