ETV Bharat / bharat

‘ಭಯೋತ್ಪಾದನೆ, ಹಗೆತನವಿಲ್ಲದ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ’

ಪಾಕಿಸ್ತಾನ ವಾಯುಪಡೆಯ ಕೆಡೆಟ್‌ಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಜನರಲ್ ಬಜ್ವಾ, ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯ ಆದರ್ಶಕ್ಕೆ ಪಾಕಿಸ್ತಾನ ದೃಢವಾಗಿ ಬದ್ಧವಾಗಿದೆ. ಎಲ್ಲಾ ದಿಕ್ಕುಗಳಲ್ಲಿಯೂ ಶಾಂತಿಯ ಕೈಯನ್ನು ವಿಸ್ತರಿಸುವ ಸಮಯ ಇದು..

author img

By

Published : Feb 5, 2021, 11:12 AM IST

Anurag Srivastava
ಅನುರಾಗ್ ಶ್ರೀವಾಸ್ತವ

ನವದೆಹಲಿ : ಎಲ್ಲಾ ದಿಕ್ಕುಗಳಲ್ಲಿಯೂ ಶಾಂತಿ ವಿಸ್ತರಿಸುವ ಸಮಯ ಬಂದಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಹೇಳಿಕೆ ಬೆನ್ನಲ್ಲೇ ಭಯೋತ್ಪಾದನೆ ಮತ್ತು ಹಗೆತನವಿಲ್ಲದ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ.

ಬಜ್ವಾ ಅವರ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅನುರಾಗ್ ಶ್ರೀವಾಸ್ತವ, ನಮ್ಮ ಸ್ಥಾನವು ಎಲ್ಲರಿಗೂ ತಿಳಿದಿದೆ. ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರವಿಲ್ಲದ ವಾತಾವರಣದಲ್ಲಿ ಪಾಕಿಸ್ತಾನದೊಂದಿಗಿನ ಸಾಮಾನ್ಯ ನೆರೆಯ ಸಂಬಂಧವನ್ನು ಭಾರತ ಬಯಸುತ್ತದೆ ಎಂದು ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.

ಇದನ್ನೂ ಓದಿ: ಬಿನ್​​ ಲಾಡೆನ್​ನಿಂದ ಹಣ ಪಡೆಯಲಾಗ್ತಿತ್ತು ಅಂತಾ ಒಪ್ಪಿಕೊಂಡ ನವಾಜ್ ಷರೀಫ್ ಪಕ್ಷ

ಪಾಕಿಸ್ತಾನ ವಾಯುಪಡೆಯ ಕೆಡೆಟ್‌ಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಜನರಲ್ ಬಜ್ವಾ, ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯ ಆದರ್ಶಕ್ಕೆ ಪಾಕಿಸ್ತಾನ ದೃಢವಾಗಿ ಬದ್ಧವಾಗಿದೆ. ಎಲ್ಲಾ ದಿಕ್ಕುಗಳಲ್ಲಿಯೂ ಶಾಂತಿಯ ಕೈಯನ್ನು ವಿಸ್ತರಿಸುವ ಸಮಯ ಇದು ಎಂದು ಹೇಳಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.