ETV Bharat / bharat

ಎನ್​ಡಿಎ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ: ಮೋದಿ - ಬಿಹಾರದ ದರ್ಬಾಂಗ್​ನಲ್ಲಿ ಪ್ರಧಾನಿ ಮೋದಿ ಱಲಿ

'ಆತ್ಮನಿರ್ಭರ ಬಿಹಾರ’ ಆಗಬೇಕಾದರೆ ‘ಆತ್ಮ ಮಿಥಿಲಾಂಚಲ್’ ಅಗತ್ಯವಿದೆ. ಹಾಗಾಗಿ ಈ ಚುನಾವಣೆಯಲ್ಲಿ ಆರ್​ಜೆಡಿ ನೇತೃತ್ವದ ಮಹಾಘಟ​ಬಂಧನ್​ ಸೋಲಿಸಬೇಕೆಂದು ಜನತೆಗೆ ಪ್ರಧಾನಿ ಮೋದಿ ಕರೆ ನೀಡಿದರು.

Bihar
ಮೋದಿ
author img

By

Published : Oct 28, 2020, 1:09 PM IST

ದರ್ಬಾಂಗ (ಬಿಹಾರ) : ಬಿಹಾರದಲ್ಲಿ ಇಂದು 71 ಸ್ಥಾನಗಳಿಗೆ ಮೊದಲ ಹಂತದ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ಇತ್ತ ಜೆಡಿಯು ನೇತೃತ್ವದ ಮಹಾಘಟಬಂಧನ್​ನಿಂದ ನಡೆಯುತ್ತಿರುವ ಎರಡನೇ ಹಂತದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ, ಸಿಎಂ ನಿತೀಶ್ ಕುಮಾರ್​ ಸೇರಿ ಹಲವರು ಭಾಗಿಯಾಗಿದ್ದಾರೆ.

‘ಆತ್ಮ ನಿರ್ಭರ ಬಿಹಾರ’ಕ್ಕೆ ನಮೋ ಕರೆ

ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಆತ್ಮನಿರ್ಭರ ಬಿಹಾರ’ ಆಗಬೇಕಾದರೆ ‘ಆತ್ಮ ಮಿಥಿಲಾಂಚಲ್’ ಅಗತ್ಯವಿದೆ ಎಂದರು. ಆರ್​ಜೆಡಿ ನೇತೃತ್ವದ ಮಹಾಘಟ್​ಬಂಧನ್​ ವಿರುದ್ಧ ವಾಗ್ದಾಳಿ ನಡೆಸಿದ ನಮೋ, ಬಿಹಾರಕ್ಕೆ ಜಂಗಲ್​ರಾಜ್​​ ಅನ್ನು ತಂದು, ಲೂಟಿ ಮಾಡಿದವರನ್ನು ನಾವು ಮತ್ತೆ ಸೋಲಿಸೋಣ ಎಂದು ಕರೆ ಕೊಟ್ಟರು.

‘ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ’

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಶಿಲಾನ್ಯಾಸಕ್ಕೂ ಮೊದಲು ಕೆಲವರು ರಾಮ ಮಂದಿರ ನಿರ್ಮಾಣ ಯಾವಾಗ ಎಂದು ಪ್ರಶ್ನಿಸುತ್ತಿದ್ದರು. ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರೇ ನಮ್ಮನ್ನು ಶ್ಲಾಘಿಸುತ್ತಿದ್ದಾರೆ. ಕೊಟ್ಟ ಮಾತಿನಂತೆ ಬಿಜೆಪಿ ಹಾಗೂ ಎನ್​ಡಿಎ ಸರ್ಕಾರ ನಡೆದುಕೊಳ್ಳುತ್ತದೆ ಅನ್ನೋ ಮೂಲಕ ವಿರೋಧಿಗಳಿಗೆ ಪ್ರಧಾನಿ ಟಾಂಗ್ ನೀಡಿದರು.

ಎನ್​ಡಿಎ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ: ಮೋದಿ

‘ಕೋವಿಡ್ ನಿಯಮ ಅನುಸರಿಸಿ’

ದೇಶಾದ್ಯಂತ ಕೋವಿಡ್ ವ್ಯಾಪಿಸುತ್ತಿದ್ದು, ಮತದಾನದ ವೇಳೆ ನಿಯಮ ಪಾಲಿಸಿ. ಕೋವಿಡ್​ ಸೋಂಕಿಗೆ ಒಳಗಾಗಿರುವ ಎಲ್ಲರೂ ಶೀಘ್ರ ಗುಣಮುಖರಾಗಲೆಂದು ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥಿಸಿದರು.

‘ಕಮಿಷನ್ ಇಷ್ಟ ಪಡುತ್ತಿದ್ದ ಸರ್ಕಾರ ಕಾಂಗ್ರೆಸ್’

ಈ ಹಿಂದಿನ ಸರ್ಕಾರ ಕಮಿಷನ್​ ಅನ್ನು ತುಂಬಾ ಇಷ್ಟ ಪಡುತ್ತಿತ್ತು. ಅಭಿವೃದ್ಧಿಯತ್ತ ಎಂದಿಗೂ ಗಮನ ಹರಿಸಲಿಲ್ಲ. ಮಿಥಿಲಂಚಲ್​ ಅನ್ನು ಸಂಪರ್ಕಿಸುವ ಕೋಸಿ ಮಹಾ ಸೇತುವೆ ಏನಾಯಿತು ಅನ್ನೋದೇ ಇದಕ್ಕೆ ಸ್ಪಷ್ಟ ಉದಾಹರಣೆ. ಅದು ನಿಮಗೂ ತಿಳಿದಿದೆ ಅನ್ನೋ ಮೂಲಕ ಕಾಂಗ್ರೆಸ್ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.