ETV Bharat / bharat

ಅಯೋಧ್ಯೆಯಲ್ಲಿ ಟೈಟ್‌ ಸೆಕ್ಯೂರಿಟಿ: 3,500 ಪೊಲೀಸ್‌, 5 ಸಾವಿರ ಸಿಸಿಟಿವಿ ಅಳವಡಿಕೆ - ಆಗಸ್ಟ್​ 5

ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮದ ಸಲುವಾಗಿ ಅಯೋಧ್ಯೆಯಲ್ಲಿ ಪೊಲೀಸ್​ ಸರ್ಪಗಾವಲು ಹಾಕಲಾಗಿದೆ.

Ayodhya ceremony
Ayodhya ceremony
author img

By

Published : Aug 1, 2020, 10:59 PM IST

ಅಯೋಧ್ಯೆ (ಉತ್ತರಪ್ರದೇಶ): ಆಗಸ್ಟ್​​​ 5ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಅದಕ್ಕಾಗಿ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಅಯೋಧ್ಯೆಯಲ್ಲಿ ಇದೀಗ ಪೊಲೀಸ್​ ಸರ್ಪಗಾವಲು ಹಾಕಲಾಗಿದೆ. ಭದ್ರತೆಗಾಗಿ 3,500 ಪೊಲೀಸರ ನಿಯೋಜನೆ ಮಾಡಲಾಗಿದ್ದು, 5 ಸಾವಿರ ಸಿಸಿಟಿವಿ ಅಳವಡಿಸಲಾಗಿದೆ.

ಆಗಸ್ಟ್​ 5ರಂದು ನಡೆಯುವ ಐತಿಹಾಸಿಕ ಕಾರ್ಯಕ್ರಮದ ವೇಳೆ ಉಗ್ರರ ದಾಳಿ ಎಚ್ಚರಿಕೆಯ ಬಗ್ಗೆ ಈಗಾಗಲೇ ಗುಪ್ತಚರ ಇಲಾಖೆ ಸುಳಿವು ನೀಡಿದೆ. ಹೀಗಾಗಿ, ಹೆಚ್ಚಿನ ರೀತಿಯಲ್ಲಿ ಭದ್ರತೆ ಒದಗಿಸಲಾಗಿದೆ. ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್​ ಇಳಿಯುವ ಸ್ಥಳದಿಂದ ಸಾಂಕೇತ್​ ಮಹಾವಿದ್ಯಾಲಯದಿಂದ ರಾಮಜನ್ಮ ಭೂಮಿ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಈಗಾಗಲೇ ಸಂಪೂರ್ಣವಾಗಿ ಜನ ಸಂಚಾರ ನಿಷೇಧ ಮಾಡಲಾಗಿದೆ. ಜನ ಸಂಚಾರದ ಮೇಲೆ ನಿಗಾ ಇಡುವ ಉದ್ದೇಶದಿಂದ ದ್ರೋಣ್‌ ಕ್ಯಾಮೆರಾ ಬಳಕೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ರಾಮಕೋಟ್​​ ನಿವಾಸಿಗಳಿಗೆ ಪಾಸ್​ ವಿತರಣೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮೋದಿ ಹೊರತಾಗಿ, ಅಮಿತ್​ ಶಾ, ರಾಜನಾಥ್​ ಸಿಂಗ್​, ಉದ್ಧವ್​ ಠಾಕ್ರೆ, ಉಮಾ ಭಾರತಿ ಸೇರಿದಂತೆ 300ಕ್ಕೂ ಹೆಚ್ಚು ಗಣ್ಯರು ಭಾಗಿಯಾಗುತ್ತಿರುವ ಕಾರಣ ಅಯೋಧ್ಯೆ ಪೊಲೀಸ್​ ಸರ್ಪಗಾವಲಿನಲ್ಲಿರಲಿದೆ. ಆಗಸ್ಟ್​ 15ರವರೆಗೂ ಈ ಪೊಲೀಸ್​ ಭದ್ರತೆ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.

ಹೋಟೆಲ್​, ಲಾಡ್ಜ್​, ಗೆಸ್ಟ್​ ಹೌಸ್​​​ಗಳ ಮೇಲೆ ಸಂಪೂರ್ಣವಾಗಿ ನಿಗಾ ಇಡಲಾಗಿದ್ದು, ಟ್ರಾಫಿಕ್​​ ಆಗದಂತೆ ನೋಡಿಕೊಳ್ಳಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಅಯೋಧ್ಯೆ ಎಸ್​ಎಸ್​ಪಿ ದೀಪಕ್​ ಕುಮಾರ್​ ತಿಳಿಸಿದ್ದಾರೆ. ಕೋವಿಡ್​ ಅಬ್ಬರ ಜೋರಾಗಿರುವ ಕಾರಣ ಐದಕ್ಕಿಂತಲೂ ಅಧಿಕ ಜನರು ಒಂದೇ ಸ್ಥಳದಲ್ಲಿ ಸೇರದಂತೆ ಎಚ್ಚರಿಕೆ ನೀಡಲಾಗಿದ್ದು, ಆಗಸ್ಟ್​ 2ರಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ರಾಮ ಮಂದಿರ ಭೂಮಿ ಪೂಜೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.