ETV Bharat / bharat

ಹ್ಯೂಸ್ಟನ್​ ತಲುಪಿದ ಪಿಎಂ ಮೋದಿ: ಪ್ರತಿಭಟನೆಗೆ ಮುಂದಾದ ಪಾಕಿಗಳು

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹ್ಯೂಸ್ಟನ್​ ತಲುಪಿದ್ದು, ನಾಳೆ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮತ್ತೊಂದೆಡೆ ಮೋದಿ ವಿರೋಧಿಸಿ ಪಾಕಿಸ್ತಾನಿಗರು, ಕಾಶ್ಮೀರಿಗಳು ಹಾಗೂ ಸಿಖ್​ ಸಮುದಾಯದವರು ಒಟ್ಟಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
author img

By

Published : Sep 21, 2019, 11:52 PM IST

ಹ್ಯೂಸ್ಟನ್​: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹ್ಯೂಸ್ಟನ್​ ತಲುಪಿದ್ದು, ನಾಳೆ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನೊಂದೆಡೆ ಪ್ರಧಾನಿ ವಿರುದ್ಧ ಪ್ರತಿಭಟನೆ ನಡೆಸಲು ಅಮೆರಿಕದಲ್ಲಿ ನೆಲೆಸಿರುವ ಪಾಕಿಸ್ತಾನಿಗರು ನಿರ್ಧರಿಸಿದ್ದಾರೆ.

  • #WATCH United States: PM Narendra Modi arrives in Houston, Texas. He has been received by Director, Trade and International Affairs, Christopher Olson and other officials. US Ambassador to India Kenneth Juster and Indian Ambassador to the US Harsh Vardhan Shringla also present. pic.twitter.com/3CqvtHkXlk

    — ANI (@ANI) September 21, 2019 " class="align-text-top noRightClick twitterSection" data=" ">

ನಾಳೆ ಹ್ಯೂಸ್ಟನ್​ನಲ್ಲಿ ಹೌಡಿ ಮೋದಿ ಕಾರ್ಯಕ್ರಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೂಡ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಆದರೆ ಇನ್ನೊಂದೆಡೆ ಅಮೆರಿಕದಲ್ಲಿ ನೆಲೆಸಿರುವ ಪಾಕಿಸ್ತಾನಿ, ಕಾಶ್ಮೀರಿ ಹಾಗೂ ಸಿಖ್ ಸಮುದಾಯದವರು ಜೊತೆಯಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಪ್ರಧಾನಿ ಮೋದಿಯವರು ಕಾಶ್ಮೀರಿಗರ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪ. ಅಲ್ಲದೆ ಪ್ರತಿಭಟನೆ ಹಿನ್ನೆಲೆಯಲ್ಲಿ ಬೃಹತ್​ ಟ್ರಕ್​ ರ‍್ಯಾಲಿ ನಡೆಸಿದ್ದು, ಭಾರೀ ಬೆಂಬಲ ವ್ಯಕ್ತವಾಗಿತ್ತು. ಪ್ರತಿಭಟನೆಯಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸುವಂತೆ ಟ್ವೀಟ್​ ಮೂಲಕವೂ ಕೂಡ ಕೆಲವರು ಮನವಿ ಮಾಡಿದ್ದಾರೆ.

ಇನ್ನು ಅಮೆರಿಕ ಮೂಲದ ಕಾಶ್ಮೀರಿ ಕಾರ್ಯಕರ್ತರು ಪ್ರಧಾನಿ ವಿರುದ್ಧ ಹ್ಯೂಸ್ಟನ್​ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಬಗ್ಗೆ ಪ್ರಧಾನಿಯವರಿಗೆ ಒದಗಿಸಿರುವ ಭದ್ರತೆ ಕುರಿತಂತೆ ಕೇಂದ್ರ ಸರ್ಕಾರವು ಅಮೆರಿಕ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿದೆ.

Intro:Body:

modi

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.