ETV Bharat / bharat

ಕೊಲ್ಲಿ ರಾಷ್ಟ್ರಗಳಿಂದ ಕಾರ್ಮಿಕರನ್ನು ಕರೆತರಲು ಸುಪ್ರೀಂಕೋರ್ಟ್​ಗೆ ಪಿಐಎಲ್.. - ಕಾರ್ಮಿಕರನ್ನು ಕರೆತರಲು ಸುಪ್ರೀಂಕೋರ್ಟ್​ಗೆ ಪಿಐಎಲ್​​ ಸಲ್ಲಿಕೆ

ಈ ಶಿಬಿರಗಳಲ್ಲಿ ಈಗಾಗಲೇ ಹಲವಾರು ಕಾರ್ಮಿಕರಿದ್ದು, ಅಲ್ಲಿ ಮೂಲಸೌಲಭ್ಯಗಳಾದ ನೀರು ಮತ್ತು ವಸತಿ ಯಾವುದೂ ಇಲ್ಲ ಎಂದು ಅರ್ಜಿದಾರರು ಕೋರ್ಟ್​ಗೆ ತಿಳಿಸಿದ್ದಾರೆ. ನಮ್ಮ ಕಾರ್ಮಿಕರಿಗೆ ಆ ರಾಷ್ಟ್ರಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ.

ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್​
author img

By

Published : Apr 10, 2020, 8:51 PM IST

ನವದೆಹಲಿ : ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯ ವಲಸಿಗರನ್ನು ಮರಳಿ ಕರೆತರಲು ಸುಪ್ರೀಂಕೋರ್ಟ್​ನಲ್ಲಿ ಪಿಐಎಲ್​​​ನ ಸಲ್ಲಿಸಲಾಗಿದೆ. ಭಾರತೀಯ ವಲಸಿಗರು ಕೊಲ್ಲಿ ರಾಷ್ಟ್ರಗಳಲ್ಲಿ ಕಾರ್ಮಿಕರ ವಸತಿ ಶಿಬಿರಗಳಲ್ಲಿ ದುರ್ಬಲ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ.

COVID-19 ಕಾರಣದಿಂದಾಗಿ ನಿರುದ್ಯೋಗಿಗಳಾಗಿರುವ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿಯಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಆನ್‌ಲೈನ್ ಸಮಾಲೋಚನೆ ಮತ್ತು ಅವರಲ್ಲಿ ರೋಗದ ಲಕ್ಷಣಗಳು ಕಂಡು ಬಂದಾಗ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕೆಂದು ಕೋರಲಾಗಿದೆ. ಹಲವಾರು ಗಲ್ಫ್ ರಾಜ್ಯಗಳನ್ನು ಲಾಕ್​​ಡೌನ್ ಮಾಡಿದ ಹಿನ್ನೆಲೆ ಕಾರ್ಮಿಕರನ್ನು ವಸತಿ ಶಿಬಿರಗಳಲ್ಲಿಡಲಾಗಿದೆ.

ಈ ಶಿಬಿರಗಳಲ್ಲಿ ಈಗಾಗಲೇ ಹಲವಾರು ಕಾರ್ಮಿಕರಿದ್ದು, ಅಲ್ಲಿ ಮೂಲಸೌಲಭ್ಯಗಳಾದ ನೀರು ಮತ್ತು ವಸತಿ ಯಾವುದೂ ಇಲ್ಲ ಎಂದು ಅರ್ಜಿದಾರರು ಕೋರ್ಟ್​ಗೆ ತಿಳಿಸಿದ್ದಾರೆ. ನಮ್ಮ ಕಾರ್ಮಿಕರಿಗೆ ಆ ರಾಷ್ಟ್ರಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ವಲಸೆ ಕಾರ್ಮಿಕರಿಗಾಗಿ ಕತಾರ್‌ನ ಅತಿದೊಡ್ಡ ಕಾರ್ಮಿಕ ಶಿಬಿರವು ವಾಸ್ತವ ಜೈಲಾಗಿ ಮಾರ್ಪಟ್ಟಿದೆ. ಲಾಕ್‌ಡೌನ್‌ ವೇಳೆಯಲ್ಲಿ ನೂರಾರು ಕಾರ್ಮಿಕರು COVID-19 ಸೋಂಕಿಗೆ ಒಳಗಾಗಿದ್ದಾರೆ ಎಂಬುದು ಆತಂಕಕಾರಿ ಸಂಗತಿ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.