ETV Bharat / bharat

ಗೋ ಏರ್​​ ವಿಮಾನದೊಳಗೆ ಜೋಡಿ ಪಾರಿವಾಳ... ಪ್ರಯಾಣಿಕರಿಗೆ ಚೆಲ್ಲಾಟ, ಸಿಬ್ಬಂದಿಗೆ ಪ್ರಾಣಸಂಕಟ!

ಕೆಲ ನಿಮಿಷಗಳಲ್ಲೇ ಹಾರಾಟ ನಡೆಸಬೇಕಾಗಿದ್ದ ವಿಮಾನವೊಂದರಲ್ಲಿ ಎರಡು ಪಾರಿವಾಳಗಳು ಕಾಣಿಸಿಕೊಂಡಿದ್ದರಿಂದ ಕೆಲಹೊತ್ತು ಅದು ತಡವಾಗಿ ಹಾರಾಟ ನಡೆಸಿರುವ ಘಟನೆ ನಡೆದಿದೆ.

Pigeons spotted inside Jaipur bound GoAir plane

author img

By

Published : Feb 29, 2020, 4:53 PM IST

Updated : Feb 29, 2020, 7:17 PM IST

ಅಹಮದಾಬಾದ್​: ಗುಜರಾತ್​ನ ಅಹಮದಾಬಾದ್​ ನಿಂದ ಜೈಪುರಕ್ಕೆ ತೆರಳುತ್ತಿದ್ದ ಗೋ -ಏರ್​ ವಿಮಾನದೊಳಗೆ ಏಕಾಏಕಿ ಎರಡು ಪಾರಿವಾಳ ಕಾಣಿಸಿಕೊಂಡಿದ್ದು, ಅವುಗಳನ್ನ ಹಿಡಿದು ಹೊರಹಾಕಲು ವಿಮಾನಯಾನ ಸಿಬ್ಬಂದಿ ಕೆಲಹೊತ್ತು ಹರಸಾಹಸ ಪಟ್ಟಿರುವ ಘಟನೆ ನಡೆದಿದೆ.

ಟೇಕ್ ​- ಆಫ್​ ಆಗಲು ಕೆಲ ನಿಮಿಷಗಳು ಬಾಕಿ ಇರುವಾಗಲೇ ಎರಡು ಪಾರಿವಾಳ ವಿಮಾನದೊಳಗೆ ಕಾಣಿಸಿಕೊಂಡಿದ್ದು, ಹೀಗಾಗಿ ವಿಮಾನ 30 ನಿಮಿಷಗಳ ಕಾಲ ತಡವಾಗಿ ಹಾರಾಟ ನಡೆಸಬೇಕಾಯಿತು. ಈ ವೇಳೆ, ವಿಮಾನದೊಳಗಿದ್ದ ಪ್ರಯಾಣಿಕರು ಅವುಗಳನ್ನ ಹಿಡಿಯಲು ಪ್ರಯತ್ನ ನಡೆಸಿದರೆ ಸಿಬ್ಬಂದಿ ಅವುಗಳನ್ನ ಹೊರಹಾಕಲು ಯತ್ನಿಸಿದ್ದಾರೆ.

  • GoAir: Two pigeons found their way inside GoAir Ahmedabad-Jaipur flight while passengers were boarding(at Ahmedabad airport yesterday).The crew immediately shooed birds outside. Regret inconvenience caused to passengers and request airport authorities to get rid of this menace pic.twitter.com/cmh2nmVtom

    — ANI (@ANI) February 29, 2020 " class="align-text-top noRightClick twitterSection" data=" ">

ಈ ವೇಳೆ, ಎರಡು ಪಾರಿವಾಳ ಒಂದೆಡೆಯಿಂದ ಮತ್ತೊಂದು ಕಡೆ ಹಾರಾಟ ನಡೆಸಿವೆ. ಈ ವೇಳೆ, ಕೆಲ ಪ್ರಯಾಣಿಕರು ಅದರ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Last Updated : Feb 29, 2020, 7:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.