ETV Bharat / bharat

9 ಉಗ್ರರಿಗೆ ಮರಣದಂಡನೆ ವಿಧಿಸಿದ ಪಾಕ್​​ ಹೈಕೋರ್ಟ್​​

ಮಿಲಿಟರಿ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿದ ಒಂಬತ್ತು ಭಯೋತ್ಪಾದಕರಿಗೆ ಪಾಕ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

Pak court upholds death penalty for nine terrorists involved in attacking military convoy
9 ಉಗ್ರರಿಗೆ ಮರಣದಂಡನೆ ವಿಧಿಸಿದ ಪಾಕ್​​ ಹೈಕೋರ್ಟ್​​
author img

By

Published : Feb 15, 2020, 10:02 AM IST

ಕರಾಚಿ/ಪಾಕಿಸ್ತಾನ: ಮಿಲಿಟರಿ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿದ ಒಂಬತ್ತು ಭಯೋತ್ಪಾದಕರಿಗೆ ಪಾಕ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಪಾಕಿಸ್ತಾನದ ಸಿಂಧ್ ಹೈಕೋರ್ಟ್ ಈ ಮರಣದಂಡನೆ ವಿಧಿಸಿದ್ದು, 2004 ರಲ್ಲಿ ಕರಾಚಿಯ ಕ್ಲಿಫ್ಟನ್ ಸೇತುವೆ ಬಳಿ ಉನ್ನತ ಕಮಾಂಡರ್‌ ಒಬ್ಬರ ಭದ್ರತಾ ಪಡೆಗಳ ಮೇಲೆ ಉಗ್ರರು ದಾಳಿ ನಡೆಸಿದ್ರು. ಈ ದಾಳಿಯಲ್ಲಿ ಆರು ಸೇನಾ ಸಿಬ್ಬಂದಿ ,3 ಜನ ಪೊಲೀಸರು ಸೇರಿದಂತೆ 10 ಜನರು ಮೃತಪಟ್ಟಿದ್ದರು.

ಈ ಪ್ರಕರಣ ಸಂಬಂಧ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು 2006 ರ ಫೆಬ್ರವರಿಯಲ್ಲಿ 11 ಶಂಕಿತ ಉಗ್ರರಿಗೆ ಮರಣದಂಡನೆ ವಿಧಿಸಿತ್ತು. ಆದರೆ, ಅವರೆಲ್ಲರೂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ನಿನ್ನೆ ಈ ವಿಚಾರಣೆ ಕೈಗೆತ್ತಿಕೊಂಡ ಸಿಂಧ್ ಹೈಕೋರ್ಟ್‌ನ 10 ನ್ಯಾಯಾಧೀಶರನ್ನೊಳಗೊಂಡ ಪೀಠ, ಬೆಂಗಾವಲು ಮೇಲೆ ನಡೆದ ದಾಳಿಯಲ್ಲಿ ಒಂಬತ್ತು ಉಗ್ರರ ಕೈವಾಡವಿದ್ದದ್ದನ್ನು ಎತ್ತಿ ಹಿಡಿದು 9 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ, ಇಬ್ಬರನ್ನು ಖುಲಾಸೆಗೊಳಿಸಿದೆ.

ಈ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾದ ತಾಲಿಬಾನ್ ಕಮಾಂಡರ್ ನೆಕ್ ಮೊಹಮ್ಮದ್ ನನ್ನು 2004 ರಲ್ಲಿ ಉತ್ತರ ವಾಜಿರಿಸ್ತಾನದಲ್ಲಿ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಕೊಂದು ಹಾಕಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.