ETV Bharat / bharat

ರಾಜತಾಂತ್ರಿಕರಿಗೆ ಹಿಂಸೆ ಪ್ರಕರಣ ; ಪಾಕ್ ಹೈಕಮಿಷಶನರ್​ಗೆ ಭಾರತದ ಎಚ್ಚರಿಕೆ

ಪಾಕಿಸ್ತಾನದ ಈ ಹೇಯ ಕೃತ್ಯವನ್ನು ಭಾರತ ಉಗ್ರವಾಗಿ ಖಂಡಿಸುತ್ತದೆ. ಇದೊಂದು ಪೂರ್ವಗ್ರಹಪೀಡಿತ ಹಾಗೂ ಪ್ರಚೋದನಕಾರಿ ಕೃತ್ಯವಾಗಿದೆ. ಇಸ್ಲಾಮಾಬಾದ್​ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಕಾರ್ಯಚಟುವಟಿಕೆಗಳಿಗೆ ಅಡ್ಡಿ ಉಂಟು ಮಾಡುವ ಉದ್ದೇಶದಿಂದಲೇ ಪಾಕಿಸ್ತಾನ ಇಂಥ ಕೆಲಸಗಳನ್ನು ಮಾಡುತ್ತಿದೆ.

Pakistan CdA summoned
Pakistan CdA summoned
author img

By

Published : Jun 16, 2020, 10:58 PM IST

ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಪಾಕಿಸ್ತಾನ ಭದ್ರತಾ ಪಡೆಗಳು ಬಂಧಿಸಿ ಹಿಂಸೆ ನೀಡಿದ್ದನ್ನು ಭಾರತ ಉಗ್ರವಾಗಿ ಖಂಡಿಸಿದೆ. ನವದೆಹಲಿಯಲ್ಲಿರುವ ಪಾಕ್ ರಾಯಭಾರ ಕಚೇರಿಯ ರಾಯಭಾರಿ (ಹಂಗಾಮಿ) ಹೈದರ್ ಶಾ ಅವರನ್ನು ಕರೆಸಿ, ಈ ಕುರಿತು ಪಾಕಿಸ್ತಾನಕ್ಕೆ ಕಟುವಾದ ಶಬ್ಧಗಳಲ್ಲಿ ಇಂದು ಎಚ್ಚರಿಕೆ ನೀಡಲಾಗಿದೆ.

ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಪಾಕ್ ಭದ್ರತಾ ಪಡೆಗಳು ಜೂನ್ 15ರಂದು ಬಲವಂತವಾಗಿ ಅಪಹರಿಸಿ 10 ಗಂಟೆಗೂ ಅಧಿಕ ಕಾಲ ಅಕ್ರಮ ಬಂಧನದಲ್ಲಿಟ್ಟು ಹಿಂಸೆ ನೀಡಿದ್ದವು. ಇಸ್ಲಾಮಾಬಾದ್​ನಲ್ಲಿನ ಭಾರತೀಯ ರಾಯಭಾರ ಕಚೇರಿ ಹಾಗೂ ದೆಹಲಿಯ ವಿದೇಶಾಂಗ ಇಲಾಖೆಯ ಹಸ್ತಕ್ಷೇಪದ ನಂತರವೇ ಪಾಕ್ ಅವರನ್ನು ಬಿಡುಗಡೆ ಮಾಡಿತ್ತು. ಬಂಧನದ ವೇಳೆ ಭಾರತೀಯ ಅಧಿಕಾರಿಗಳನ್ನು ವ್ಯಾಪಕ ವಿಚಾರಣೆಗೆ ಗುರಿಪಡಿಸಿ ಹಿಂಸಿಸಲಾಗಿತ್ತು. ಅಲ್ಲದೇ ಯಾವುದೋ ಸುಳ್ಳು ಅಪರಾಧ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗಿತ್ತು.

ಪಾಕಿಸ್ತಾನದ ಈ ಹೇಯ ಕೃತ್ಯವನ್ನು ಭಾರತ ಉಗ್ರವಾಗಿ ಖಂಡಿಸುತ್ತದೆ. ಇದೊಂದು ಪೂರ್ವಗ್ರಹಪೀಡಿತ ಹಾಗೂ ಪ್ರಚೋದನಕಾರಿ ಕೃತ್ಯವಾಗಿದೆ. ಇಸ್ಲಾಮಾಬಾದ್​ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಕಾರ್ಯಚಟುವಟಿಕೆಗಳಿಗೆ ಅಡ್ಡಿ ಉಂಟು ಮಾಡುವ ಉದ್ದೇಶದಿಂದಲೇ ಪಾಕಿಸ್ತಾನ ಇಂಥ ಕೆಲಸಗಳನ್ನು ಮಾಡುತ್ತಿದೆ. ಭಾರತೀಯ ರಾಯಭಾರ ಅಧಿಕಾರಿಗಳ ಮೇಲೆ ಪಾಕಿಸ್ತಾನ ಹೊರಿಸಿದ ಎಲ್ಲ ಆರೋಪಗಳನ್ನು ಭಾರತ ಸಾರಾಸಗಟಾಗಿ ನಿರಾಕರಿಸುತ್ತದೆ.

ಪಾಕಿಸ್ತಾನದ ಈ ಕ್ರಿಯೆಯು 1961ರ ವಿಯೆನ್ನಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ. ಮಾತ್ರವಲ್ಲದೆ ರಾಯಭಾರ ಕಚೇರಿ ಸಿಬ್ಬಂದಿಯನ್ನು ನಡೆಸಿಕೊಳ್ಳುವ ಕುರಿತಾಗಿ 1992ರಲ್ಲಿ ಎರಡೂ ರಾಷ್ಟ್ರಗಳು ಮಾಡಿಕೊಂಡಿದ್ದ ಒಪ್ಪಂದವೂ ಉಲ್ಲಂಘನೆಯಾಗಿದೆ ಎಂದು ಭಾರತ ಹೈದರ್ ಅವರಿಗೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.