ETV Bharat / bharat

16ನೇ ದಿನವೂ ಇಂಧನ ಬೆಲೆಯಲ್ಲಿ ಏರಿಕೆ: ವಾಹನ ಸವಾರರಿಗೆ ತಲೆಬಿಸಿ - ಇಂದನ ಬೆಲೆ

ಇಂಧನ ಬೆಲೆ ಏರಿಕೆಯಿಂದಾಗಿ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಸತತ 16ನೇ ದಿನವೂ ಕೂಡಾ ಇಂಧನ ಬೆಲೆಯಲ್ಲಿ ಏರಿಕೆ ಕಂಡಿದ್ದು, ಡೀಸೆಲ್​ 58 ಪೈಸೆ ಹಾಗೂ ಪೆಟ್ರೋಲ್​ ಬೆಲೆ 33 ಪೈಸೆ ಏರಿಕೆಯಾಗಿದೆ.

oil prices
ತೈಲ ಬೆಲೆ
author img

By

Published : Jun 22, 2020, 8:48 AM IST

Updated : Jun 22, 2020, 10:52 AM IST

ನವದೆಹಲಿ: ಸತತ 16ನೇ ದಿನವೂ ತೈಲಬೆಲೆಯಲ್ಲಿ ಏರಿಕೆಯಾಗಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್​ನ ಬೆಲೆಯಲ್ಲಿ 33 ಪೈಸೆ ಹಾಗೂ ಡೀಸೆಲ್​ನ ಬೆಲೆಯಲ್ಲಿ 58 ಪೈಸೆಯನ್ನು ಹೆಚ್ಚಿಸಿವೆ.

ಇದರಿಂದಾಗಿ ಡೀಸೆಲ್​ನ ಬೆಲೆ 16 ದಿನಗಳಲ್ಲಿ ಡೀಸೆಲ್​ನ ಬೆಲೆ 9 ರೂಪಾಯಿ 46ಪೈಸೆಯಷ್ಟು ಹೆಚ್ಚಳ ಕಂಡಿದೆ. ಪೆಟ್ರೋಲ್​ನ ಬೆಲೆ 8 ರೂಪಾಯಿ 30 ಪೈಸೆಯಷ್ಟು ಹೆಚ್ಚಳವಾಗಿದೆ. ಇದು ವಾಹನ ಸವಾರಿಗೆ ತಲೆಬಿಸಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯಕ್ಕೆ ಪೆಟ್ರೋಲ್​ನ ಬೆಲೆ ದೆಹಲಿಯಲ್ಲಿ ಲೀಟರ್​ಗೆ 79.56 ರೂಪಾಯಿ ಹಾಗೂ ಡೀಸೆಲ್​ಗೆ 78.85 ರೂಪಾಯಿಯಷ್ಟಿದೆ. ಮುಂದಿನ ದಿನಗಳಲ್ಲೂ ಕೂಡಾ ಇಂಧನ ಬೆಲೆ ಏರುಗತಿಯಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ.

ಭಾನುವಾರವಷ್ಟೇ ಪೆಟ್ರೋಲ್‌ಗೆ 79.23 ರೂಪಾಯಿ, ಡೀಸೆಲ್​ನ ಬೆಲೆ 78.27 ರೂಪಾಯಿಗಳಷ್ಟಿತ್ತು.

Last Updated : Jun 22, 2020, 10:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.