ನವದೆಹಲಿ: ಅವಧಿ ಮುಗಿದರೂ ರಾಜಧಾನಿ ದೆಹಲಿಯ ಸರ್ಕಾರಿ ಬಂಗಲೆ ಖಾಲಿ ಮಾಡದ ಮಾಜಿ ಸಂಸದರಿಗೆ ಶಾಕ್ ಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹೊಸ ಸಂಸದರಿಗೆ ಅವಕಾಶ ಕೊಡದೆ ಇನ್ನೂ ಅದೇ ಬಂಗಲೆಯಲ್ಲಿ ಉಳಿದಿರುವ ಮಾಜಿ ಸಂಸದರಿಗೆ 1 ವಾರ ಗಡುವ ಕೊಟ್ಟಿರುವ ಸಂಸದೀಯ ಸಮಿತಿಯು, ನಂತರ ನೀರು ಹಾಗೂ ವಿದ್ಯುತ್ ಪೂರೈಕೆ ಮಾಡುವುದನ್ನು ನಿಲ್ಲಿಸಲು ತೀರ್ಮಾನ ಕೈಗೊಂಡಿದೆ.
ಸಂಸದೀಯ ಸಮಿತಿಯು ಸೋಮವಾರವಷ್ಟೇ ಈ ತೀರ್ಮಾನ ಕೈಗೊಂಡಿದೆ.
ನಾವು 300 ಸಂಸದರಿಗೆ ಬಂಗಲೆಯನ್ನು ನೀಡಿದ್ದೇವೆ, ಆದರೆ, ಮಾಜಿ ಸಂಸದರು ಖಾಲಿ ಮಾಡದೆ ಅಲ್ಲಿಯೇ ವಾಸಿಸುತ್ತಿರುವುದರಿಂದ 1 ವಾರ ಕಾದು ನೋಡುತ್ತೇವೆ. ಖಾಲಿ ಮಾಡದೇ ಇದ್ದಲ್ಲಿ ನೀರು, ವಿದ್ಯುತ್ ಪೂರೈಕೆ ನಿಲ್ಲಿಸಲು ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಸಮಿತಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ತಿಳಿಸಿದ್ದಾರೆ.