ETV Bharat / bharat

ಯುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ಪಿಎಫ್​ಐ ಜೊತೆ ಗುರ್ತಿಸಿಕೊಂಡಿದ್ದ 108 ಆರೋಪಿಗಳು ಅಂದರ್​ - 108 ಪಿಎಫ್​ಐ ಕಾರ್ಯಕರ್ತರ ಬಂಧನ

ಸಿಎಎ ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಕಾರಣವಾದ ಆರೋಪದಲ್ಲಿ ಪಿಎಫ್​ಐ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ 108 ಮಂದಿಯನ್ನ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

Over 100 people linked with PFI arrested,108 ಪಿಎಫ್​ಐ ಕಾರ್ಯಕರ್ತರ ಬಂಧನ
108 ಪಿಎಫ್​ಐ ಕಾರ್ಯಕರ್ತರ ಬಂಧನ
author img

By

Published : Feb 3, 2020, 4:53 PM IST

ಲಖನೌ (ಉತ್ತರ ಪ್ರದೇಶ): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಕಾರಣವಾದ ಆರೋಪದಡಿ ಪಿಎಫ್​ಐ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ 108 ಮಂದಿಯನ್ನ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಪಿಎಫ್​ಐ ಜೊತೆ ಗುರ್ತಿಸಿಕೊಂಡಿದ್ದ ಆರೋಪ: ಉತ್ತರ ಪ್ರದೇಶದಲ್ಲಿ 108 ಜನರ ಬಂಧನ

ಈ ಹಿಂದೆ 25 ಜನರನ್ನ ಬಂದಿಸಲಾಗಿತ್ತು. ಇದೀಗ ಕಳೆದ ನಾಲ್ಕು ದಿನಗಳಲ್ಲಿ ಮತ್ತೆ ಕೆಲವರನ್ನ ಬಂಧಿಸಿದ್ದು 4 ದಿನದಲ್ಲಿ ಒಟ್ಟು 108 ಜನರನ್ನ ಬಂಧಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕೆ. ಅವಸ್ಥಿ ತಿಳಿಸಿದ್ದಾರೆ. ಅವರ ಆರ್ಥಿಕ ವ್ಯವಹಾರ ಸೇರಿದಂತೆ, ಸಂಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ. ಕೇಂದ್ರದ ಏಜೆನ್ಸಿಗಳ ಸಹಾಯ ಕೂಡ ಪಡೆದುಕೊಳ್ಳಲಾಗುತ್ತಿದೆ. ಪಿಎಫ್​ಐ ಸಂಘಟನೆ ಜೊತೆ ಗುರ್ತಿಸಿಕೊಂಡಿರುವವರನ್ನ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದು ನಮ್ಮ ಉದ್ದೇಶ ಎಂದಿದ್ದಾರೆ.

ಲಖನೌನಲ್ಲಿ 14 ಮಂದಿ, ಸೀತಾಪುರ್​ 3, ಮೀರತ್​ 21, ಗಾಜಿಯಾಬಾದ್ 3, ಮುಜಾಫರ್​ ನಗರ 6, ಶಮ್ಲಿಯಲ್ಲಿ 7, ಬಿಜ್ನೋರ್ 4, ವಾರಣಾಸಿಯಲ್ಲಿ 20, ಕಾನ್ಪುರ 5, ಬಹ್ರೆಚ್​ನಲ್ಲಿ 16, ಗೊಂಡ, ಹಾಪುರ್ ಮತ್ತು ಜೌನ್​ಪುರ್​ನಲ್ಲಿ ತಲಾ ಓರ್ವರನ್ನ ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಮಧ್ಯಂತರ ಡಿಜಿಪಿ ಹಿತೇಶ್ ಚಂದ್ರ ಅವಸ್ಥಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.