ETV Bharat / bharat

ನಕಾರಾತ್ಮಕತೆಯತ್ತ ತೆರಳಿದ್ದ ದೇಶದ ಮನಸ್ಥಿತಿಯನ್ನ ಅಭಿವೃದ್ಧಿಯತ್ತ ತಿರುಗಿಸಲು ಮೋದಿ ಯತ್ನ!

author img

By

Published : Aug 16, 2020, 12:12 AM IST

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡುತ್ತಿರುವುದು ಸತತ ಏಳನೇ ಬಾರಿಯಾಗಿದೆ. ಇದೇ ವೇಳೆ, ತಮ್ಮ ಸರ್ಕಾರದ ಕೆಲಸಗಳನ್ನು ಪುಂಖಾನುಪುಂಖವಾಗಿ ಟೀಕಿಸುವ ಮನಸ್ಥಿತಿಯಲ್ಲಿರುವ ತಮ್ಮ ವಿಮರ್ಶಕರನ್ನು ಖಂಡಿಸಿದ ಮೋದಿ, ಭಾರತದ ಅಭಿವೃದ್ಧಿಗೆ ತ್ವರಿತ ಬದಲಾವಣೆಯ ಹಾದಿಯಲ್ಲಿ ಸಾಗಿಸಲು ಏನು ಬೇಕಾದರೂ ಮಾಡಬೇಕೆಂಬ ಧೃಡ ಸಂಕಲ್ಪವನ್ನು ದೇಶಕ್ಕೆ ತಿಳಿಸಲು ಮೋದಿ ಪ್ರಯತ್ನ ನಡೆಸಿದರು.

pm-battles-nations-psyche-of-negativity-to-bolster-mood
ಪ್ರಧಾನ ಮಂತ್ರಿ ನರೇಂದ್ರ ಮೋದಿ

ಸ್ವಾತಂತ್ರ್ಯೋತ್ಸವದ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮ್ಯಾರಥಾನ್ ಭಾಷಣದ ಏಕೈಕ ಉದ್ದೇಶವೆಂದರೆ ಅದು ಮಹಾಮಾರಿ ಕೊರೋನಾ ಸೋಂಕಿನ ದಾಳಿಯಿಂದ ದೇಶದ ಜನರ ಮನಸನ್ನ ಆವರಿಸಿರುವ ನಕಾರಾತ್ಮಕತೆಯನ್ನು ಓಡಿಸುವುದು ಮತ್ತು ಚೈತನ್ಯ ತುಂಬುವ ಮೂಲಕ ಜನರಲ್ಲಿ ಅಭಿವೃದ್ಧಿಯ ಹಸಿವನ್ನ ಮತ್ತೆ ಪುನರ್ ಸ್ಥಾಪಿಸುವುದೇ ಆಗಿದೆ. ಮೋದಿಯವರ ಪಂಚ್ ಲೈನ್ ಎಂದರೆ, ನಮಗೆ ಅಸಂಖ್ಯಾತ ಸಮಸ್ಯೆಗಳು ಇದ್ದರೆ, ನಮ್ಮ ಮಧ್ಯೆ ಅವುಗಳನ್ನ ಪರಿಹರಿಸಲು ಬೇಕಾದ ಕಷ್ಟ ಪಟ್ಟು ಕೆಲಸ ಮಾಡುವ ಜನರನ್ನು ಸಹ ನಾವು ಹೊಂದಿದ್ದೇವೆ ಎಂದಿದ್ದಾರೆ.

ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಸತತ ಏಳನೇ ಬಾರಿಯಾಗಿದೆ. ಇದೇ ವೇಳೆ, ತಮ್ಮ ಸರ್ಕಾರದ ಕೆಲಸಗಳನ್ನು ಪುಂಖಾನುಪುಂಖವಾಗಿ ಟೀಕಿಸುವ ಮನಸ್ಥಿತಿಯಲ್ಲಿರುವ ತಮ್ಮ ವಿಮರ್ಶಕರನ್ನು ಖಂಡಿಸಿದ ಮೋದಿ, ಭಾರತದ ಅಭಿವೃದ್ಧಿಗೆ ತ್ವರಿತ ಬದಲಾವಣೆಯ ಹಾದಿಯಲ್ಲಿ ಸಾಗಿಸಲು ಏನು ಬೇಕಾದರೂ ಮಾಡಬೇಕೆಂಬ ಧೃಡ ಸಂಕಲ್ಪವನ್ನು ದೇಶಕ್ಕೆ ತಿಳಿಸಲು ಮೋದಿ ಪ್ರಯತ್ನ ನಡೆಸಿದರು. ಈ ಮೂಲಕ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಂದಿರುವ ಅಗಾಧ ಕೆಲದ ಬಗ್ಗೆ ಧೃತಿಗೆಟ್ಟಿಲ್ಲ ಮತ್ತು ಸಾಮರ್ಥ್ಯ ಕಳೆದುಕೊಂಡಿಲ್ಲ ಎಂಬುದನ್ನ ಸಾರಿ ಸಾರಿ ಹೇಳಿದರು. ಈ ರೀತಿಯ ನಡವಳಿಕೆಯಿಂದಲೇ ಮಹತ್ವಾಕಾಂಕ್ಷಿ ಭಾರತವು 2014 ರಲ್ಲಿ ಬೃಹತ್ ಜನಾದೇಶವನ್ನು ಮತ್ತು 2019 ರಲ್ಲಿ ಮತ್ತು ಬೃಹತ್ ಜನಾದೇಶವನ್ನ ನೀಡಿತ್ತು.

ಯಾವಾಗ ನೆರೆಯ ಚೀನಾದಲ್ಲಿ ಹುಟ್ಟಿದ ಮಹಾಮಾರಿ ಸಾಂಕ್ರಾಮಿಕ ಕೊರೋನಾ ವೈರಸ್ ಹೊಡೆತದಿಂದ ಉಂಟಾದ ಹಾನಿಯ ಬಳಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಮನವು ಮುಖ್ಯವಾಗಿ “ಆತ್ಮನಿರ್ಭರ ಭಾರತ್” (ಸ್ವಾವಲಂಬಿ ಭಾರತ) ಕಾರ್ಯಾಚರಣೆಯ ಮೇಲೆ ನಿಂತಿದೆ. ಆಧುನಿಕ ಭಾರತದ ನಿರ್ಮಾಣದ ಬಗ್ಗೆ ಅವರು ಮಾಡಿದ 86 ನಿಮಿಷಗಳ ಭಾಷಣವು ಅತ್ಯಂತ ಪ್ರಭಾವಶಾಲಿಯಾಗಿತ್ತು. ಸ್ವಾವಲಂಬಿ ಭಾರತದತ್ತ ಮುನ್ನುಗ್ಗುವಂತೆ ಇತ್ತು.

ಪ್ರಧಾನಿ ತಮ್ಮ ಭಾರತದ ಮೊದಲ ಗುರಿಯನ್ನ ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ವರ್ಲ್ಡ್’ ಗೆ ವಿಸ್ತರಿಸಿದರು. ಇದರ ಅರ್ಥವೆಂದರೆ ಭಾರತ ಸ್ವಾಲಂಬಿ ಆಗಲೇಬೇಕು ಮತ್ತು ಭಾರತದ ಅಪಾರ ಪ್ರಮಾಣದ ಸಂಪನ್ಮೂಲ ಬಳಸಿಕೊಳ್ಳುವ ಮೂಲಕ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗೆ ಬೇಕಾದಂತ ಉತ್ಪಾದನೆ ಮಾಡಬೇಕು ಎಂಬುದಾಗಿದೆ. ಸಲು ತನ್ನ ಅಪಾರ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಬೇಕು ಎಂದರ್ಥ. ಇದು ಎಲ್ಲ ಕೇವಲ ಮಾತಷ್ಟೇ ಕೆಲಸ ಏನೂ ಇಲ್ಲ ಎಂದು ಯಾರಾದರೂ ಮಾತನಾಡಿದರೆ, ಕಳೆದ ಹಣಕಾಸು ವರ್ಷದಲ್ಲಿ ಎಫ್ಡಿಐ ಬೆಳವಣಿಗೆ 18% ದಾಖಲಾಗಿದೆ ಎಂಬುದೇ ಉತ್ತರವಾಗಿದ. "ಕಳೆದ ಆರ್ಥಿಕ ವರ್ಷದಲ್ಲಿ ಭಾರತ ದೇಶವು ದಾಖಲೆಯ ವಿದೇಶಿ ನೇರ ಹೂಡಿಕೆಗಳನ್ನು ಪಡೆದುಕೊಂಡಿದೆ ಮತ್ತು ಕರೋನ ವೈರಸ್ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಈ ಸಮಯದಲ್ಲಿ ಸಹ, ದೊಡ್ಡ ಜಾಗತಿಕ ಕಂಪನಿಗಳು ಭಾರತದತ್ತ ನೋಡುತ್ತಿವೆ." ಎಂದು ಹೇಳಿದ್ಧಾರೆ.

ಇದರ ಜೊತೆಗೆ ಇತ್ತೀಚೆಗೆ, ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮದ ಪುನರುಜ್ಜೀವನಕ್ಕಾಗಿ ಒಂದು ಲಕ್ಷ ಕೋಟಿ ರೂ.ಗಳ ಹಂಚಿಕೆಯನ್ನು ಒಳಗೊಂಡಿರುವ 20 ಲಕ್ಷ ಕೋಟಿ ರೂ.ಗಳ “ಆತ್ಮನಿರ್ಭರ ಭಾರತ್” ಕಾರ್ಯಕ್ರಮದಡಿ ಘೋಷಿಸಲಾದ ಹಣದ ಪೂರ್ಣ ಲೆಕವನ್ನ ಪ್ರಧಾನಿ ಪಟ್ಟಿ ಮಾಡಿದ್ದಾರೆ. ಇದೇವೇಳೆ,

ಉದಾರ ಆಮದು ಆಡಳಿತದ ಕಲ್ಪನೆಯನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸುವುದನ್ನ ಮರೆಯಲಿಲ್ಲ. ಕಚ್ಚಾ ವಸ್ತುಗಳನ್ನು ರಫ್ತು ಮಾಡಿ ಸಿದ್ಧಪಡಿಸಿದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆ ದೇಶದಲ್ಲಿ ಎಷ್ಟು ದಿನ ಮುಂದುವರಿಯುತ್ತದೆ ಎಂದು ಗಟ್ಟಿಯಾಗಿ ಯೋಚಿಸುತ್ತಿದ್ದೇವೆ. ಭಾರತವು ಅಪಾರ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ ಮತ್ತು ಇದರ ಬಳಕೆಗೆ ಸ್ವಲ್ಪ ಸಮಯ ಕೊಡಬೇಕಾದ ಅಗತ್ಯವಿದೆ ಎಂದಿದ್ಧಾರೆ.

"ಈಗ ನಾವು ಮೇಕ್ ಇನ್ ಇಂಡಿಯಾ ಜೊತೆಗೆ‘ ಮೇಕ್ ಫಾರ್ ದಿ ವರ್ಲ್ಡ್ ’ಎಂಬ ಮಂತ್ರದೊಂದಿಗೆ ಮುಂದುವರಿಯಬೇಕಾಗಿದೆ.” ಮಲ್ಟಿ-ಮೋಡಲ್ ಕನೆಕ್ಟಿವಿಟಿ ಮೂಲಸೌಕರ್ಯಕ್ಕಾಗಿ ಅವರು ಒಂದು ದೊಡ್ಡ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜನರ ಮುಂದೆ ಅನಾವರಣಗೊಳಿಸಿದರು, ಅದು ಇಡೀ ದೇಶವನ್ನು ಸಂಪರ್ಕಿಸಬೇಕು ಮತ್ತು ಆ ಅಗಾಧ ಸಂಪರ್ಕ ಅಂತರವನ್ನ ಮುರಿಯಬೇಕು. ಈ ಸಂಬಂಧ, ವಾಜಪೇಯಿ ಯುಗದಲ್ಲಿ 5,846 ಕಿ.ಮೀ ಉದ್ದದ ಗೋಲ್ಡನ್ ಚತುಷ್ಪಥ ಹೆದ್ದಾರಿ ಜಾಲವನ್ನು ಪ್ರಾರಂಭಿಸಿದಂತೆಯೇ, ಭಾರತದ ಇಡೀ ಕರಾವಳಿಯುದ್ದಕ್ಕೂ ನಾಲ್ಕು ಪಥದ ಹೆದ್ದಾರಿಯನ್ನು ನಿರ್ಮಿಸುವ ಯೋಜನೆಯನ್ನು ಅವರು ಘೋಷಿಸಿದರು. ಲಾಕ್ ಡೌನ್ ಮುಗಿದ ಬಳಿಕ ವಿವಿಧ ಹಂತಗಳಲ್ಲಿ ಭಾರತವು ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೆ, ಮಹಾಮಾರಿ ಕರೋನ ವೈರಸ್ ಅಂತ್ಯವನ್ನು ಯಾವಾಗ ನೋಡಬಹುದೆಂದು ಎದುರು ನೋಡುತ್ತಿದ್ದ ಹೆಚ್ಚಿನ ಸಂಖ್ಯೆಯ ಭಾರತೀಯರ ಕುತೂಹಲವನ್ನು ಅವರು ತಣಿಸಿದರು. ದೇಶದಲ್ಲಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳ ಬಗ್ಗೆ ಅವರು ಮಾತನಾಡುತ್ತಾ, ಒಂದಲ್ಲ ಮೂರು ಕಡೆ ಲಸಿಕೆ ಅಭಿವೃದ್ಧಿಪಡಿಸುವ ಕ್ಲಿನಿಕಲ್ ಪ್ರಯೋಗಗಳು ವಿವಿಧ ಹಂತಗಳಲ್ಲಿ ಸಾಗುತ್ತಿವೆ ಎಂದು ಸ್ಪಷ್ಟಪಡಿಸಿದರು. ಈ ಲಸಿಕೆಗಳಿಗೆ ಅಗತ್ಯವಾದ ಎಲ್ಲ ಅನುಮತಿಗಳು ದೊರೆತ ಕೂಡಲೇ ಜನರಿಗೆ ಲಭ್ಯತೆಗೆ ಯಾವುದೇ ವಿಳಂಬವಾಗದಂತೆ, ಭಾರೀ ಪ್ರಮಾಣದ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ ಘೋಷಿಸಿದರು.

ದೇಶದ ಜನರ ಯೋಗಕ್ಷೇಮಕ್ಕೆ ಸಂಬಂಧಿಸಿದ ಕ್ರಮದಲ್ಲಿ, ಮೋದಿಯವರು ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ನ ಆರಂಭದ ಸೂಚನೆ ನೀಡಿದ್ಧಾರೆ. ಅದರ ಅಡಿಯಲ್ಲಿ ಪ್ರತಿಯೊಬ್ಬ ಭಾರತೀಯರೂ ತಮ್ಮದೇ ಆದ ಆರೋಗ್ಯ ಐಡಿ ಹೊಂದಿರುತ್ತಾರೆ. ಈ ಐಡಿ ಮತ್ತು ಆರೋಗ್ಯ ಪ್ರೊಫೈಲ್ನಲ್ಲಿ ಅವರು ಹೊಂದಿರುವ ಕಾಯಿಲೆಗಳು, ಅವರು ಪಡೆದ ಚಿಕಿತ್ಸೆ, ವೈದ್ಯರ ಭೇಟಿ, ಔಷಧಿಗಳನ್ನು ಬಳಸುವುದು ಮುಂತಾದ ಎಲ್ಲಾ ವಿವರಗಳು ಇರುತ್ತವೆ.

ಇತ್ತ, ಲಡಾಖ್ ವಾಸ್ತವ ಗಡಿ ಪ್ರದೇಶದಲ್ಲಿ ಚೀನಾದೊಂದಿಗಿನ ಪ್ರಕ್ಷುಬ್ಧ ವಾತಾವರಣ, 370 ನೇ ವಿಧಿಯನ್ನು ಹಿಂತೆಗೆದುಕೊಂಡ ಒಂದು ವರ್ಷದ ಬಳಿಕ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿನ ಪರಿಸ್ಥಿತಿ ಬಗ್ಗೆ ಮೋದಿಯವರ ಭಾಷಣದಲ್ಲಿ ವಿಶೇಷ ಉಲ್ಲೇಖವಿದೆ, ಇದೇ ಬಾ಼ಣದಲ್ಲಿ ಅವರು ಬೀಜಿಂಗ್ಗೆ ಬಲವಾದ ಎಚ್ಚರಿಕೆ ನೀಡಲು ಪ್ರಯತ್ನ ನಡೆಸಿದರು. ಇದೇ ವೇಳೆ, ಹೊಸ ವಿಧಾನಸಭಾ ಚುನಾವಣೆಗೆ ದಾರಿ ಮಾಡಿಕೊಡಲು ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಲಿಮಿಟೇಶನ್ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು. “ಈ ಒಂದು ವರ್ಷವು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯ ಹೊಸ ಪ್ರಯಾಣದ ವರ್ಷವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಲಿಮಿಟೇಶನ್ ತಾಲೀಮು ನಡೆಸಲಾಗುತ್ತಿದೆ, ಈ ಕಾರ್ಯವನ್ನು ಪೂರ್ಣಗೊಳಿಸಲು ದೇಶವು ಬದ್ಧವಾಗಿದೆ, ಇದರಿಂದಾಗಿ ಚುನಾವಣೆಗಳು ನಡೆಯುತ್ತವೆ ಮತ್ತು ಅಲ್ಲಿ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ” ಎಂದು ಹೇಳಿದರು.

ಚೀನಾದ ಕಡೆಯಿಂದ ನಡೆಯುತ್ತಿರುವ ಆಕ್ರಮಣಗಳ ಕುರಿತಂತೆ ತಮ್ಮ ಸರ್ಕಾರದ ಪ್ರತಿಕ್ರಿಯೆಯನ್ನು ಆಗಾಗ್ಗೆ ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಂತಹ ತಮ್ಮ ವಿಮರ್ಶಕರನ್ನು ಪ್ರಸ್ತಾಪಿಸಿದ ಮೋದಿ, ಲಡಾಖ್ ಪ್ರದೇಶದಲ್ಲಿ “ವಿಸ್ತರಣಾವಾದ” (ಚೀನಾದಿಂದ) ಅಥವಾ “ಭಯೋತ್ಪಾದನೆ” (ಪಾಕಿಸ್ತಾನದಿಂದ ಗಡಿಯಿಂದ) ಆದರೂ ಸರಿ ಅಲ್ಲಿ ಭಾರತದ ಸೈನಿಕರು ಬಲವಾದ ಪ್ರತಿಕ್ರಿಯೆ ನೀಡಿದ್ದಾರೆ. ದೇಶದ ಸಾರ್ವಭೌಮತ್ವವನ್ನು ಪ್ರಶ್ನಿಸಿದ ಯಾರಿಗಾದರೂ ಇದು ಸೂಕ್ತವಾದ ಉತ್ತರ ಎಂದಿದ್ದಾರೆ. "ಎಲ್ಒಸಿ (ಲೈನ್ ಆಫ್ ಕಂಟ್ರೋಲ್) ನಿಂದ ಎಲ್ಎಸಿ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ವರೆಗೆ, ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಿದಾಗಲೆಲ್ಲಾ, ನಮ್ಮ ಸೈನಿಕರು ತಮ್ಮದೇ ಭಾಷೆಯಲ್ಲಿ ಉತ್ತರಿಸಿದ್ದಾರೆ." ಎಂದು ಎದೆ ತಟ್ಟಿ ಹೇಳಿದ್ದಾರೆ.

ಇನ್ನೂ, ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ನೇಮಕ ಮಾಡುವ ಮೂಲಕ ಗಡಿ ಪ್ರದೇಶಗಳಲ್ಲಿ ಗಡಿನಾಡಿನ ಶಕ್ತಿಯಾಗಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಯನ್ನು ವಿಸ್ತರಿಸುವ ಹೊಸ ಯೋಜನೆಯನ್ನು ಪ್ರಧಾನಿ ಘೋಷಣೆ ಮಾಡಿದ್ದಾರೆ. ನಂತರ ಅವರನ್ನು ಸೈನ್ಯ ಮತ್ತು ಅರೆಸೇನಾ ಪಡೆಗಳಿಗೆ ಸೇರಿಸಿಕೊಳ್ಳಬಹುದು ಎಂಬುದು ಅವರ ಯೋಜನೆಯಾಗಿದೆ.

ಕುತೂಹಲಕಾರಿ ವಿಷಯವೆಂದರೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಯಕತ್ವದಲ್ಲಿ ಭಾರತದ ವಿದೇಶಾಂಗ ನೀತಿಯ ಒಂದು ವಿಶೆಷ ಅಂಶವನ್ನು ವಿವರಿಸಿದರು. "ನೆರೆಹೊರೆಯವರು ಕೇವಲ ನಮ್ಮ ಗಡಿಗಳನ್ನು ಹಂಚಿಕೊಳ್ಳುವವರಲ್ಲ, ಅವರು ನಮ್ಮ ಹೃದಯವನ್ನು ಹಂಚಿಕೊಳ್ಳುವವರು. ಸಂಬಂಧವನ್ನು ಎಲ್ಲಿ ಗೌರವಿಸಲಾಗುತ್ತದೆಯೋ ಅಲ್ಲಿ ಸಂಬಂಧ ಮತ್ತಷ್ಟು ಉತ್ತಮವಾಗುತ್ತದೆ. ಇಂದು, ಭಾರತವು ಹೆಚ್ಚಿನ ನೆರೆಹೊರೆಯಲ್ಲಿ ನಿಕಟ ಸಂಬಂಧವನ್ನು ಹೊಂದಿದೆ. ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಪರಸ್ಪರ ಸಾಕಷ್ಟು ಗೌರವವನ್ನು ಹೊಂದಿದ್ದೇವೆ, " ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಹದಗೆಟ್ಟ ಸಂಬಂಧಗಳಿಗೆ ವಿರುದ್ಧವಾಗಿ ಜಪಾನ್, ಆಸ್ಟ್ರೇಲಿಯಾ ಮತ್ತು ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಬೆಳೆಯುತ್ತಿರುವ ಭಾರತದ ಸಂಬಂಧಗಳ ಪ್ರಸ್ತಾಪವಾಗಿ ಅವರು ಪ್ರತಿಪಾದನೆ ಮಾಡಿದರು.

ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆದ ಭವ್ಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಸಮಾರಂಭದ ವಿಷಯವನ್ನು ಪ್ರಸ್ತಾಪಿಸುವುದನ್ನ ಮೋದಿ ಮರೆಯಲಿಲ್ಲ. “ಶತಮಾನಗಳಿಂದಲೂ ಚಾಲ್ತಿಯಲ್ಲಿದ್ದ ರಾಮ ಜನ್ಮಭೂಮಿ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಲಾಗಿದೆ. ಈ ಕುರಿತಂತೆ ದೇಶದ ಜನರ ನಡವಳಿಕೆ ಅಭೂತಪೂರ್ವವಾಗಿದೆ ಮತ್ತು ಭವಿಷ್ಯದ ಸ್ಫೂರ್ತಿಯಾಗಿದೆ ”ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಮೋದಿ ಈ ಮಾತು ಅವರು ರಾಮ ಮಂದಿರ ನಿರ್ಮಾಣ ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಪ್ರಶ್ನಿಸುವವರಿಗೆ ನೇರವಾಗಿ ನೀಡಿ ಪ್ರತಿಕ್ರಿಯೆಯಂತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.