ETV Bharat / bharat

ಅಸ್ಸೋಂ: ಕೋವಿಡ್ ಗೆದ್ದ 40ಕ್ಕೂ ಹೆಚ್ಚು ಪೊಲೀಸರಿಂದ ಪ್ಲಾಸ್ಮಾ ದಾನ - ರಾಷ್ಟ್ರೀಯ ಆರೋಗ್ಯ ಮಿಷನ್

ಕರ್ತವ್ಯದ ಜೊತೆಗೆ ಕೋವಿಡ್​ನಿಂದ ಚೇತರಿಸಿಕೊಂಡ 43 ಮಂದಿ ಅಸ್ಸೋಂ ಪೊಲೀಸ್ ಸಿಬ್ಬಂದಿ ಈಗ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನ ಮಾಡಿದ್ದಾರೆ.

Assam cops donate plasma
ಕೋವಿಡ್ ಗೆದ್ದ 40ಕ್ಕೂ ಹೆಚ್ಚು ಅಸ್ಸಾಂ ಪೊಲೀಸರಿಂದ ಪ್ಲಾಸ್ಮಾ ದಾನ..
author img

By

Published : Aug 2, 2020, 8:17 AM IST

ಗುವಾಹಟಿ (ಅಸ್ಸೋಂ): ರಾಜ್ಯ ಆರೋಗ್ಯ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಸಹಯೋಗದೊಂದಿಗೆ ಅಸ್ಸೋಂ ಪೊಲೀಸರು ಶನಿವಾರ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಶಿಬಿರವನ್ನು ಆಯೋಜಿಸಿದ್ದರು.

ಕೋವಿಡ್ ಗೆದ್ದ 40ಕ್ಕೂ ಹೆಚ್ಚು ಅಸ್ಸೋಂ ಪೊಲೀಸರಿಂದ ಪ್ಲಾಸ್ಮಾ ದಾನ..

ಕೋವಿಡ್​ನಿಂದ ಚೇತರಿಸಿಕೊಂಡ 43 ಮಂದಿ ಪೊಲೀಸ್ ಸಿಬ್ಬಂದಿ ಶಿಬಿರದಲ್ಲಿ ತಮ್ಮ ಪ್ಲಾಸ್ಮಾವನ್ನು ದಾನ ಮಾಡಿದರು. ಅಧಿಕೃತ ಮಾಹಿತಿಯ ಪ್ರಕಾರ, ಅಸ್ಸೋಂನ ಒಟ್ಟು 67 ಪೊಲೀಸ್​ ಸಿಬ್ಬಂದಿ ಕೋವಿಡ್​-19 ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾವನ್ನು ದಾನ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದರು. ಅವರಲ್ಲಿ 43 ಸಿಬ್ಬಂದಿಯು ಪ್ಲಾಸ್ಮಾ ದಾನಕ್ಕೆ ಅರ್ಹರಾಗಿದ್ದಾರೆ.

ಪ್ಲಾಸ್ಮಾ ದಾನ ಮಾಡಿದ ಪೊಲೀಸರನ್ನು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಆರೋಗ್ಯ ಇಲಾಖೆ ಪಿಜುಶ್ ಹಜಾರಿಕಾ, ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತಾ, ಎಡಿಜಿಪಿ ಹರ್ಮಿತ್ ಸಿಂಗ್, ಸಂಸದ ಗುಪ್ತಾ, ಗುವಾಹಟಿ ಪೊಲೀಸ್ ಆಯುಕ್ತರು ಮತ್ತು ಇತರ ಗಣ್ಯರು ಸನ್ಮಾನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.